ಡಾ. ರಾಜ್ ಜೊತೆ ನಟಿಸಿದ ಕವಿರತ್ನ ಕಾಳಿದಾಸ ಚಿತ್ರದ ಮೇರು ನಟಿ ಜಯಪ್ರದಾ ಅವರ ಈಗಿನ ಬದಲಾದ ಲುಕ್ ನೋಡಿ! ಹೇಗಿದೆ?

ಜಯಪ್ರದಾ ಅವರ ಹೆಸರು ಬಾಲಿವುಡ್ ನ ಮೇರು ನಟಿಯರಲ್ಲಿ ಶಾಮಿಲಾಗಿದೆ. ಇವರು ಹಿಂದಿ ಭಾಷೆಯ ಜೊತೆಗೆ ಅನೇಕ ಪ್ರಾದೇಶಿಕ ಭಾಷೆಗಳಲ್ಲಿಯೂ ತಮ್ಮ ನಟನೆಯಿಂದ ಸೈ ಎನಿಸಿಕೊಂಡಿದ್ದಾರೆ. ಇವರು ಕನ್ನಡದವರಿಗೂ ಅಪರಿಚಿತರೇನಲ್ಲ. ದಿ. ಡಾಕ್ಟರ್ ರಾಜಕುಮಾರ್ ಮತ್ತು ದಿ. ವಿಷ್ಣುವರ್ಧನ್ ಅವರ ಜೊತೆಗೆ ಕನ್ನಡ ಚಲನಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳಿಂದ ಶ್ಲಾಘಿಸಿಕೊಂಡಿದ್ದಾರೆ.

ನಟಸಾರ್ವಭೌಮ ರಾಜಕುಮಾರ್ ಅವರ ಜೊತೆಗೆ ಜಯಪ್ರದಾ ಅವರು ನಟಿಸಿದ ಸನಾದಿ ಅಪ್ಪಣ್ಣ ಹಾಗೂ ಕವಿರತ್ನ ಕಾಳಿದಾಸ ಈ ಎರಡು ಚಿತ್ರಗಳು 80 ರ ದಶಕದಲ್ಲಿ ಸೂಪರ್ ಹಿಟ್ ಆಗಿದ್ದವು. ಇದರ ಹೊರತಾಗಿಯೂ ಶಬ್ದವೇದಿ ಮತ್ತು ವಿಷ್ಣುವರ್ಧನ್ ಅವರ ಜೊತೆಗೆ ಹಬ್ಬ ಚಿತ್ರದಲ್ಲಿಯೂ ನಟಿಸಿದ್ದಾರೆ. ಮುಖ್ಯವಾಗಿ ಅವರು ಕನ್ನಡ ಅಭಿಮಾನಿಗಳಿಗೆ ಪರಿಚಿತರಾಗಿದ್ದು ಡಾಕ್ಟರ್ ರಾಜಕುಮಾರ್ ಅವರ ಜೊತೆಗೆ ನಟಿಸಿದ ಸನಾದಿ ಅಪ್ಪಣ್ಣ ಮತ್ತು ಕವಿರತ್ನ ಕಾಳಿದಾಸ ಈ ಸೂಪರ್ ಹಿಟ್ ಚಿತ್ರಗಳಿಂದ.

 

View this post on Instagram

 

A post shared by Jaya Prada (@jayapradaofficial)

ಸದ್ಯ ಕಾಲದ ಜೊತೆಗೆ ಜಯಪ್ರದಾ ಅವರ ಲುಕ್ ತುಂಬಾ ಬದಲಾಗಿದೆ. ಅವರ ಲೇಟೆಸ್ಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಲು ಸಿಗುತ್ತಿವೆ. ಅವರು ಕೆಲವು ರಿಯಾಲಿಟಿ ಶೋಗಳಲ್ಲಿಯೂ ಸಹ ಭಾಗವಹಿಸುತ್ತಾರೆ. ಜಯಪ್ರದಾ ಅವರ ಇಂದಿನ ಫೋಟೋಗಳು ಮೊದಲಿನ ಫೋಟೋ ಗಿಂತಲೂ ತುಂಬಾ ಭಿನ್ನವಾಗಿದೆ. ಆದರೂ ಅವರ ಅಭಿಮಾನಿಗಳು ಅವರಿಗೆ ಇನ್ನೂವರೆಗೂ ನೀವು ತುಂಬಾ ಸುಂದರವಾಗಿ ಕಾಣುತ್ತೀರಿ ