ಜನಧನ್ ಖಾತೆಯಿಂದ ₹1500 ತೆಗೆಯಲು 120 ವರ್ಷದ ತಾಯಿಯನ್ನು ಹೊರಸಿನ ಮೇಲೆ ಎಳೆಯುತ್ತಾ ಬ್ಯಾಂಕಿಗೆ ತಂದ 70 ವರ್ಷದ ಮಗಳು!

ಒಡಿಶಾದ ನುಆಪಾಡಾ ಜಿಲ್ಲೆಯ ಖರಿಯಾರ್ ತಾಲೂಕಿನ ಬರಗಾಂವ್ ದಲ್ಲಿ ವಿಚಿತ್ರ ಘಟನೆಯೊಂದು ಮನವನ್ನು ಕಲಕುತ್ತದೆ. ಈ ಘಟನೆ ಮಾನವೀಯ ಮೌಲ್ಯಗಳನ್ನು ತುಳಿದು ಹಾಕಿದಂತಿದೆ. ಇಲ್ಲಿ 70 ವರ್ಷದ ಮಗಳು 120 ವರ್ಷದ ತನ್ನ ತಾಯಿಯನ್ನು ಬ್ಯಾಂಕ್ ಖಾತೆಯಲ್ಲಿಯ ಹಣವನ್ನು ಪಡೆಯುವದಕ್ಕಾಗಿ ಪಲ್ಲಂಗದ ಮೇಲೆ ಅವಳನ್ನು ಹಾಕಿ ಎಳೆಯುತ್ತ ಬ್ಯಾಂಕಿನವರೆಗೆ ತಂದಳು. ಗುರುವಾರ ಜೂನ್ 11 ರಂದು ಮುಂಜಾನೆ ಲಾಭೋ ಬಾಗ್ ಹೆಸರಿನ ತಾಯಿಯನ್ನು ಉತ್ಕಲ್ ಗ್ರಾಮೀಣ ಬ್ಯಾಂಕಿಗೆ ಈ ಅವಸ್ಥೆಯಲ್ಲಿ ತಂದದ್ದನ್ನು ಕಂಡು ಪ್ರತಿಯೊಬ್ಬರ ಕಣ್ಣುಗಳು ತೇವಗೊಂಡವು.

ಲಾಕ್ ಡೌನ್ ನಲ್ಲಿ ಪರಿಹಾರ ನಿಧಿ ಮುಟ್ಟಿಸುವ ಸಲುವಾಗಿ ಸರಕಾರದ ಮುಖಾಂತರ ಜನಧನ್ ಖಾತೆಯಲ್ಲಿ ಬಡವರಿಗೆ ಪ್ರತಿ ತಿಂಗಳು 500 ರೂಪಾಯಿಗಳ ಸಹಾಯ ಧನ ಕೊಡಲಾಗುತ್ತದೆ. ಕಳೆದ ಮೂರು ತಿಂಗಳಿನಿಂದ ಲಾಭೋಳ ಖಾತೆಯಲ್ಲಿ 1500 ರೂಪಾಯಿಗಳು ಜಮೆಯಾಗಿದ್ದವು. ಇದೇ ಹಣವನ್ನು ಮಗಳು ಪುಂಜಿಮತಿ ತೆಗೆಯಲು ಹೋದಾಗ ಬ್ಯಾಂಕಿನವರು ಸಂಬಂಧಪಟ್ಟ ವ್ಯಕ್ತಿ ಬ್ಯಾಂಕಿಗೆ ಬಂದರೆ ಮಾತ್ರ ಹಣ ದೊರೆಯುತ್ತದೆ ಇಲ್ಲವಾದರೆ ಇಲ್ಲ ಎಂದು ಹೇಳಿ ತಿರುಗಿ ಹಾಕಿದರು.

