ಚಲಿಸುತ್ತಿರುವ ಟ್ರೈನ್ ನಲ್ಲಿ ಡ್ರೈವರ್ ಒಂದು ವೇಳೆ ಮಲಗಿಕೊಂಡರೆ? 99 % ಜನರಿಗೆ ಗೊತ್ತಿಲ್ಲ ರೈಲಿನಲ್ಲಿರುವ ಈ ಸಿಸ್ಟಮ್!
ಭಾರತೀಯ ರೈಲ್ವೆ ಇದು ಜಗತ್ತಿನ ನಾಲ್ಕನೇ ಮತ್ತು ಏಷಿಯಾದ ಎರಡನೆಯ ಅತಿದೊಡ್ಡ ರೇಲ್ ನೆಟ್ವರ್ಕ್ ಆಗಿದೆ. ಇದರಲ್ಲಿ ಎಲ್ಲ ರೀತಿಯ ಎಲ್ಲ ವರ್ಗದ ಪ್ರವಾಸಿಗರು ಪ್ರವಾಸ ಮಾಡಬಹುದು. ಇಲ್ಲಿ ಸಂಪೂರ್ಣ ಟ್ರೈನ್ ಗೆ ಒಂದು ಎಂಜಿನ್ ಕಂಟ್ರೋಲ್ ಮಾಡುತ್ತದೆ. ಈ ಎಂಜಿನ ನಡೆಸುವ ವ್ಯಕ್ತಿಗೆ ಅಥವಾ ಡ್ರೈವರ್ ಗೆ ಲೋಕೊ ಪೈಲಟ್ ಎನ್ನುತ್ತಾರೆ. ಒಂದು ವೇಳೆ ಈ ಲೋಕೊ ಪೈಲಟ್ ಟ್ರೈನ್ ನಡೆಸುತ್ತಿರುವಾಗ ಮಧ್ಯೆದಲ್ಲಿ ಮಲಗಿದರೆ ಏನಾಗುತ್ತದೆ? ಎಂಬ ಪ್ರಶ್ನೆಯ ಬಗ್ಗೆ ಸ್ವಲ್ಪ ಯೋಚಿಸಿದರೆ…. ಟ್ರೈನ್ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದೇ? ಬನ್ನಿ ಏನಾಗುತ್ತದೆ ಎಂಬುದು ತಿಳಿದುಕೊಳ್ಳೋಣ…
ಟ್ರೈನ್ ನಲ್ಲಿ ಇಬ್ಬರೂ ಡ್ರೈವರ್ ಇರುತ್ತಾರೆ.
ಟ್ರೈನ್ ಇದು ಸಾಕಷ್ಟು ಜನರನ್ನು ಹೊತ್ತುಕೊಂಡು ಹೋಗುವ ದೊಡ್ಡ ಪ್ರವಾಸಿ ಸಾಧನವಾಗಿದೆ. ಹೀಗಿರುವಾಗ ಟ್ರೈನ್ ಮಂಡಳಿ ಇದಕ್ಕೆ ಒಂದು ಉಪಾಯವನ್ನು ಹುಡುಕಿಕೊಂಡಿದೆ. ಅದಕ್ಕಾಗಿಯೇ ಟ್ರೈನ್ ವ್ಯವಸ್ಥಾಪನೆ ಡ್ರೈವರ್ ಜೊತೆಗೆ ಅಸಿಸ್ಟಂಟ್ ಡ್ರೈವರ್ ಒಬ್ಬನನ್ನು ನೇಮಕ ಮಾಡಿರುತ್ತದೆ. ಯಾವುದೇ ಆಕಸ್ಮಿಕ ಅವಾಂತರವಾದಲ್ಲಿ ಮತ್ತು ಡ್ರೈವರ್ ಏನಾದರೂ ಮಲಗಿದರೆ ಬೇರೆ ಡ್ರೈವರ್ ಮಲಗಿದ ಡ್ರೈವರ್ ನನ್ನು ಎಬ್ಬಿಸುತ್ತಾನೆ. ಆದರೂ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವಂಥದ್ದು ಏನಾದರೂ ಉದ್ಭವಿಸಿದರೆ ಮುಖ್ಯ ಡ್ರೈವರ್ ಅಥವಾ ಅಸಿಸ್ಟಂಟ್ ಡ್ರೈವರ್ ಮುಂದಿನ ಸ್ಟೇಶನ್ ನಲ್ಲಿ ಈ ಬಗ್ಗೆ ರಿಪೋರ್ಟ್ ಮಾಡುತ್ತಾನೆ. ಹಾಗೂ ಅಲ್ಲಿಂದ ಬೇರೊಬ್ಬ ಡ್ರೈವರ್ ನ ವ್ಯವಸ್ಥೆ ಮಾಡಲಾಗುತ್ತದೆ.

