ಪೃಥ್ವಿಯ ತಿರುಗುತ್ತಿಲ್ಲ ಓಡುತ್ತಿದೆ; 24 ಗಂಟೆಗಳಲ್ಲಿಯ ವೇಗ ನೋಡಿ ವೈಜ್ಞಾನಿಕರ ದಿಕ್ಕು ತಪ್ಪಿದೆ! ಇದರಿಂದಾಗುವ ಪರಿಣಾಮಗಳೇನು? ನೋಡಿ…

Earth Spinning Faster 2022 : ವೈಜ್ಞಾನಿಕರ ಪ್ರಕಾರ ಪೃಥ್ವಿ ಸ್ವಂತದ ಒಂದು ಸುತ್ತನ್ನು ಹಾಕಿಕೊಳ್ಳಲು 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೀಗ ಪೃಥ್ವಿಯು ಅದೇ ಸುತ್ತನ್ನು ಹಾಕಿಕೊಳ್ಳಲು 24 ಗಂಟೆಗಳಿಗಿಂತಗೂ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತಿದೆ. ಹೀಗಾಗಿ ಎಲ್ಲರ ಚಿಂತೆ ಮಾತ್ರ ಹೆಚ್ಚಾಗುತ್ತಿದೆ. ಹೀಗಾಗಲು ಏನು ಕಾರಣ? ಮತ್ತು ಇದರ ಪರಿಣಾಮ ಏನಾಗಲಿದೆ? ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವದು ಮಹತ್ವದ್ದಾಗಿದೆ.

ಪೃಥ್ವಿಯು ತನ್ನ ಅಕ್ಷದ ಸುತ್ತಲೂ ತಿರುಗುವ ವೇಗ ಹೆಚ್ಚಾಗುತ್ತಿದೆ. ಕಾರಣ ಜುಲೈ 19 ರಂದು ಎಲ್ಲಕ್ಕೂ ಚಿಕ್ಕ ದಿವಸ ಎಂದು ದಾಖಲೆಯಾಗಿದೆ. ಈ ದಿನ ಪೃಥ್ವಿಯು ತನ್ನ ಒಂದು ಸುತ್ತು ಪೂರ್ಣ ಗೊಳಿಸಲು 24 ಗಂಟೆಗಳಲ್ಲಿ 1 ನಿಮಿಷ 59 ಸೆಕೆಂಡು ಕಡಿಮೆ ಸಮಯ ತೆಗೆದುಕೊಂಡಿತು.

ದ ಇಂಡಿಪೆಂಡೆಂಟ್ ರಿಪೋರ್ಟ್ ಪ್ರಕಾರ, ಪೃಥ್ವಿಯ ವೇಗ ಇತ್ತೀಚೆಗೆ ಹೆಚ್ಚುತ್ತಲಿದೆ. 2020 ಈ ವರ್ಷ 1960 ರ ನಂತರದ ಪೃಥ್ವಿಯ ಎಲ್ಲಕ್ಕೂ ಚಿಕ್ಕ ವರ್ಷ ಎಂದು ತಿಳಿಯಲಾಯಿತು. ಅದರಲ್ಲೂ ಜುಲೈ 19 ಎಲ್ಲಕ್ಕೂ ಚಿಕ್ಕ ದಿವಸವೆಂದು ಪರಿಗಣಿಸಲಾಯಿತು.