ಪ್ರಾಪ್ತ ಮಾಹಿತಿಯ ಮೇರೆಗೆ ಬರಗಾಂವ್ ನಲ್ಲಿ ಲಾಭೋ ತನ್ನ ಮಗಳಾದ ಪುಂಜಿಮತಿ ಮತ್ತು ಅಳಿಯನ ಜೊತೆಗೆ ಒಂದು ಚಿಕ್ಕ ಗುಡಿಸಲಲ್ಲಿ ದಿನಗಳನ್ನು ಕಳೆಯುತ್ತಿದ್ದಾಳೆ. ವೃದ್ಧರಾದ ಕಾರಣ ಏನು ಕೆಲಸ ಮಾಡಲು ಬರದೆ ಮತ್ತು ಹಣ ಗಳಿಕೆಯ ಯಾವುದೇ ರೀತಿಯ ಬೇರೆ ಮಾರ್ಗವಿಲ್ಲದೆ ಸಂಪೂರ್ಣ ಕುಟುಂಬವು ಸರಕಾರ ಕೊಡುವ ಪೆನ್ಶನ್ ಮತ್ತು ಸಹಾಯ ನಿಧಿಯ ಮೇಲೆಯೇ ಅವಲಂಬಿತವಾಗಿದೆ. ಹೀಗಿರುವಾಗ ಬ್ಯಾಂಕಿನಲ್ಲಿ ಹಣ ಬಂದದ್ದು ಕೇಳಿ ಕುಟುಂಬದವರೆಲ್ಲರಿಗೂ ಖುಷಿಯಾಗಿ ತಾಯಿ ಮಗಳಿಗೆ ಹಣ ತರಲೂ ಬ್ಯಾಂಕಿಗೆ ಕಳಿಸಿದಾಗ ಮಗಳು ಹಣವನ್ನು ತರದೆ ಹಾಗೆಯೇ ಖಾಲಿ ಕೈಯಿಂದ ಬಂದಳು.

ತಾಯಿಯ ವಯಸ್ಸಿನ ಕಾರಣದಿಂದ ಮಗಳು, ಊರಿನ ಗ್ರಾಮ ಸದಸ್ಯರ ಸಹಾಯ ಬೇಡಿ ಅವರಿಂದ ಬ್ಯಾಂಕಿನವರಿಗೆ ವಾಸ್ತವ ಪರಿಸ್ಥಿತಿಯನ್ನು ತಿಳಿಸಿ ಹೇಳಿಸಿದರೂ ಸಹಿತ ಬ್ಯಾಂಕಿನವರು ಮಾತ್ರ ಎಲ್ಲಿಯವರೆಗೆ ಸ್ವತಃ ವ್ಯಕ್ತಿ ಬಂದು ಹಸ್ತಾಕ್ಷರ (ಸೈನ್) ಮಾಡುವದಿಲ್ಲವೋ ಅಲ್ಲಿಯವರೆಗೆ ನಿಮಗೆ ಹಣ ಕೊಡಲಾಗುವದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಆರ್ಥಿಕ ದುರ್ಬಲತೆಯಿಂದ ಯಾವುದೇ ಖಾಸಗಿ ವಾಹನವನ್ನು ಮಾಡಿಕೊಂಡು ಬ್ಯಾಂಕಿಗೆ ಹೋಗುವ ಸ್ಥಿತಿಯಲ್ಲಿಯೂ ಇರಲಿಲ್ಲ.

ಕೊನೆಗೆ ಮಗಳು ಪುಂಜಿಮತಿ ಬೇರೆ ದಾರಿ ಕಾಣದೆ ತನ್ನ ತಾಯಿಗೆ ಪಲ್ಲಂಗದ ಮೇಲೆ ಮಲಗಿಸಿ ಎಳೆದುಕೊಂಡು ಮನೆಯಿಂದ ಅರ್ಧ ಕಿಲೋ ಮೀಟರ್ ಹೋದಳು. ದಾರಿಯಲ್ಲಿ ಈ ಸ್ಥಿತಿಯನ್ನು ನೋಡಿದವರೆಲ್ಲರಿಗೂ ಬ್ಯಾಂಕಿನ ಈ ನಡವಳಿಕೆಯ ಮೇಲೆ ರೋಷ ಬಂದಿತು. ಈ ದೃಶ್ಯವನ್ನು ನೋಡಿದವರ ಮನಸ್ಸು ವಿಚಿಲಿತವಾಗದೆ ಇರಲಿಲ್ಲ. ಕೆಲವೊಬ್ಬರಂತೂ ವೀಡಿಯೊ ಸಹಿತ ಮಾಡಿದರು.

