Video; ಕುಳಿತ ಹಸುಗಳಿಗೆ ಸುಮ್ಮನೆ ಕಿರುಕುಳ ನೀಡಿದಾಗ ಮೂಳೆಯೂ ಮುರಿಯುತ್ತೆ ಅಂತ ಗೊತ್ತಿರಲಿಲ್ಲ ಯುವಕನಿಗೆ..!

ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಚಿಕ್ಕ ಪುಟ್ಟ ವಿಷಯಗಳು ದೊಡ್ಡದಾಗಿ ಬಿಡುತ್ತವೆ. ಮತ್ತು ಬಹು ಬೇಗನೆ ವೈರಲ್ ಆಗಿ ಬಿಡುತ್ತವೆ. ಈ ವಿಡಿಯೋಗಳಿಂದ ಕೆಲವೊಮ್ಮೆ ಒಳ್ಳೆಯ ಪಾಠವೂ ಕೂಡ ಕಲಿಯಲು ಸಿಗುತ್ತದೆ. ಇಂಥದ್ದೇ ಒಂದು ಸುಂದರ ವಿಡಿಯೋ ಸದ್ಯ ಇಂಟರ್ನೆಟ್ ನಲ್ಲಿ ನೋಡಲು ಸಿಗುತ್ತಿದೆ.

ಪ್ರಸ್ತುತ ಈ ವಿಡಿಯೋದಲ್ಲಿ ಇಬ್ಬರೂ ಪಡ್ಡೆ ಹುಡುಗರು ಶೋಲೆ ಚಿತ್ರದ ‘ಎ ದೊಸತಿ ಹಮ್ ನಹಿ ಚೋಡೆಂಗೆ’ ಎಂದು ಗುನಗುನಾಯಿಸುತ್ತ ರಸ್ತೆ ಮೇಲೆ ಸುಮ್ಮನೆ ಕುಳಿತ ಹಸುಗಳನ್ನು ಕೆಣಕುತ್ತ ಅವುಗಳಿಗೆ ನೋವು ನೀಡುತ್ತಾ ಅವುಗಳ ಜೊತೆಗೆ ಮಸ್ತಿ ಮಾಡುತ್ತಾ ಹೊರಟಿದ್ದಾರೆ. ಆದರೆ ಎಲ್ಲ ಹಸುಗಳು ಒಂದೇ ರೀತಿ ಇರಬೇಕಲ್ಲ? ಅಲ್ಲಿ ಕುಳಿತ ಕೆಲವು ಹಸುಗಳು ಕೆಣಕಿಸಿಕೊಂಡರೂ ಸುಮ್ಮನೆ ಕುಳಿತಿವೆ. ಎಲ್ಲ ಹಸುಗಳು ಸುಮ್ಮನೆ ಕುಳಿತುಕೊಳ್ಳುತ್ತವೆ ಎಂದು ತಿಳಿದು ಈ ಪಡ್ಡೆ ಹುಡುಗರೂ ಕೆಣಕುವ ಕೆಲಸವನ್ನು ಹಾಗೆಯೇ ಮುಂದುವರಿಸಿದ್ದಾರೆ. ನಂತರದ ಚಿತ್ರ ಮಾತ್ರ ಸಂಪೂರ್ಣವಾಗಿ ಭಿನ್ನವಾಗಿತ್ತು. ಅಲ್ಲಿ ಕುಳಿತ ಒಂದು ಬೇರೆ ಹಸು ತನ್ನ ನಿಜವಾದ ರೂಪ ತಾಳಿದೆ, ವ್ಯಕ್ತಿ ಅದರ ಹತ್ತಿರ ಹೋಗಿ ಇನ್ನೇನು ಕೆಣಕಬೇಕು ಎನ್ನುವಷ್ಟರಲ್ಲಿ ಹಸು ಜಂಪ್ ಮಾಡಿ ಯುವಕನಿಗೆ ಜೋರಾಗಿ ಒದೆ ನೀಡಿದೆ. ಯುವಕ ಕ್ಷಣದಲ್ಲಿ ಗಾಳಿಯಲ್ಲಿ ತೇಲಿ ಮುಗ್ಗುರಿಸಿ ಬಿದ್ದಿದ್ದಾನೆ. ಈ ಹೊಡೆತವನ್ನು ಆತ ಜೀವನದ ಏಳೇಳು ಜನ್ಮಗಳಲ್ಲಿಯೂ ನೆನಪಿಸಿ ಕೊಳ್ಳುತ್ತಾನೆ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋ ನೆಟ್ಟಿಗರಿಗೆ ತುಂಬಾನೇ ಇಷ್ಟವಾಗಿದೆ. ಮತ್ತು ಹಸು ಆ ದುಷ್ಟನಿಗೆ ಸರಿಯಾಗಿ ಪಾಠ ಕಲಿಸಿದೆ ಎನ್ನುತ್ತಿದ್ದಾರೆ. ‘ಮಾಡಿದ್ದುಣ್ಣೋ ಮಹಾರಾಯ’ ಎನ್ನುವ ಗಾದೆ ಆತನಿಗೆ ಪರಿಪೂರ್ಣವಾಗಿ ಜಜ್ ಆಗುತ್ತಿದೆ. ಈ ವೀಡಿಯೋವನ್ನು @Alphatoonist ಹೆಸರಿನಿಂದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ.