ದೂಧ್ ಸಾಗರ ಜಲಪಾತದ ಹತ್ತಿರದಿಂದ ಹೋಗುತ್ತಿರುವ ಟ್ರೇನಿನ ಅದ್ಭುತ, ಅಮೋಘ ದೃಶ್ಯ ಸೆರೆ! ವಿಡಿಯೋ ವೈರಲ್…
ಮಳೆಗಾಲ ಶುರುವಾದರೆ ಸಾಕು ನಿಸರ್ಗ ತನ್ನ ನೈಸರ್ಗಿಕ ಅದ್ಭುತ ಚೆಲುವನ್ನು ತೋರಿಸಲು ಪ್ರಾರಂಭಿಸುತ್ತದೆ. ಪ್ರವಾಸಿ ತಾಣಗಳಂತೂ ನಿಸರ್ಗ ಪ್ರೇಮಿಗಳಿಗೆ ಕೈ ಬೀಸಿ ಕರೆಯುತ್ತವೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದೂಧ್ ಸಾಗರ ಜಲಪಾತದ ಕಣ್ಣು ಕೋರೈಸುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋ ನಿಸರ್ಗ ಪ್ರೇಮಿಗಳ ಮನಸನ್ನು ತನ್ನೆಡೆಗೆ ಸಹಜವಾಗಿ ಸೆಳೆಯುತ್ತಿದೆ.
ಗೋವಾದಲ್ಲಿ ಇರುವ ಈ ದೂಧ್ ಸಾಗರ ಜಲಪಾತ ಮತ್ತು ಅದರ ತೀರಾ ಹತ್ತಿರದಿಂದಲೇ ಹೋಗುತ್ತಿರುವ ಟ್ರೇನಿನ ದೃಶ್ಯ ನೋಡಲು ತುಂಬಾ ಅದ್ಭುತವಾಗಿದೆ. ಈ ಜಲಪಾತದ ನೀರು ಬೆಳ್ಳಗೆ ಹಾಲಿನಂತೆ ಕಂಡು ಬರುತ್ತದೆ. ಇದೇ ಕಾರಣದಿಂದ ಈ ಜಲಪಾತಕ್ಕೆ ದೂಧ್ ಸಾಗರ್ ಎಂದು ಹೆಸರು ಬಿದ್ದಿದೆ. ಈ ಜಲಪಾತದ ಮಗ್ಗುಲಲ್ಲಿಯೇ ರೈಲಿನ ಟ್ರ್ಯಾಕ್ ಹಾಯ್ದು ಹೋಗಿದೆ. ಮೇಲಿನಿಂದ ಬಿದ್ದ ನೀರು ಕೆಳಗೆ ಕಟ್ಟಿದ ಸೇತುವೆಯ ಮುಖಾಂತರ ಹರಿದು ಹೋಗುತ್ತದೆ. ಈ ಸೇತುವೆಯ ಮೇಲಿಂದ ಹಾಯ್ದು ಹೋಗುತ್ತಿರುವ ರೈಲಿನ ದೃಶ್ಯ ಜಲಪಾತದೊಂದಿಗೆ ತುಂಬಾ ನಯನ ಮನೋಹರವಾಗಿ ಕಂಡು ಬರುತ್ತಿದೆ.
ನೋಡಿ ಈ ವಿಡಿಯೋ…
Some journeys are just like dreams ! ❤️
The spectacular Dudhsagar Falls, Goa, Bharat 🇮🇳 pic.twitter.com/dOXtIM9nAy
— Ankita (@AnkitaBnsl) July 20, 2022
ಪ್ರಸ್ತುತ ವಿಡಿಯೋವನ್ನು ಟ್ವಿಟರ್ ನಲ್ಲಿ @AnkitaBnsl ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 13 ಲಕ್ಷಕ್ಕೂ ಮೀರಿ ವೀಕ್ಷಣೆ ಪಡೆದಿದೆ. ಜೊತೆಗೆ 40 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.