ಮದುವೆಯಲ್ಲಿ ಓವರ್ ಆಕ್ಟ್ ಮಾಡುತ್ತ ಕೊಡುತ್ತಿದ್ದ ಬಿಲ್ಡಪ್; ಅಷ್ಟರಲ್ಲಿ ಕುದುರೆ ತೋರಿಸಿತು ಒಂದು ಸಖತ್ ಕೈ (ಅಲ್ಲ ಕಾಲು).

ಮದುವೆಯಲ್ಲಿ ನಡೆದ ವಿಚಿತ್ರ ಪ್ರಸಂಗಗಳ ವಿಡಿಯೋಗಳು ನೋಡಲು ತುಂಬಾ ತಮಾಷೆಯಾಗಿರುತ್ತವೆ. ಹೀಗಾಗಿ ಈ ವಿಡಿಯೋಗಳು ನೋಡುಗರಿಗೆ ತುಂಬಾ ಇಷ್ಟವಾಗುತ್ತವೆ. ಮದುವೆಯ ಮೆರವಣಿಗೆಯಲ್ಲಿ ಯುವಕನೊಬ್ಬ ತುಂಬಾ ಬಿಲ್ಡಪ್ ಕೊಡುತ್ತಿದ್ದ. ಆಗ ಕುದುರೆಯೊಂದು ಆತನ ಮೇಲೆ ವಕ್ರ ದೃಷ್ಟಿ ಬೀರಿದೆ. ಹೀಗಾಗಿ ಯುವಕನಿಗೆ ಅದು ತುಂಬಾ ದುಬಾರಿಯಾಗಿದೆ. ಅಷ್ಟಕ್ಕೂ ಅಲ್ಲಿ ಏನು ನಡೆದಿದೆ ನೋಡಿ.

ಮದುವೆಯ ಮೆರವಣಿಗೆಯಲ್ಲಿ ಯುವಕನೊಬ್ಬ ಥಳಥಳಿಸುವ ಹೊಸ ಬಟ್ಟೆಗಳನ್ನು ತೊಟ್ಟು ಕೊರಳಲ್ಲಿ ಕೇಸರಿ ಬಣ್ಣದ ಶಲ್ಯ ಧರಿಸಿ ಜೋಶ್ ನಿಂದ ಎಲ್ಲರೆದುರು ಕುಣಿದೇ ಕುಣಿಯುತ್ತಿದ್ದಾನೆ. ಹೀಗೆ ಡಾನ್ಸ್ ಮಾಡುತ್ತ ಮಾಡುತ್ತ ಗೊತ್ತಿಲ್ಲದೆ ಕುದುರೆಯ ಹಿಂದೆ ಹೋಗಿದ್ದಾನೆ. ಈತನ ವಿಚಿತ್ರ ಡಾನ್ಸ್ ಮತ್ತು ಆತ ಮಾಡುವ ಮಂಗಚೇಷ್ಟೇಯು ಹಿಂದೆ ನಿಂತಿರುವ ಕುದುರೆಗೆ ಯಾಕೋ ಸರಿ ಬಂದಿಲ್ಲ. ಮತ್ತೇನು ಕುದುರೆ ಸರಿಯಾಗಿ ಪೊಸಿಷನ್ ಮಾಡಿಕೊಂಡು ಎರಡು ಕಾಲುಗಳನ್ನು ಏಕಕಾಲಕ್ಕೆ ಹವೆಯಲ್ಲಿ ಹಾರಿಸಿ ಯುವಕನ ಬೆನ್ನಿಗೆ ಬಲವಾದ ಬ್ಯಾಕ್ ಕಿಕ್ ನೀಡಿದೆ. ಕುದುರೆಯ ಸಖತ್ ಒದೆತಕ್ಕೆ ಯುವಕ ಕ್ಷಣದಲ್ಲಿ ಭೂಮಿಯ ಮೇಲೆ ಅಪ್ಪಳಿಸಿ ಬಿದ್ದಿದ್ದಾನೆ.

ವಿಡಿಯೋ ನೋಡಿ

ಈ ವಿಡಿಯೋ ಇನ್ಸ್ಟಾ ಗ್ರಾಮ್ ನಲ್ಲಿ iam_a_dreamer_5 ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದ್ದು ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. ಹಾಗೂ ಸುಮಾರು 9 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಕಾಮೆಂಟ್ ಮಾಡಿದ್ದಾರೆ.