ಎಂಥ ಕಾಲ ಬಂತಪ್ಪಾ!🤭 ಗೋಣಿ ಚೀಲವು ಸಹ ಬಿಡಲ್ವಲ್ಲ ಈ ಮಹಾರಾಯತಿ, ವಿಡಿಯೋ ನೋಡಿ!!

ಸದ್ಯಕ್ಕೆ ಯಾರು ಏನು ಮಾಡಿ ಜನರ ಗಮನವನ್ನು ಸೆಳೆಯುತ್ತಾರೆ ಅಂತ ಹೇಳೋಕೆ ಸಾಧ್ಯವಿಲ್ಲ. ಏಕೆಂದರೆ ಇಂದು ಪ್ರತಿಯೊಬ್ಬರಿಗೂ ಸೋಷಿಯಲ್ ಮಿಡಿಯಾದಲ್ಲಿ ಹಿಟ್ ಆಗಬೇಕು ಹಾಗೂ ಪ್ರತಿಯೊಬ್ಬರ ಲಕ್ಷ ತನ್ನ ಕಡೆಗೆ ಮಾಡಿಕೊಳ್ಳಬೇಕು ಎಂಬ ಹುಚ್ಚು ಹಿಡಿದಿದೆ ಹೀಗಾಗಿ ತಮಗೆ ಅರಿವೇ ಇಲ್ಲದೆ ಏನೇನೋ ವಿಚಿತ್ರವಾದ ವೀಡಿಯೋ ಅಥವಾ ರೀಲ್ಸ್ ಮಾಡಿ ಅದನ್ನು ಸೋಶಿಯಲ್ ಮಿಡಿಯಾದಲ್ಲಿ ಹರಿಬಿಡುತ್ತಾರೆ. ಇಂದಿನ ಯಾಂತ್ರಿಕ ಯುಗದಿಂದಾಗಿ ಪ್ರತಿಯೊಬ್ಬರ ಹತ್ತಿರ ಅಂದರೆ ಹತ್ತು ವರ್ಷದ ಮಕ್ಕಳಿಂದ ತೊಂಬತ್ತು ವಯಸ್ಸಿನ ವೃದ್ಧರವರೆಗೆ ಮೊಬೈಲ್ ಇದೆ.

ಒಂದು ಹೊತ್ತಿನ ಊಟ ಇರದಿದ್ದರೂ ಪರವಾಗಿಲ್ಲ ಆದರೆ ಮೊದಲು ಮೊಬೈಲ್ ಬೇಕೇ ಬೇಕು. ಈ ಮೊಬೈಲ್ ನಿಂದಾಗಿ ನಮಗೆ ಕೆಲವು ಲಾಭದ ಜೊತೆಗೆ ಕೆಲವು ಹಾನಿಗಳು ಸಹ ಇವೆ. ಎನಿವೇ ಎಂಬುದು ಹೇಳೋ ಅವಶ್ಯಕತೆ ಇಲ್ಲ ಏಕೆಂದರೆ ನೀವೆಲ್ಲ ತುಂಬಾ ಬುದ್ಧಿವಂತರು ಹಾಗಾಗಿ ಇದರ ಕುರಿತು ಮೊದಲೇ ನಿಮಗೆ ಗೊತ್ತೇ ಇರುತ್ತೆ. ಸೋಶಿಯಲ್ ಮೀಡಿಯಾದಿಂದ ಇಂದು ಏನೆಲ್ಲ ಮಾಡುತ್ತಾರೆ ಎಂಬುದು ನಾವು ನೋಡುತ್ತಾ ಇದ್ದೇವೆ. ಆದರೆ ಇಂದಿನ ಹೊಸ ಟ್ರೆಂಡ್ ಎಂದರೆ ರೀಲ್ಸ್ ಮಾಡುವದು ಅಂದರೆ ಕೇವಲ ಸೆಕೆಂಡ್ ಗಳ ಸಮಯದ ವರೆಗೆ ಮಾತ್ರ ವಿಡಿಯೋ ಮಾಡುವದು. ತದನಂತರ ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಶೇರ್ ಮಾಡುವದು.

ಹಲವಾರು ತಿಂಗಳಿಂದ ತಮ್ಮ ವಿಚಿತ್ರ ಉಡುಪುಗಳನ್ನು ಧರಿಸುವ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಸದಾ ಚರ್ಚೆಯಲ್ಲಿರುವ ಉರ್ಫಿ ಜಾವೇದ ಸದ್ಯಕ್ಕೆ ಮತ್ತೊಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹೀಗಾಗಿ ಈ ವಿಡಿಯೋ ಸದ್ಯಕ್ಕೆ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಹ ಉರ್ಫಿ ಯವರು ತಮ್ಮ ವಿಚಿತ್ರವಾದ ಉಡುಗೆ ತೊಡುವ ಮೂಲಕ ಕಾಣಿಸಿಕೊಂಡಿದ್ದಾರೆ. ಆದರೆ ಆ ಬಾರಿ ಮಾತ್ರ ಅವರು ತಮ್ಮ ಹದ್ದನ್ನು ಪಾರು ಮಾಡಿದ್ದಾರೆ. ಅಂದರೆ ಅವರು ಈ ಬಾರಿ ಉಟ್ಟಿರುವ ಉಡುಪು ಬಟ್ಟೆಯಿಂದ ತಯಾರಿಸಿದ ಉಡುಪು ಅಲ್ಲ ಹೊರತಾಗಿ ಗೋಣಿ ಚೀಲದ ಉಡುಪು ಇದಾಗಿದೆ. ಮೊದಲು ಗೋಣಿ ಚೀಲವನ್ನು ತೋರಿಸಿ ತದನಂತರ ಅದನ್ನು ತಮಗೆ ತಕ್ಕ ಹಾಗೆ ಕಟ್ ಮಾಡಿ ಡ್ರೆಸ್ ಹಾಗೆ ತೊಟ್ಟುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟು ವಿಡಿಯೋ ಮಾಡಿದ್ದಾರೆ. ಇದನ್ನು ಕಂಡು ನೆಟ್ಟಿಗರು. ಅಯ್ಯೋ ಎಂಥ ಕಾಲ ಬಂತಪ್ಪಾ ಈ ವಯ್ಯಾರಿ ಗೋಣಿ ಚೀಲಕ್ಕೂ ಸಹ ಬಿಡಲಿಲ್ಲ ಅಂತ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಮತ್ತೊಬ್ಬ ನೆಟ್ಟಿಗ, ‘ಗೋಣಿ ಚೀಲ ತುಂಬಾ ಲಕಿ ಇದೆ’ ಎಂದು ಕಾಮೆಂಟ್ ಮಾಡಿದ್ದಾನೆ.

ನೋಡಿ ವಿಡಿಯೋ…..

 

View this post on Instagram

 

A post shared by Filmygyan Telly (@filmygyantelly)