ಈಗ 2021 ರಲ್ಲಿಯೂ ಪೃಥ್ವಿಯ ತಿರುಗುವ ವೇಗ ಹೆಚ್ಚುತ್ತಲೇ ಇದೆ. ಆದರೆ ಇಲ್ಲಿಯವರೆಗೆ ಯಾವುದೇ ದಾಖಲೆಯ ನೋಟ್ ಮಾಡಲಾಗಿಲ್ಲ. ಏತನ್ಮಧ್ಯೆ ಇಂಟರೆಸ್ಟಿಂಗ್ ಇಂಜಿನಿಯರ್ (IE) ಪ್ರಕಾರ ಈ ಚಿಕ್ಕ ದಿವಸದ 50 ವರ್ಷಗಳ ಹಂತದ ಪ್ರಾರಂಭವಾಗಿರಬಹುದು. ಪೃಥ್ವಿಯ ಈ ಬೇರೆ ಬೇರೆ ರೀತಿಯ ತಿರುಗುವಿಕೆಯ ವೇಗದ ಬಗ್ಗೆ ಶಾಸ್ತ್ರಜ್ಞರು ಇನ್ನು ಯಾವುದೇ ರೀತಿಯ ನಿರ್ಣಯಕ್ಕೆ ಬಂದಿಲ್ಲ. ಪ್ರಸ್ತುತ ಬದಲಾವಣೆಗೆ ಪೃಥ್ವಿಯ ಗರ್ಭದೊಳಗಿನ ಅಥವಾ ಪೃಷ್ಠಭಾಗದ ಮೇಲಿರುವ ವಿವಿಧ ಪ್ರಕ್ರಿಯೆಗಳು, ಮತ್ತು ಮಹಾಸಗರಗಳಲ್ಲಿ ಸಂಭವಿಸುವ ಉಬ್ಬರವಿಳಿತ ಹಾಗೂ ಹವಾಮಾನದಲ್ಲಿ ಆಗುವ ವಿವಿಧ ಬದಲಾವಣೆಗಳು ಕಾರಣವಾಗಿರಬಹುದು ಎನ್ನುತ್ತಿದ್ದಾರೆ.

ದ ಇಂಡಿಪೆಂಡೆಂಟ್ ನೀಡಿದ ರಿಪೋರ್ಟ್ ಪ್ರಕಾರ ಪೃಥ್ವಿಯ ಹೆಚ್ಚುತ್ತಿರುವ ವೇಗದಿಂದಾಗಿ ನೆಗೆಟಿವ್ ಲೀಪ್ ಸೆಕೆಂಡ್ ನ ಉಪಯೋಗ ತುಂಬಾ ಮಹತ್ವದ್ದಾಗಲಿದೆ. ಇದು ಒಂದು ರೀತಿಯಲ್ಲಿ ಕೆಲವು ಸೆಕೆಂಡುಗಳನ್ನು ತೆಗೆದು ಹಾಕುವ ಪ್ರಯತ್ನವಾಗಲಿದೆ. ಇದರಿಂದ ಸೂರ್ಯನ ಸುತ್ತಲೂ ತಿರುಗುವ ಪೃಥ್ವಿಗೆ ಪರಿಭ್ರಮಣದ ಮೇಲೆ ಬ್ಯಾಲೆನ್ಸ್ ಇಡಲು ಸಾಧ್ಯವಾಗಲಿದೆ. ನೆಗೆಟಿವ್ ಲೀಪ್ ಸೆಕೆಂಡುಗಳನ್ನು ಜೋಡಿಸುವುದರಿಂದ ಕೆಲವು ಹಾನಿಗಳು ಸಹ ಕಂಡು ಬರಲಿವೆ. ಉದಾಹರಣೆಗೆ ಹೇಳಬೇಕಾದರೆ, ಸೌರ ಊರ್ಜೆಯ ಮೇಲೆ ಸೆಟ್ ಮಾಡಿದ ಸ್ಮಾರ್ಟ್ ಫೋನ್ ಗಳ ಸಮಯ, ಕಾಂಪ್ಯೂಟರ್ ಹಾಗು ಕಮ್ಯುನಿಕೇಶನ್ ಸಿಸ್ಟಮ್ ಮೇಲೆ ಇದರ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಆಗಲಿದೆ. ಶಾಸ್ತ್ರಜ್ಞರ ಪ್ರಕಾರ ಇದು ತುಂಬಾ ಅಪಾಯಕರವಾಗಿ ಪರಿಣಮಿಸಲಿದೆ.