ವೈರಲ್ ವಿಡಿಯೋ; ಜ್ವಾಲಾಮುಖಿ ಸ್ಫೋಟಗೊಂಡು ಲಾವಾರಸ ಹೊರಬೀಳುವ ಅಮೋಘ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ!

ನಿಸರ್ಗ ತನ್ನ ಗರ್ಭದಲ್ಲಿ ಅಚ್ಚರಿ ಪಡುವಂಥ ಅನೇಕ ರೋಚಕ ರಹಸ್ಯಗಳನ್ನು ಮುಚ್ಚಿಕೊಂಡಿದೆ. ಈ ದೃಶ್ಯಗಳ ದರ್ಶನ ಅಥವಾ ಅನುಭವ ಮನುಷ್ಯನಿಗೆ ಆಗಾಗ ಆಗುತ್ತಿರುತ್ತದೆ. ಇವುಗಳನ್ನು ನೋಡಿದಾಗ ಮನುಷ್ಯ ಅಚ್ಚರಿಗೆ ಒಳಗಾಗುತ್ತಾನೆ. ಸದ್ಯ ಟ್ವಿಟರ್ ನಲ್ಲಿ wonder of science ಹೆಸರಿನ ಪೇಜ್ ನಿಂದ ಜ್ವಾಲಾಮುಖಿಯ ಅದ್ಭುತವಾದ ವಿಡಿಯೋ ಒಂದನ್ನು ಶೇರ್ ಮಾಡಲಾಗಿದೆ. ಇದೇ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಭೂಮಿಯ ಒಡಲಿನಿಂದ ಹೊರ ಬರುತ್ತಿರುವ ಕಾದ ಲಾವಾರಸದ ದೃಶ್ಯ ನೋಡಲು ಅಮೋಘವಾಗಿ ಕಂಡು ಬರುತ್ತಿದೆ. ಈ ದೃಶ್ಯವನ್ನು ವಿಶೇಷವೆಂದರೆ ಡ್ರೋನ್ ಕ್ಯಾಮೆರಾದಿಂದ ಸೆರೆ ಹಿಡಿಯಲಾಗಿದ್ದರಿಂದ ಇದರ ವೈಭವ ಇನ್ನಷ್ಟು ದ್ವಿಗುಣಿತವಾಗಿದೆ. ಕ್ಯಾಮೆರಾದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ ಭೂಮಿಯ ಗರ್ಭದಿಂದ ಹೊರಬೀಳುತ್ತಿರುವ ಬೆಂಕಿಯ ರಾಡಿ ನೋಡಿದಾಗ ನಿಜಕ್ಕೂ ಭಯ ಹುಟ್ಟುತ್ತದೆ. ಒಂದು ಕಡೆ ಭೂಮಿಯಿಂದ ಲಾವಾ ಮೇಲೆ ಬರುತ್ತಿರುವುದು ಮತ್ತು ಇನ್ನೊಂದು ಕಡೆಯಿಂದ ಹೊರಬಂದ ಕೆಂಪು ಲಾವಾರಸ ಹರಿದು ಹೋಗುವ ದೃಶ್ಯ ನೋಡಲು ಅಪರೂಪದ ದೃಶ್ಯವಾಗಿದೆ. ಈ ರೀತಿಯ ದೃಶ್ಯ ಈ ಮೊದಲು ಸೆರೆ ಹಿಡಿಯಲು ಆಗಿರಲಿಲ್ಲ.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋ ಟ್ವಿಟರ್ ನಲ್ಲಿ ಆಗಸ್ಟ್ 1 ರಂದು ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ 11.8 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಹಾಗೂ ಸುಮಾರು 3 ಲಕ್ಷಕ್ಕೆ ಸಮೀಪ ಜನರು ಲೈಕ್ ಮಾಡಿದ್ದಾರೆ. ಜೊತೆಗೆ 50 ಸಾವಿರ ರೀಟ್ವಿಟ್ ಗಳಾಗಿವೆ.