ಚಲಿಸುತ್ತಿರುವ ಟ್ರೈನ್ ನಲ್ಲಿಯೇ ಚಿಗುರೊಡೆಯಿತು ಪ್ರೀತಿ; ಯಾತ್ರಿಕರ ಮುಂದೆಯೇ ಶುರುವಾಯಿತು ಲವ್ವಿ ಡವ್ವಿ! ಕ್ಯಾಮೆರಾದಲ್ಲಿ ಸೆರೆ…

ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಏನು ಹರಿದು ಎಲ್ಲರೆಡೆಗೆ ಬರುತ್ತದೆ ಮತ್ತು ವೈರಲ್ ಆಗುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ. ಈಗಿನ ಜಗತ್ತಿನಲ್ಲಿ ಪ್ರತಿ ಕೆಲಸವನ್ನೂ ತುಂಬಾ ಜಾಗೃತೆಯಿಂದ ಮಾಡಬೇಕಾಗುತ್ತದೆ. ಕಾರಣ ಎಲ್ಲಿ ಬೇಕಾದಲ್ಲಿ ಕ್ಯಾಮೆರಾಗಳು ಅವಿತು ಕುಳಿತಿವೆ. ಇನ್ನು ರೊಮ್ಯಾಂಟಿಕ್ ಕೆಲಸದಲ್ಲಿ ತೊಡಗಿರುವ ವ್ಯಕ್ತಿಗಳು ಸಿಕ್ಕರಂತೂ ಮುಗಿದೇ ಹೋಯಿತು. ಚೆನ್ನಾಗಿ ವೈರಲ್ ಮಾಡಿ ಬಿಡುತ್ತಾರೆ. ಸದ್ಯ ಇಂಥದ್ದೇ ಟ್ರೈನ್ ನಲ್ಲಿ ರೊಮ್ಯಾಂಟಿಕ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುತ್ತುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಎರಡು ಹದಿಹೆರೆಯದ ಜೀವಗಳು ಜಗತ್ತಿನ ಚಿಂತೆಯಿಲ್ಲದೆ ಟ್ರೈನ್ ನಲ್ಲಿಯೇ ತಮ್ಮ ಪ್ರೀತಿಯನ್ನು ವ್ಯಕ್ತ ಮಾಡಲು ಶುರು ಮಾಡಿದ್ದಾರೆ. ಈ ದೃಶ್ಯವನ್ನು ಯಾರೋ ಒಬ್ಬರು ಕ್ಯಾಮೆರಾದಲ್ಲಿ ಸೆರೆ ಹಿಡಿದು ಇಂಟರ್ನೆಟ್ ನಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಮುಂದೆ ಬೇರೆ ಯಾತ್ರಿಕರು ಕುಳಿತಿದ್ದಾರೆ ಎನ್ನುವುದನ್ನು ಮರೆತು ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಪ್ರೇಮಿಗಳಿಬ್ಬರೂ ರೈಲಿನಲ್ಲಿ ಹಿಂದೆ ಮುಂದೆ ಸೀಟ್ ನಲ್ಲಿ ಕುಳಿತಿದ್ದಾರೆ. ಸ್ವಲ್ಪ ಸಮಯದ ನಂತರ ಹುಡುಗ ತನ್ನ ಕೈಯನ್ನು ಸೀಟಿನ ಕೆಳಗೆ ತರುತ್ತಾನೆ. ಹುಡುಗಿಗೆ ಇದು ಮೊದಲಿನಿಂದಲೇ ಗುರುತಿರುತ್ತದೆ. ಆಗ ಹುಡುಗಿಯು ಏನೂ ಗೊತ್ತಿಲ್ಲದವಳ ಹಾಗೆ ನಟಿಸುತ್ತ ಹುಡುಗನ ಕೈಯಲ್ಲಿ ಲೇಟರ್ ಇಡುತ್ತಾಳೆ. ಹೀಗೆ ಇಬ್ಬರೂ ತುಂಬಾ ಚಾಲಾಕಿತನದಿಂದ ತಮ್ಮ ಪ್ರೀತಿಯನ್ನು ವ್ಯಕ್ತ ಮಾಡಿದ್ದಾರೆ.

ವಿಡಿಯೋ ನೋಡಿ

 

View this post on Instagram

 

A post shared by SAKHT LOGG 🔥 (@sakhtlogg)

ಈ ಎಲ್ಲ ದೃಶ್ಯವನ್ನು ಯಾವನೋ ಒಬ್ಬ ಮಹಾನುಭಾವ ಯಾರಿಗೂ ಗೊತ್ತಿಲ್ಲದಂತೆ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಮತ್ತು ಇನ್ಸ್ಟಾಗ್ರಾಂ ನಲ್ಲಿ ಹರಿ ಬಿಟ್ಟಿದ್ದಾನೆ.