ಮೊಬೈಲ್ ನಲ್ಲಿ ಮಾತನಾಡುತ್ತ ಕಾಲು ಜಾರಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿದ್ದರೂ ಕಾಲ್ ಕಂಟಿನ್ಯೂ! ಯಾರದಿರಬಹುದು ಆ ಕಾಲ್?

ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ವಿಡಿಯೋಗಳು ವೈರಲ್ ಆಗುವುದು ಹೊಸದೇನಲ್ಲ. ಕುಸ್ತಿಯಲ್ಲಿ ‘ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬ ನಾಣ್ಣುಡಿ ಎಲ್ಲರಿಗೂ ಗೊತ್ತೇ ಇದೆ. ಸೇಮ್ ಟು ಸೇಮ್ ಇದೇ ರೀತಿಯ ಒಂದು ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೋಡಿ ಏನದು?

ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ, ವ್ಯಕ್ತಿಯೊಬ್ಬ ಸ್ವಿಮಿಂಗ್ ಪೂಲ್ ಹತ್ತಿರದಿಂದ ತುಂಬಾ ಕೂಲ್ ಆಗಿ ಯಾರ ಜೊತೆಗೋ ಮೊಬೈಲ್ ನಲ್ಲಿ ಮಾತನಾಡುತ್ತಾ ನಡೆದಿದ್ದಾನೆ. ಅಷ್ಟರಲ್ಲಿ ಆತನ ಕಾಲು ಎಡ್ಜ್ ಮೇಲೆ ಕುಳಿತಿದ್ದರಿಂದ ಬ್ಯಾಲೆನ್ಸ್ ತಪ್ಪಿ ಕಾಲು ಜಾರಿ ಪೂಲ್ ಕಡೆಗೆ ಬೀಳುತ್ತಾನೆ. ಹಾಗೂ ಹೀಗೂ ವ್ಯಕ್ತಿ ಬ್ಯಾಲೆನ್ಸ್ ಮಾಡಿಕೊಂಡು ಸಂಪೂರ್ಣವಾಗಿ ನೀರಿನಲ್ಲಿ ಬೀಳುವುದರಿಂದ ಬಚಾವಾಗುತ್ತಾನೆ. ಆದರೆ ಇಲ್ಲಿ ನೋಟಿಸ್ ಮಾಡಬಹುದಂತ ಮುಖ್ಯ ವಿಷಯ ಏನೆಂದರೆ, ಫೋನ್ನಲ್ಲಿ ಮಾತನಾಡುವುದು ಆತ ನಿಲ್ಲಿಸುವುದಿಲ್ಲ. ಅದು ಸ್ವಲ್ಪವೂ ಡಿಸ್ಕನೆಕ್ಟ್ ಆಗದೆ ಹಾಗೆ ಚಾಲೂ ಇರುತ್ತದೆ. ಆತ ನೀರಿನಲ್ಲಿ ಬಿದ್ದರೂ ಬ್ಯಾಲೆನ್ಸ್ ಮಾಡಿಕೊಂಡು ಏನು ಆಗದವರಂತೆ ಅದೇ ಪೂಲ್ ನ ಕಟ್ಟೆಯ ಮೇಲೆ ಕೂಲ್ ಆಗಿ ಕುಳಿತು ಫೋನ್ ನಲ್ಲಿ ಚರ್ಚೆ ಹಾಗೆಯೇ ಮುಂದುವರಿಸುತ್ತಾನೆ. ಇದರ ಮೇಲಿಂದ ಆ ಫೋನ್ ಕಾಲ್ ಯಾರದಿರಬಹುದು ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿದೆ.

ವಿಡಿಯೋ ನೋಡಿ

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಐಪಿಎಸ್ ಆಫೀಸರ್ ಆದ ದಿಪಾಂಶು ಕಾಬರಾ ಅವರು ಶೇರ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 5 ಲಕ್ಷಕ್ಕೂ ಮೀರಿ ವೀಕ್ಷಣೆಯನ್ನು ಪಡೆದಿದೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ವಿವಿಧ ರೀತಿಯ ತಮಾಷೆಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ತಮ್ಮ ಕಮೆಂಟನಲ್ಲಿ ಕೆಲವರು ಹೆಂಡತಿಯ ಫೋನ್ ಇರಬಹುದು ಎಂದರೆ ಇನ್ನೂ ಕೆಲವರು ಬಾಸ್ ನ ಕಾಲ್ ಇದ್ದಿರಬಹುದೆಂದು ಅಂದಾಜು ಕಟ್ಟುತ್ತಿದ್ದಾರೆ. ಫ್ರೆಂಡ್ಸ್ ನಿಮಗೇನನ್ನಿಸುತ್ತೆ ಅದು ಯಾರ ಕಾಲ್ ಇರಬಹುದು.