Video; ಸೈಕಲ್ ಮೇಲಿಂದ ಬಿದ್ದ ಬಾಲಕ ಅಳುತ್ತಾನೆ, ಇಲ್ಲ ರೋಷ ತೋರುತ್ತಾನೆ ಅಲ್ವೇ? ಆದರಿಂಥ ಬಾಲಕ ನೀವೆಂದೂ ನೊಡಲಿಕ್ಕಿಲ್ಲ…

ಪುಟ್ಟ ಮಕ್ಕಳಿಗೆ ಸಂಬಂಧಿಸಿದ ವಿಡಿಯೋ ಅಥವಾ ಫೋಟೋಗಳನ್ನು ನೋಡಲು ಎಲ್ಲರಿಗೂ ಹಿಡಿಸುತ್ತದೆ. ಕಾರಣ ಅಲ್ಲಿ ನಾಟಕೀಯತೆ ಏನೂ ಇರುವುದಿಲ್ಲ. ಎಲ್ಲವೂ ವಾಸ್ತವ ಸತ್ಯವಾಗಿರುತ್ತದೆ. ಹೀಗಾಗಿ ಆ ನಿಷ್ಕಲ್ಮಶ ಭಾವಗಳು ಎಲ್ಲರಿಗೂ ಆಕರ್ಷಿಸುತ್ತವೆ. ಮಕ್ಕಳು ಸೈಕಲ್ ಕಲಿಯುವಾಗ ಅನೇಕ ಸಲ ಬ್ಯಾಲೆನ್ಸ್ ತಪ್ಪಿ ಬೀಳುವದುಂಟು, ಹೀಗೆ ಬಿದ್ದಾಗ ಪೋಷಕರು ಮಕ್ಕಳಿಗೆ ತುಂಬಾ ಕಾಳಜಿಯಿಂದ ಥಟ್ಟನೆ ಎಬ್ಬಿಸುತ್ತಾರೆ ಹಾಗೂ ಎಲ್ಲಿ ಬಡಿದಿದೆ ಎಂದು ಒಂದೇ ಸವನೆ ಕೇಳುವದುಂಟು. ಈಗಿನ ಮಕ್ಕಳು ಸಹ ಚಿಕ್ಕ ಪುಟ್ಟ ಗಾಯಗಳಿಗೆ ತುಂಬಾ ರಾದ್ಧಾಂತ್ ಮಾಡುತ್ತಾರೆ. ಆದರೀ ವಿಡಿಯೋದಲ್ಲಿ ನಿಮಗೆ ತುಂಬಾ ವಿರುದ್ಧವಾದ ಬೇರೆಯೇ ದೃಶ್ಯ ಕಾಣಿಸಲಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪುಟ್ಟ ಬಾಲಕ ಸೈಕಲ್ ನಡೆಸಲು ಕಲಿಯುತ್ತಿರುವಾಗ ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳುತ್ತಾನೆ. ನಾವಂದುಕೊಂಡಂತೆ ಆತ ಅಳುವದೂ ಇಲ್ಲ ಅಥವಾ ರೋಷವೂ ವ್ಯಕ್ತ ಮಾಡುವದಿಲ್ಲ, ಬದಲಾಗಿ ತುಂಬಾ ಜಾಲಿ ಮೂಡ್ ನಲ್ಲಿ ಒಂದು ಒಳ್ಳೆಯ ಸ್ಟೆಪ್ ಹಾಕಲು ಮುಂದಾಗುತ್ತಾನೆ. ಹುಡುಗ ಬಿದ್ದ ನಂತರ ನೀಡಿದ ರಿಯಾಕ್ಷನ್ ನ ಈ ವಿಡಿಯೋ ನೆಟ್ಟಿಗರ ಮನವನ್ನು ಚೆನ್ನಾಗಿಯೇ ಗೆದ್ದಿದೆ. ಈ ಬಾಲಕ ಹೆಚ್ಚೆಂದರೆ 3 ವರ್ಷದವನಿರಬೇಕು ಅಷ್ಟೇ. ಆತ ಬಿದ್ದಾಗ ಆ ಸಮಯದಲ್ಲಿ ತನ್ನೊಂದಿಗೆ ಸ್ಪಂದಿಸಿದ ಬಗೆ ನೋಡಿದರೆ ನಿಜಕ್ಕೂ ದೊಡ್ಡ ಮನಸ್ಸನ್ನು ಹೊಂದಿದವನಾಗಿದ್ದಾನೆ ಎಂದು ಸ್ಪಷ್ಟವಾಗಿ ಕಂಡು ಬರುತ್ತದೆ. ಚಿಕ್ಕ ಹುಡುಗನಾಗಿದ್ದರೂ ನಿರಾಶೆಯ ಮೇಲೆ ಆತ ಜಯಗಳಿಸುವಲ್ಲಿ ಸರಿಯಾಗಿ ಯಶಸ್ವಿಯಾಗಿದ್ದಾನೆ ಎಂದೇ ಹೇಳಬಹುದು.

ವಿಡಿಯೋ ನೋಡಿ

ಈ ಪ್ರೇರಣೆ ನೀಡುವ ಸುಂದರವಾದ ವಿಡಿಯೋ ಟ್ವಿಟರ್ ನಲ್ಲಿ ಸುಶಾಂತ್ ನಂದಾ ಅವರು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 7 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ವಿಕ್ಷಿಸಲಾಗಿದೆ. ಹಾಗೂ ಸುಮಾರು 2.5 ಲಕ್ಷ ಜನರು ಲೈಕ್ ಮಾಡಿದ್ದಾರೆ. ಕೊನೆಯಲ್ಲಿ ಹೇಳುವದಿಷ್ಟೆ ಗೆದ್ದಾಗ ಎಲ್ಲರೂ ನಗೆ ಬೀರುತ್ತಾರೆ, ಸೋತಾಗ ನಗೆ ಬಿರುವುದೇ ದೊಡ್ಡ ಗೆಲುವು ಎಂದು ಪುಟ್ಟ ಬಾಲಕ ತನ್ನ ಸರಳ ಸಹಜವಾದ ಕೃತಿಯಿಂದ ತೋರಿಸಿದ್ದಾನೆ ಎನಿಸುತ್ತದೆ.