Video; ನೀರಿನಲ್ಲಿ ಬಿದ್ದ ಬೆಕ್ಕಿನ ಜೀವ ಉಳಿಸಿದ ನಾಯಿ..! ನಾಯಿ ಮಾಡಿದ ಕೆಲಸಕ್ಕೆ ಮಾರು ಹೋದ ನೆಟ್ಟಿಗರು.
ಇತ್ತೀಚಿನ ದಿನಗಳಲ್ಲಿ ಮನುಷ್ಯನ ಹೊರತಾಗಿ ಉಳಿದ ಪ್ರಾಣಿಗಳಲ್ಲಿಯೇ ಮಾನವೀಯತೆ ಹೆಚ್ಚಾಗಿ ಕಂಡು ಬರುತ್ತಿದೆ ಎಂದರೆ ತಪ್ಪಾಗಲಾರದು. ಬೆಕ್ಕು ಮತ್ತು ನಾಯಿಯ ವೈರತ್ವವನ್ನೇ ನಾವು ಹೆಚ್ಚಾಗಿ ನೋಡಿದ್ದೇವೆ. ಆದರೆ ಈ ವಿಡಿಯೋದಲ್ಲಿ ಬೆಕ್ಕಿಗಾಗಿ ನಾಯಿಯು ತನ್ನ ಜೀವದ ಪರಿವೆಯೇ ಮಾಡದೇ ಅದರ ಜೀವ ಉಳಿಸಲು ಪ್ರಯತ್ನಿಸಿದೆ. ಮತ್ತು ನೇಟಿಜನ್ಸ್ ಗಳ ಮನ ಗೆದ್ದಿದೆ.
ಪ್ರಸ್ತುತ ವಿಡಿಯೋದಲ್ಲಿ ಬೆಕ್ಕು ನೀರಿನಲ್ಲಿ ಬಿದ್ದಿದೆ. ಅದಕ್ಕೆ ಮೇಲಕ್ಕೆ ಬರಲಾಗದೆ ಮಗ್ಗುಲಲ್ಲಿಯೇ ಇದ್ದ ಪ್ಲಾಸ್ಟಿಕ್ ಬಾಕ್ಸ್ ನ ಆಧಾರ ತೆಗೆದುಕೊಂಡು ಹೇಗೋ ನೀರಿನಲ್ಲಿ ನಿಂತಿದೆ. ಇದನ್ನು ಗಮನಿಸಿದ ನಾಯಿಯು ಬೆಕ್ಕಿಗೆ ಹೇಗಾದರೂ ಮಾಡಿ ಮೇಲೆ ತೆಗೆಯಬೇಕೆಂದು ಪ್ರಯತ್ನ ಮಾಡುತ್ತಿದೆ. ಆ ಸಂದರ್ಭದಲ್ಲಿ ನಾಯಿಯು ಬೇರೆ ದಾರಿ ಕಾಣದೆ ನೇರ ನೀರಿನಲ್ಲಿ ಧುಮುಕಿ ಬಿಡುತ್ತದೆ. ಮತ್ತು ಬೆಕ್ಕಿಗೆ ತನ್ನ ಹೆಗಲ ಮೇಲೆ ಏರಿಸಿಕೊಂಡು ದಡಕ್ಕೆ ಏರಿಸಿ ಬಿಡುವಲ್ಲಿ ಸಫಲವಾಗುತ್ತದೆ. ನಂತರ ತಾನು ಪ್ರಯತ್ನ ಮಾಡಿ ಮೇಲೆ ಏರಿ ಬಿಡುತ್ತದೆ.
ವಿಡಿಯೋ ನೋಡಿ
Rescue operation by dog.. pic.twitter.com/P1jHf7sx5E
— Dr.Samrat Gowda IFS (@IfsSamrat) July 22, 2022
ಈ ಸುಂದರವಾದ ವಿಡಿಯೋ ಟ್ವಿಟರ್ ನಲ್ಲಿ IFS ಆಫೀಸರ್ ಆದ ಸಾಮ್ರಾಟ್ ಗೌಡ್ ಅವರು ಶೇರ್ ಮಾಡಿ ಅದಕ್ಕೆ ರೆಸ್ಕ್ಯೂ ಆಪರೇಶನ್ ಬಾಯ್ ಡಾಗ್ ಎಂದು ಕ್ಯಾಪ್ಶನ್ ನೀಡಿದ್ದಾರೆ.