Video; ಹೋಮ್ ವರ್ಕ್ ಗೆ ರೋಸಿ ಹೋದ ಮಗು ತಾಯಿಗೆ, ನಾನೀ ಜಗತ್ತನ್ನೇ ಬಿಟ್ಟು ಹೋಗುವೆ ಎನ್ನುತ್ತಿದ್ದಾನೆ, ಹುಡುಗನ ನೋವು ನೀವಾದರೂ ಕೇಳಿ.

ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕ ಮಕ್ಕಳ ತಮಾಷೆಯ ಹಾಗೂ ಆಶ್ಚರ್ಯದ ವಿಡಿಯೋಗಳು ಕೆಲವು ಸಲ ದೊಡ್ಡವರನ್ನು ಸಹ ಮಂತ್ರಮುಗ್ಧನಾಗಿ ಮಾಡುತ್ತವೆ. ಈಗಿನ ಮಕ್ಕಳು ತಮ್ಮ ಪೋಷಕರ ಜೊತೆಗೆ ಮಾತನಾಡುವುದನ್ನು ಕೇಳಿದರೆ ದೊಡ್ಡವರು ಬೆಚ್ಚಿ ಬೀಳುವುದೊಂದೇ ಬಾಕಿ. ಚಿಕ್ಕ ಮಕ್ಕಳು ಅದೇಗೆ ಈ ರೀತಿಯಾಗಿ ಮಾತನಾಡುತ್ತಾರೆ ಎಂಬ ಪ್ರಶ್ನೆ, ದೊಡ್ಡವರ ಮನದಲ್ಲಿ ಮೂಡುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕ ಹುಡುಗನೊಬ್ಬನ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬಾಲಕ ತನ್ನ ತಾಯಿಯ ಜೊತೆಗೆ ಮಾತನಾಡಿದ ಸಂಭಾಷಣೆಯನ್ನು ಕೇಳಿದರೆ ನಿಜಕ್ಕೂ ದಂಗಾಗಿ ಬಿಡುತ್ತದೆ.

ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬಾಲಕ ಹೋಮ್ ವರ್ಕ್ ಮಾಡುತ್ತಿರುವುದು ಕಂಡು ಬರುತ್ತಿದೆ. ಆತನ ಎದುರಿಗೆ ತಾಯಿಯು ಕುಳಿತು ಹುಡುಗನಿಗೆ ಮಾತನಾಡಿಸುತ್ತಿದ್ದಾಳೆ. ವಿಡಿಯೋದಲ್ಲಿಯ ಪ್ರಸ್ತುತ ಸಂಭಾಷಣೆ ಹಿಂದಿ ಭಾಷೆಯಲ್ಲಿದೆ. ಬಾಲಕ ಅಭ್ಯಾಸದಿಂದಾಗಿ ತುಂಬಾ ಟೆನ್ಶನ್ ನಲ್ಲಿದ್ದಾನೆ. ಆತನನ್ನು ನೋಡಿದಾಗಲೇ ಗೊತ್ತಾಗುತ್ತದೆ ಅಭ್ಯಾಸ ಆತನಿಗೆ ತುಂಬಾ ಭಾರವಾಗಿಬಿಟ್ಟಿದೆ ಎಂದು. ವಿಡಿಯೋದಲ್ಲಿ ಮಗು ಸಹಜವಾಗಿ ತನ್ನ ತಾಯಿಯ ಜೊತೆಗೆ ಸಂಭಾಷಣೆಯನ್ನು ಮಾಡಿದ್ದಾನೆ. ಈ ಸಂದರ್ಭದಲ್ಲಿ ತನ್ನ ತಾಯಿಗೆ, ಮಮ್ಮಿ ನಾನು ತುಂಬಾ ಪರೇಶಾನ್ ಆಗಿದ್ದೇನೆ, ನಾನು ಈ ಜಗತ್ತಿನಲ್ಲಿ ಯಾಕೆ ಬಂದಿದ್ದೇನೆ? ಈ ಜಗತ್ತಿನಿಂದ ನಾನು ಹೊರಟು ಹೋಗುತ್ತೇನೆ, ಹೊರಟು ಹೋಗುತ್ತೇನೆ ಎಂದು ಮೇಲಿಂದ ಮೇಲೆ ಹೇಳುತ್ತಾನೆ. ಅದಕ್ಕೆ ತಾಯಿಯು ಯಾಕೆ ಹೋಗುತ್ತೀಯ ಎಂದು ಕೇಳಿದಾಗ ಬಾಲಕ, ನನಗೆ ಈ ಜಗತ್ತಿನಲ್ಲಿ ಮನಸ್ಸು ಹತ್ತುತ್ತಿಲ್ಲ ಎನ್ನುತ್ತಾನೆ. ಆಗ ತಾಯಿಯು ಆತನಿಗೆ ಯಾಕೆ ಮನಸ್ಸು ಹತ್ತುತ್ತಿಲ್ಲ ಎಂದು ಕೇಳಿದಾಗ ನೀನು ತುಂಬಾ ಕೆಟ್ಟ ಇದ್ದೀಯಾ ಎಂದು ಹೇಳುತ್ತಾನೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Bunny (@daiviksharma28)

ಬಾಲಕನ ಈ ಮಾತನ್ನು ಕೇಳಿದ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳಲ್ಲಿ ತುಂಬಾ ಆಶ್ಚರ್ಯವನ್ನು ವ್ಯಕ್ತ ಮಾಡುತ್ತಿದ್ದಾರೆ. ಇಂಥ ಪುಟ್ಟ ಬಾಲಕರ ಮನಸ್ಸಿನಲ್ಲಿ ಎಂತಹ ಮಾತುಗಳು ಹುಟ್ಟುತ್ತೆ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನ daiviksharma28 ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ಮಗುವಿನ ಈ ಮಾತುಗಳನ್ನು ಕೇಳಿ ತಮಾಷೆಯ ಕಮೆಂಟ್ಗಳನ್ನು ಮಾಡಿದ್ದಾರೆ.