VIDEO : DK ಹೆಸರಿನಿಂದ ಚುಡಾಯಿಸುತ್ತಿದ್ದರು ಮುರಳಿ ವಿಜಯ್ ಗೆ! ಸ್ಟ್ಯಾಂಡ್ ನಲ್ಲಿ ಹೊಕ್ಕು ಕೈ ಕೈ ಗೆ ಇಳಿದ ಮುರಳಿ ವಿಜಯ್!

ತಮಿಳುನಾಡು ಪ್ರೀಮಿಯರ್ ಲೀಗ್ 2022 ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದೆ. ಭಾರತ ತಂಡದ ಒಂದು ಸಮಯದ ಪ್ರಾರಂಭಿಕ ಸ್ಟಾರ್ ಆಟಗಾರ ಮುರಳಿ ವಿಜಯ್ ಜುಲೈ 24ರ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಯ ಜೊತೆಗೆ ನೇರ ಜಗಳಕ್ಕೆ ಇಳಿದಿದ್ದಾರೆ. ಅಂದು ಮಧುರೈ ಪ್ಯಾಂಥರ್ಸ್ ವಿರುದ್ಧ ರೂಬಿ ತ್ರಿಚಿವಾರಿಯರ್ಸ್ ಪಂದ್ಯ ನಡೆದಿತ್ತು.

ಪ್ಯಾಂಥರ್ಸ್ ತಂಡ ಈ ಪಂದ್ಯದಲ್ಲಿ ರುಬಿ ತ್ರಿಚಿ ವಾರಿಯರ್ಸ್ಗೆ 36 ರನ್ ಗಳಿಂದ ಸೋಲಿಸಿತು. ಈ ಪಂದ್ಯವು ಕ್ರಿಕೆಟ್ ಗಿಂತ ಬೇರೆ ಕಾರಣಕ್ಕಾಗಿ ಹೆಚ್ಚು ಪ್ರಸಿದ್ಧಿ ಪಡೆಯಿತು. ಸದ್ಯ ವರಿಯರ್ ತಂಡದ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೇಗದಿಂದ ವೈರಲ್ ಆಗುತ್ತಿದೆ. ಈ ಪಂದ್ಯದಲ್ಲಿ ಮುರಳಿ ವಿಜಯ್ ಪ್ಲೇಯಿಂಗ್ 11ನಲ್ಲಿ ಇರಲಿಲ್ಲ. ಆದರೆ ಕೆಲವೇ ನಿಮಿಷಗಳಿಗಾಗಿ ಅವರು ಮೈದಾನದಲ್ಲಿ ಫೀಲ್ಡಿಂಗ್ ಮಾಡುವ ಸಲುವಾಗಿ ಉಪಸ್ಥಿತರಾಗಿದ್ದರು.

ಅವರ ಫೀಲ್ಡಿಂಗ್ ಗಾಗಿ ಬಂದಾಗಲೇ ಮೈದಾನದಲ್ಲಿ ಒಂದು ಇನ್ಸಿಡೆಂಟ್ ನಡೆಯಿತು. ಮುರಳಿ ಅವರು ಒಂದು ಕಾರಣಕ್ಕಾಗಿ ಅಭಿಮಾನಿಯ ಮೇಲೆ ಸಿಟ್ಟಾಗಿ ಮೈದಾನದ ಹೊರಗೆ ಸ್ಟ್ಯಾಂಡ್ ನಲ್ಲಿ ಬಂದು ಗದ್ದಲ ಮಾಡಿದ್ದಾರೆ. ಅದಕ್ಕೆ ಕಾರಣ ಮುರಳಿ ವಿಜಯ್ ಅವರಿಗೆ ಕ್ರಿಕೆಟ್ ಅಭಿಮಾನಿಯೊಬ್ಬ ದಿನೇಶ್ ಕಾರ್ತಿಕ್ ಹೆಸರಿನಿಂದ ಚುಡಾಯಿಸುತ್ತಿದ್ದನು. ತಮ್ಮ ಖಾಸಗಿ ಜೀವನದ ಬಗ್ಗೆ ಟೀಕೆ ಮಾಡಿದ್ದಕ್ಕಾಗಿ ಮುರಳಿ ವಿಜಯ್ ತುಂಬಾ ಸಿಟ್ಟಾಗಿದ್ದರು. ಈ ಸಂದರ್ಭದಲ್ಲಿ ಮುರಳಿ ವಿಜಯ್ ಆ ಕ್ರಿಕೆಟ್ ಅಭಿಮಾನಿಯ ಹತ್ತಿರ ಹೋಗಿ ಮೊದಲು ಮಾತನಾಡಿದ್ದಾರೆ, ನಂತರ ಇಬ್ಬರು ವಾದಕ್ಕೆ ಇಳಿದು ಜಗಳ ಕೈ ಕೈಗೆ ಬಂದಿದೆ. ವಿಶೇಷವೆಂದರೆ ಮುರಳಿ ವಿಜಯ್ ತುಂಬಾ ದಿನಗಳ ನಂತರ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಡಿಯೋ ನೋಡಿ