ಹಾಗೋ ಹೀಗೋ ಇಬ್ಬರು ವೃದ್ಧರು ಬ್ಯಾಂಕಿನವರೆಗೆ ಮುಟ್ಟಿದರೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಅವರ ಪ್ರತಿ ತಮ್ಮ ಸಂವೇದನೆಯನ್ನು ಸಹಿತ ವ್ಯಕ್ತ ಮಾಡಲಿಲ್ಲ. ಲಾಭೋಳ ಹೆಬ್ಬಟ್ಟಿನ ಗುರುತು ತೆಗೆದುಕೊಂಡು ಅವಳಿಗೆ ಹಣವನ್ನು ಕೊಟ್ಟರು. ಶನಿವಾರದಂದು ವೀಡಿಯೊ ವೈರಲ್ ಆದ ನಂತರ ಈ ವಿಷಯ ಚರ್ಚೆಗೆ ಬಂತು. ಬ್ಯಾಂಕ ಸಿಬ್ಬಂದಿ ವರ್ಗದವರ ಈ ಅಮಾನವೀಯ ಕೃತ್ಯದಿಂದ ಜನ ಆಕ್ರೋಶಗೊಂಡಿದ್ದಾರೆ.

ಶಾಖೆಯ ವ್ಯವಸ್ಥಾಪಕರು ನೀಡಿದ ಹೇಳಿಕೆಯ ಪ್ರಕಾರ ‘ನಾವು ಪುಂಜಿಮತಿಗೆ ಮನೆಗೆ ಬಂದು ಹಣವನ್ನು ಕೊಡುತ್ತೇವೆ ಎಂದು ಹೇಳಿದ್ದೇವೆ, ಆದರೆ ಬ್ಯಾಂಕಿನಲ್ಲಿ ಗ್ರಾಹಕರು ಜಾಸ್ತಿ ಇದ್ದ ಕಾರಣ ನಮಗೆ ಹೋಗುವದು ಆಗಲಿಲ್ಲ.’

ರಿಜರ್ವ ಬ್ಯಾಂಕಿನ ಗೈಡ್ ಲೈನ್ ಸೀನಿಯರ್ ಸಿಟಿಜನ್ ರಿಗೆ ಮತ್ತು ಶಾರೀರಿಕವಾಗಿ ಅಸಮರ್ಥರಾಗಿದ್ದವರಿಗೆ ಅವರ ಮನೆಗೆ ಬ್ಯಾಂಕಿನ ಮೂಲಭೂತ ಸೌಕರ್ಯಗಳನ್ನು ಓದಗಿಸಬೇಕು ಎಂದು ಹೇಳುತ್ತದೆ. ಆದರೆ ಬ್ಯಾಂಕಿನವರು ಆ ನಿಯಮಗಳ ಪಾಲನೆ ಮಾಡುವದು ಕಂಡು ಬರುತ್ತಿಲ್ಲ.

ಪುಂಜಿಮತಿ ಹೇಳುವ ಹಾಗೆ, ನಾನು ಬ್ಯಾಂಕಿನ ಸಿಬ್ಬಂದಿಯವರೊಂದಿಗೆ ಈ ಬಗ್ಗೆ ಮಾತನಾಡಿದೆ, ಆದರೆ ಅವರು ಯಾವುದಕ್ಕೂ ಒಪ್ಪಲಿಲ್ಲ. ತಾಯಿಗೆ ಕರೆದು ತರಲೇಬೇಕು ಎಂದು ಪಟ್ಟು ಹಿಡಿದರು. ನನಗೆ ಯಾವುದೇ ಖಾಸಗಿ ವಾಹನದಲ್ಲಿ ಕರೆತರಲು ಅಷ್ಟೊಂದು ಹಣವಿರಲಿಲ್ಲ. ಆದ ಕಾರಣ ನಿರೂಪಾಯದಿಂದ ನನಗೆ ಈ ಹೆಜ್ಜೆ ಇಡಬೇಕಾಯಿತು ಎಂದಳು.