ತಾಯಿ ಸಾಲದ ಹೊರೆಯಲ್ಲಿ; ಏಜೆಂಟ್ ಮೇಲಿಂದ ಮೇಲೆ ಮನೆಗೆ ವಿಸಿಟ್ ಮಾಡುತ್ತಲೇ ಬಿದ್ದನು ಮಗಳ ಪ್ರೀತಿಯಲ್ಲಿ; ಮುಂದೇನು?

ಈಗಿನ ಕಾಲದಲ್ಲಿ ಬ್ಯಾಂಕುಗಳು ತುಂಬಾ ದಿಲ್ದಾರ್ ಆಗಿವೆ. ಸಿವಿಲ್ ಸ್ಕೋರ್ ಒಳ್ಳೆಯದಿದ್ದರೆ ಲೋನ್ ನೀಡಲು ಹಿಂದೆ ಮುಂದೆ ನೋಡುವುದಿಲ್ಲ. ಹೀಗಾಗಿ ಜನರೂ ಸಹ ಲೋನ್ ತೆಗೆಯಲು ಹಿಂದೆ ಮುಂದೆ ನೋಡುವುದಿಲ್ಲ. ಇನ್ನು ತೆಗೆದುಕೊಂಡ ಲೋನ್ ವಾಪಸ್ ಮುಟ್ಟಿಸಲು ಕೆಲವರಿಗೆ ನಂತರ ತುಂಬಾ ಕಷ್ಟವಾಗುತ್ತದೆ. ಅಥವಾ ತುಂಬದೇ ಹಾಗೆಯೇ ಬಿಡುತ್ತಾರೆ. ಇಂಥ ಸಂದರ್ಭದಲ್ಲಿ ರಿಕವರಿ ಏಜೆಂಟ್ ಗಳು ಮೇಲಿಂದ ಮೇಲೆ ಮನೆಗೆ ವಿಸಿಟ್ ನೀಡುತ್ತಾರೆ. ಹೀಗೆ ಮನೆಗೆ ವಿಸಿಟ್ ನೀಡಲು ಹೋಗಿ ಏಜೆಂಟನು ಮನೆ ಮಗಳ ಪ್ರೀತಿಯಲ್ಲಿ ಬಿದ್ದ ಕಥೆಯೊಂದು ಬೇರೆಯೇ ಆಗಿದೆ. ಏನದು ನೋಡೋಣ ಬನ್ನಿ …

ಪ್ರಸ್ತುತ ಘಟನೆ ಜಾರ್ಖಂಡ್ ನಲ್ಲಿಂದ ವರದಿಯಾಗಿದೆ. ಹುಡುಗಿಯ ತಾಯಿ ಸಾಲ ತೆಗೆದುಕೊಂಡಿದ್ದಳು. ಆ ಸಾಲವನ್ನು ತೀರಿಸದೆ ಹಾಗೆಯೇ ಮುಂದೆ ಮುಂದೆ ಹಾಕುತ್ತಿದ್ದಳು. ಹೀಗಾಗಿ ರಿಕವರಿ ಏಜೆಂಟ್ ಅಮರ ಕುಮಾರ್ ಮೇಲಿಂದ ಮೇಲೆ ಮನೆಗೆ ವಿಸಿಟ್ ನೀಡುತ್ತಿದ್ದ. ಹಾಗೂ ಸಾಲವನ್ನು ಮರುಪಾವತಿಸಲು ಮಹಿಳೆಗೆ ಪ್ರೆಶರ್ ಹಾಕುತ್ತಿದ್ದ. ರಿಕವರಿ ಏಜೆಂಟ್ ಅಮರ್ ಕುಮಾರ್ ಮೇಲಿಂದ ಮೇಲೆ ಮನೆಗೆ ಬಂದು ಹೋಗುವುದರಿಂದ ಸಾಲಗಾರ ಮಹಿಳೆಯ ಮಗಳಾದ ಋತು ಮತ್ತು ಅಮರ್ ಕುಮಾರ್ ಇವರಿಬ್ಬರಲ್ಲಿ ಪ್ರೀತಿ ಅಂಕುರವಾಯಿತು. ಮುಂದೆ ಇಬ್ಬರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸತೊಡಗಿದರು. ಕೊನೆಗೆ ಇಬ್ಬರೂ ಇಷ್ಟೊಂದು ಪ್ರೀತಿಸತೊಡಗಿದರೆಂದರೆ ಋತು ಮನೆಯನ್ನು ಮತ್ತು ತಾಯಿಯನ್ನು ಬಿಟ್ಟು ಅಮರ್ ಕುಮಾರ್ ಜೊತೆ ಓಡಿ ಹೋಗಿ ಇಬ್ಬರು ಒಂದಾಗಿರತೊಡಗಿದರು. ಹೀಗೆ ಇಬ್ಬರು ಕಳೆದ ಆರು ತಿಂಗಳಗಳಿಂದ ಕೂಡಿ ಇರುತ್ತಿದ್ದರು. ಆದರೆ ಅಮರ್ ಕುಮಾರ ಒಮ್ಮೆಲೇ ತನ್ನ ಇಚ್ಛೆಯನ್ನು ಬದಲಾಯಿಸಿ ಆಕೆಯನ್ನು ನಿರಾಕರಿಸಿದನು.

ಆಗ ಋತು ಮಾತ್ರ ನೇರ ಪೊಲೀಸ್ ಸ್ಟೇಷನ್ ಮೆಟ್ಟಿಲು ಏರಿದಳು. ಅಮರ್ ಕುಮಾರ್ ವಿರುದ್ಧ ಋತುಗೆ ಕೇಸ್ ದಾಖಲಿಸುವದಿತ್ತು. ಆದರೆ ಪೊಲೀಸರು ಮಧ್ಯ ಪ್ರವೇಶಿಸಿ ಇಬ್ಬರಿಗೂ ಸಮಜಾಯಿಸಿ ನೀಡಿ ಇಬ್ಬರ ಮದುವೆಯನ್ನು ನೆರವೇರಿಸಿದರು. ಇಬ್ಬರ ಮದುವೆ ಪೊಲೀಸರ ಉಪಸ್ಥಿತಿಯಲ್ಲಿ ನಡೆದ ನಂತರ ಇಬ್ಬರು ಕೂಡಿ ಮತ್ತೆ ಮನೆಗೆ ಮರಳಿದರು.