Viral Video: 5 ನೇ ಅಂತಸ್ತಿನಿಂದ ಕೆಳಗೆ ಬೀಳುತ್ತಿರುವ ಮಗುವನ್ನು ರಕ್ಷಿಸಲು ಬಂದ ಸೂಪರ್ ಮ್ಯಾನ್! ಮಗುವಿಗೆ ಕ್ಯಾಚ್ ಹಿಡಿದೇ ಬಿಟ್ಟ ನಿಟ್ಟುಸಿರು…
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮೈ ಕಂಪಿಸುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋ ಯುಟ್ಯೂಬ್ ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಜೋರಾಗಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಕಟ್ಟಡದ 5 ನೇ ಅಂತಸ್ತಿನಿಂದ ಕೆಳಗೆ ಬೀಳುತ್ತಿದೆ. ಆ ಮಗುವಿಗೆ ವ್ಯಕ್ತಿಯೊಬ್ಬ ಬಂದು ಸೂಪರ್ ಹೀರೋನ ಹಾಗೆ ರಕ್ಷಿಸಿದ್ದಾನೆ. ಈ ದೃಶ್ಯದ ವಿಡಿಯೋ ನೋಡುಗರ ಮೈಯಲ್ಲಿ ನಡುಕ ಉಂಟು ಮಾಡುತ್ತದೆ. ಈ ವಿಡಿಯೋದಲ್ಲಿ ಮಗು ಮೇಲಿಂದ ಕೆಳಗೆ ಬೀಳುವ ದೃಶ್ಯ ಕಂಡು ರಸ್ತೆಯ ಮೇಲಿನ ಜನರು ಸಹ ಭಯದಿಂದ ಕಾತುರರಾಗಿದ್ದಾರೆ. ಮುಂದೆ ಮಗುವಿಗೆ ಏನಾಗುತ್ತದೆ ಎಂಬ ಭಯ ಅವರಲ್ಲಿಯೂ ಹುಟ್ಟಿದೆ. ಆದರೆ ವ್ಯಕ್ತಿಯೊಬ್ಬ ಬಂದು ಮಗುವನ್ನು ರಕ್ಷಿಸಿದಾಗ ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಸ್ತುತ ಘಟನೆ ಚೀನಾದಿಂದ ವರದಿಯಾಗಿದೆ.
ದೃಶ್ಯದಲ್ಲಿ ಕಾಣುವ ಹಾಗೆ ಮಗು ಮೊದಲು ಒಂದನೆಯ ಅಂತಸ್ತಿನ ಮೇಲೆ ಬೀಳುತ್ತದೆ. ತದನಂತರ ಮಗು ಕೆಳಗೆ ಬೀಳುವಾಗ ವ್ಯಕ್ತಿ ಕೆಳಗೆ ನಿತು ಮಗುವಿಗೆ ಕ್ಯಾಚ್ ಮಾಡುತ್ತಾನೆ. ಆತನ ಜೊತೆಗೆ ಒಬ್ಬಳು ಮಹಿಳೆಯು ಇರುವದು ಕಂಡು ಬರುತ್ತಿದೆ. ವ್ಯಕ್ತಿಯ ಈ ಕೆಲಸಿಗೆ ನೆಟ್ಟಿಗರು ಮಾರು ಹೋಗಿ ಆತನಿಗಾಗಿ ಹೊಗಳಿಕೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಜನರು ತಮ್ಮ ಕಾಮೆಂಟ್ ನಲ್ಲಿ ಆತನನ್ನು ಸೂಪರ್ ಹೀರೋ ಎಂದು ವರ್ಣಿಸುತ್ತಿದ್ದಾರೆ. ಮಗುವಿಗೆ ನಂತರ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿದೆ. ಒಟ್ಟಿನಲ್ಲಿ ಮಗುವಿಗೆ ಯಾವುದೇ ರೀತಿಯ ಗಂಭೀರ ಗಾಯವಾಗಿಲ್ಲ ಎಂಬುದು ತಿಳಿದು ಬರುತ್ತದೆ. ಈ ವೀಡಿಯೋವನ್ನು South China Morning Post ಯುಟ್ಯೂಬ್ ಚಾನೆಲ್ ನಿಂದ ಶೇರ್ ಮಾಡಲಾಗಿದೆ. ವ್ಯಕ್ತಿ ಜೇಜಿಯಾಂಗ್ ಪ್ರಾಂತದವನಾಗಿದ್ದು ಆತನ ವಯಸ್ಸು 31 ಇದ್ದು ಹೆಸರು ಶೇನ್ ಡಾಂಗ್ ಎಂದು ತಿಳಿದು ಬಂದಿದೆ.
ವಿಡಿಯೋ ನೋಡಿ