ಕನ್ನಡದ ಈ ಪ್ರಸಿದ್ಧ ನಟಿ ‘ಯೋಗಾ’ ಮಾಡುತ್ತಿರುವ ವಿಡಿಯೋ ತುಂಬಾ ವೈರಲ್ ಆಗುತ್ತಿದೆ…ವಿಡಿಯೋ ನೋಡಿ!

ಇಂದಿನ ಯಾಂತ್ರಿಕ ಜೀವನ, ಆತಂತ್ರಜೀವನ ಶೈಲಿಗೆ ಸುಸೂತ್ರತೆ ತರುವ ನಿಟ್ಟಿನಲ್ಲಿ ಯೋಗ-ಆಸನ ಪ್ರಾಣಾಯಾಮಗಳು ಮುಖ್ಯ ಪಾತ್ರವಾಹಿಸುತ್ತವೆ. ಆಡುವ ವಯಸ್ಸಿನ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಒತ್ತಡದ ಬಲೆಯಲ್ಲಿ ಓಡಾಡುವ ಬಿಡುವಿಲ್ಲದ ಮನಸ್ಸು, ಶರೀರ ಒದ್ದಾಡುತ್ತಿದೆ. ಆದ್ದರಿಂದ ದೇಹ ಬಲಿಶಾಲಿಯಾಗಿರಬೇಕು. ಮನಸ್ಸನ್ನು ಹಗುರವಾಗಿಡಲು, ಆತ್ಮಬಲವನ್ನು ಗಟ್ಟಿಮುಟ್ಟು ಮಾಡಲು ಯೋಗಾಸನ, ಪ್ರಾಣಾಯಾಮದ ಸಾಧನೆಯನ್ನು ಪ್ರತಿನಿತ್ಯಮಾಡುವದು ಅವಶ್ಯಕವಾಗಿದೆ.

ಯೋಗಾಸನಕ್ಕೆ ಇಂದು ಇಡೀ ಜಗತ್ತಿನಾದ್ಯಂತ ಮಹತ್ವವನ್ನು ಕೊಡುತ್ತಿದ್ದಾರೆ. ಅಷ್ಟೇ ಏಕೆ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿವಸ ಎಂದು ಆಚರಿಸಲಾಗುತ್ತಿದೆ. ನಮ್ಮ ದೇಶದ ಯೋಗಗುರು ರಾಮದೇವ ಬಾಬಾ ಅವರು ಇಡೀ ದೇಶಕ್ಕೆ ಯೋಗ ಹೇಳಿ ಕೊಡುವ ಕಾರ್ಯ ಮಾಡಿದ್ದಾರೆ. ಯೋಗ ಮಾಡುವದರಿಂದ ನಮ್ಮ ಶರೀರಕ್ಕೆ ಅನೇಕ ಲಾಭಗಳು ದೊರೆಯುತ್ತವೆ ಅಲ್ಲದೆ ಶರೀರ ಸದೃಢವಾಗಿಡಲು ಸಹಾಯ ವಾಗುತ್ತದೆ.

ಇಂದು ಪ್ರತಿಯೊಬ್ಬರು ಯೋಗ ಕಲಿಯಲು ಬಯಸುತ್ತಾರೆ ಯೋಗದಿಂದ ತಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಈ ಯೋಗಾಸನದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ಒಬ್ಬ ಪ್ರಸಿದ್ಧ ನಟಿ ತಾನು ಯೋಗಾಸನ ಮಾಡಿರುವ ವಿಡಿಯೋ ಸ್ವತಃ ತಾನೇ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾಳೆ. ಹೀಗಾಗಿ ಈ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಈ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯೋಗಾಸನ ಮಾಡುತ್ತಿರುವ ಕನ್ನಡದ ನಟಿ ಯಾರೆಂದರೆ, ಸುಮಾರು 2013 ರಿಂದ 20220 ರವರೆಗೆ ಪ್ರತಿಯೊಂದು ಮನೆಯಲ್ಲಿಯ ಹೆಣ್ಣುಮಕ್ಕಳ ಬಾಯಿಯಲ್ಲಿ ಸದಾ ಹರಿದಾಡುತ್ತಿದ್ದ ಧಾರಾವಾಹಿ ಎಂದರೆ ಅದು ‘ಅಗ್ನಿಸಾಕ್ಷಿ’ ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿ ಸನ್ನಿಧಿ ಎಂಬ ಹೆಸರು ಪಡೆದುಕೊಂಡಿರುವ ವ್ಯಕ್ತಿ ಎಂದರೆ ವೈಷ್ಣವಿ ಗೌಡಾ. ಕಳೆದ ಬಿಗ್ ಬಾಸ್ ಸೀಜನ್ ನಲ್ಲಿ ಸಹ ಇವರು ಸಹಭಾಗಿ ಯಾಗಿ ಕನ್ನಡ ಜನರಿಗೆ ಮನೋರಂಜನೆ ನೀಡಿದ್ದಾರೆ.