ಅನೇಕ ಜನರ ಮನಸ್ಸಿನಲ್ಲಿ ಮುಂದಿನ ಪ್ರಶ್ನೆಯೊಂದು ಉದ್ಭವಿಸುತ್ತಿರಬಹುದು, ಅದೇನೆಂದರೆ ಒಂದು ವೇಳೆ ಇಬ್ಬರೂ ಮಲಗಿಬಿಟ್ಟರೆ ಹೇಗೆ? ಈ ರೀತಿ ಘಟಿಸುವುದು ತುಂಬಾ ವಿರಳ. ಆದರೂ ಒಂದು ವೇಳೆ ಇಬ್ಬರೂ ಡ್ರೈವರ್ ಗಳು ಮಲಗಿದರೆ ಅದಕ್ಕೆ ಟ್ರೈನ್ ನಲ್ಲಿ ಒಂದು ವ್ಯವಸ್ಥೆ ಇದೆ. ಇದಕ್ಕಾಗಿ ಎಂಜಿನ್ ನಲ್ಲಿ ‘ವಿಜಿಲೆನ್ಸ್ ಕಂಟ್ರೋಲ್ ಡಿವೈಸ್’ ಯೂಸ್ ಮಾಡಿದ್ದಾರೆ. ಟ್ರೈನಿನ ಎಂಜಿನ್ ನಲ್ಲಿ ಉಪಯೋಗಿಸಲಾದ ಈ ಡಿವೈಸ್ ಡ್ರೈವರ್ ಮೇಲೆ ಗಮನವಿಡುತ್ತದೆ. ಒಂದು ವೇಳೆ ಡ್ರೈವರ್ ಒಂದು ನಿಮಿಷದವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿದ್ದರೆ ಮುಂದಿನ 17 ಸೆಕೆಂಡುಗಳಲ್ಲಿ ಒಂದು ಆಡಿಯೋ ವಿಜುವಲ್ ಇಂಡಿಕೇಶನ್ ಬರುತ್ತದೆ. ಇದಕ್ಕೆ ಡ್ರೈವರ್ ಬಟನ್ ಪುಶ್ ಮಾಡಿ ಸ್ವೀಕರಿಸಬೇಕಾಗುತ್ತದೆ. ಒಂದು ವೇಳೆ 17 ಸೆಕೆಂಡುಗಳಲ್ಲಿ ಡ್ರೈವರ್ ಈ ಬಟನ್ ಪುಶ್ ಮಾಡದೆ ಇದ್ದರೆ ಆಟೋಮೆಟಿಕ್ ಆಗಿ ಟ್ರೈನಿಗೆ ಬ್ರೇಕ್ ತಾಗಲು ಶುರುವಾಗುತ್ತದೆ.
ತನ್ನಂತಾನೆ ಟ್ರೈನ್ ನಿಂತುಬಿಡುತ್ತದೆ.
ಟ್ರೈನ್ ನಡೆಸುವಾಗ ಡ್ರೈವರ್ ಮೇಲಿಂದ ಮೇಲೆ ರೈಲಿನ ವೇಗ ಹೆಚ್ಚು ಕಡಿಮೆ ಮಾಡುವುದು ಮತ್ತು ಹಾರ್ನ್ ಬಾರಿಸುವುದು ಸತತವಾಗಿ ಮಾಡುತ್ತಿರುತ್ತಾನೆ. ಹೀಗಾಗಿ ಡ್ರೈವರ್ ತನ್ನ ಡ್ಯೂಟಿ ಸಮಯದಲ್ಲಿ ಸಂಪೂರ್ಣವಾಗಿ ಆಕ್ಟಿವ್ ಆಗಿರುತ್ತಾನೆ. ಹೀಗಾಗಿ ಡ್ರೈವರ್ ಒಂದು ನಿಮಿಷದವರೆಗೆ ಸ್ಪಂದಿಸದೆ ಹೋದರೆ ಟ್ರೈನ್ ತನ್ನ ಕೆಲಸ ಶುರು ಮಾಡಲು ಅಣಿಯಾಗುತ್ತದೆ. ಇಂಥ ಸಂದರ್ಭದಲ್ಲಿ ಡ್ರೈವರ್ ಪ್ರತಿಕ್ರಿಯೆ ನೀಡದೆ ಇದ್ದರೆ ಟ್ರೈನ್ ಒಂದು ಕಿಲೋಮೀಟರ್ ಒಳಗಡೆಯೇ ನಿಂತುಬಿಡುತ್ತದೆ. ಈ ರೀತಿಯಾಗಿ ದೊಡ್ಡ ಅನಾಹುತಗಳು ಘಟಿಸುವುದರಿಂದ ಬಚಾವಾಗುತ್ತದೆ.