Video; ಸೊಕ್ಕಿದ ಒಂಟಿಸಲಗ ಕೊಚ್ಚಿ ಹಾಕಲು ಬರುತ್ತಿದ್ದರೂ ಕದಲದೆ ನಿಂತ ಇಬ್ಬರು ವ್ಯಕ್ತಿಗಳು; ನಂತರದ ಅದ್ಭುತ ದೃಶ್ಯ ನೋಡುವಂತಿದೆ..!

ಆನೆ ಕಾಡುಪ್ರಾಣಿಯಾದರೂ ಇದನ್ನು ಹೆಚ್ಚಾಗಿ ಮೃದು ಪ್ರಾಣಿ ಎಂದೇ ತಿಳಿಯಲಾಗುತ್ತದೆ. ಇದು ಯಾರ ಮೇಲೂ ಸುಮ್ಮನೆ ಅಥವಾ ಕಾರಣವಿಲ್ಲದೆ ದಾಳಿ ಮಾಡುವುದಿಲ್ಲ. ಸದ್ಯ ಇಂಟರ್ನೆಟ್ ನಲ್ಲಿ ಸೊಕ್ಕಿದ ಒಂಟಿ ಸಲಗದ ವಿಡಿಯೋ ಒಂದು ತೂಫಾನ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮದವೇರಿದ ಆನೆಯು ಹಟಾತ್ ಇಬ್ಬರ ಮೇಲೆ ಹಲ್ಲೆ ಮಾಡಲು ಓಡೋಡಿ ಬರುತ್ತಿದೆ. ಈ ಸಂದರ್ಭದಲ್ಲಿ ನಡೆದ ಒಂದು ಅದ್ಭುತ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಇದೇ ವಿಡಿಯೋವನ್ನು ನಾವಿಲ್ಲಿ ನೋಡುವವರಿದ್ದೇವೆ.

ಪ್ರಸ್ತುತ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಕಾಡಿನಲ್ಲಿ ನಿಂತಿದ್ದಾರೆ. ಈ ಸಂದರ್ಭದಲ್ಲಿ ಅವರ ಮುಂದಿನಿಂದ ಬೃಹತ್ ಗಾತ್ರದ ದೊಡ್ಡ ಆನೆಯೊಂದು ಹೋಗುತ್ತಿರುತ್ತದೆ. ಆನೆಯು ಇವರಿಬ್ಬರನ್ನು ನೋಡುತ್ತಲೇ ಹಲ್ಲೆ ಮಾಡುವ ರೀತಿಯಲ್ಲಿ ಇವರ ಕಡೆಗೆ ನುಗ್ಗಿ ಬರುತ್ತದೆ. ಆಗ ಅಲ್ಲಿ ಇರುವ ಇಬ್ಬರು ವ್ಯಕ್ತಿಗಳು ತಮ್ಮ ಜಾಗದಿಂದ ಸ್ವಲ್ಪವೂ ಕದಲದೇ ನಿಂತಲ್ಲಿಯೇ ನಿಲ್ಲುತ್ತಾರೆ. ವಿಡಿಯೋ ನೋಡುವಾಗ ಸಹಜವಾಗಿಯೇ ಸ್ವಲ್ಪ ಭಯ ಹುಟ್ಟುತ್ತದೆ. ಕಾರಣ ಮುಂದೆ ಏನಾಗುತ್ತದೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಆದರೆ ಅಲ್ಲಿ ನಾವು ಆಶಿಸಿದಂತೆ ಯಾವುದೇ ರೀತಿಯ ಇನ್ಸಿಡೆಂಟ್ ಆಗುವುದಿಲ್ಲ. ಬದಲಾಗಿ ಏರಿ ಬರುತ್ತಿರುವ ಮದುವೇರಿದ ಆನೆ ಇವರಿಬ್ಬರ ಹತ್ತಿರ ಬರುತ್ತಿದ್ದಂತೆಯೇ ನಿಂತುಬಿಡುತ್ತದೆ. ಹಾಗೂ ಇಬ್ಬರನ್ನು ಹೆದರಿಸಲು ಪ್ರಯತ್ನಿಸುತ್ತದೆ. ಈ ಪ್ರಯತ್ನದಲ್ಲಿ ಆನೆಯು ಯಶಸ್ವಿಯಾಗುವುದಿಲ್ಲ. ಇಬ್ಬರೂ ಮಿತ್ರರು ಮಾತ್ರ ಹಾಗೆಯೇ ದೃಢವಾಗಿ ಮತ್ತು ಶಾಂತವಾದ ರೀತಿಯಲ್ಲಿ ನಿಲ್ಲುತ್ತಾರೆ. ಕೊನೆಗೆ ಆನೆಯೇ ಹಿಂದೆ ಸರಿಯುತ್ತದೆ.

ನೋಡಿ ಈ ವಿಡಿಯೋ…

ವೈರಲ್ ಆಗುತ್ತಿರುವ ಈ ವಿಡಿಯೋವನ್ನು Figen ಹೆಸರಿನ ಟ್ವಿಟರ್ ಯೂಸರ್ ನೊಬ್ಬ ಶೇರ್ ಮಾಡಿದ್ದಾನೆ. ಈ ವಿಡಿಯೋದ ಜೊತೆಗೆ ಕ್ಯಾಪ್ಷನ್ ನಲ್ಲಿ Not panicking is the best self-defense method! ( ಹೆದರದೆ ಇರುವುದು ಆತ್ಮ ರಕ್ಷಣೆಯ ಎಲ್ಲಕ್ಕೂ ಒಳ್ಳೆಯ ಸಾಧನವಾಗಿದೆ ಎಂದಿದ್ದಾನೆ. ಈ ವಿಡಿಯೋ ಪೋಸ್ಟ್ ಮಾಡಿದ ನಂತರ ಇಲ್ಲಿಯವರೆಗೆ ಎರಡು ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ. ವಿಡಿಯೋ ನೋಡಿದ ನಂತರ ಕೆಲವರು ಕಮೆಂಟ್ ಸೆಕ್ಷನ್ ನಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅದರಲ್ಲಿ ಒಬ್ಬನು ಆನೆಯು ವ್ಯಕ್ತಿಯ ಕೈಯಲ್ಲಿರುವ ಗನ್ ನೋಡಿ ಹಿಂದೆ ಸರಿದಿದೆ ಎಂದರೆ, ಇನ್ನೊಬ್ಬ ಇವರು ತುಂಬಾ ಬಹದ್ದೂರ್ ಇದ್ದಾರೆ ಎಂದಿದ್ದಾನೆ.