ವೈಷ್ಣವಿ ಅವರ ಶರೀರ ನೋಡಿದರೆ ನಮಗೆ ಗೊತ್ತಾಗುತ್ತೆ ಅವರು ಎಷ್ಟೊಂದು ಫಿಟ್ ಇದ್ದಾರೆ ಅಂತ. ಆ ಫಿಟ್ನೆಸ್ ಹಿಂದೆ ಅವರ ಪಡುತ್ತಿರುವ ಶ್ರಮ ತುಂಬಾ ದೊಡ್ಡದು. ಇಂದಿನ ಪ್ರತಿಯೊಬ್ಬ ವ್ಯಕ್ತಿ ತಾನು ಫಿಟ್ ಆಗಿರಬೇಕೆಂದು ಬಯಸುತ್ತಾನೆ. ಆದರೆ ಅದಕ್ಕೆ ಬೇಕಾಗುವ ಶ್ರಮ ಮಾತ್ರ ಮಾಡಲು ತಯಾರಿರುವದಿಲ್ಲ. ಹೀಗಾಗಿ ಬರೆ ಮಾತಿಗೆ ಮಾತ್ರ ನಾನು ಫಿಟ್ನೆಸ್ ಕಾಪಾಡಿಕೊಳ್ಳಬೇಕು ಎಂದರೆ ಸಾಲದು ಅದಕ್ಕಾಗಿ ಕಷ್ಟಪಟ್ಟು ಯೋಗಾಸನ, ವ್ಯಾಯಾಮ,ಡಯಟ್ ಮಾಡುವದು ತುಂಬಾ ಮುಖ್ಯ.

ಸದ್ಯಕ್ಕೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವೈಷ್ಣವಿ ಅವರು ಯೋಗಾಸನ ಮಾಡುತ್ತಿರುವ ಪರಿ ನೋಡಿದರೆ ಆಶ್ಚರ್ಯವಾಗುತ್ತೆ ಏಕೆಂದರೆ ಅವರ ಶರೀರ ಅಷ್ಟೊಂದು ಫ್ಲೆಕ್ಸಿಬಲ್ ಆಗಿದೆಯಾ ಅಂತ ನಮ್ಮಷ್ಟಕ್ಕೆ ನಾವೇ ಪ್ರಶ್ನೆ ಹಾಕಿ ಕೊಳ್ಳುತ್ತೇವೆ. ಅವರು ಯೋಗಾಸನ ಮಾಡುತ್ತಿರುವಾಗ ಅವರ ಶರೀರ ರಬ್ಬರ ಬ್ಯಾಂಡ್ ನಂತೆ ಬೇಕಾದ ದಿಕ್ಕೆಗೆ ಧಾರಾಳವಾಗಿ ಮೂವ ಮಾಡುತ್ತಿದ್ದಾರೆ. ಅವರ ಫಿಟ್ನೆಸ್ ಗೆ ಇದೊಂದು ಮುಖ್ಯ ಕಾರಣ ಯೋಗಾಸನ ವಿರಬಹುದು.

ವಿಡಿಯೋ ನೋಡಿ.

 

View this post on Instagram

 

A post shared by Vaishnavi (@iamvaishnavioffl)

ಈ ವಿಡಿಯೋವನ್ನು ವೈಷ್ಣವಿ ಗೌಡಾ ಸ್ವತಃ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಶೇರ್ ಮಾಡಿದ್ದಾರೆ. ಇದುವರೆಗೆ ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ. ಅಲ್ಲದೆ ಅವರ ಈ ಯೋಗಾಸನ ಮಾಡುವ ಪರಿಯನ್ನು ಕಂಡು ಅವರನ್ನು ತುಂಬಾ ಹೊಗಳುತ್ತಿದ್ದಾರೆ.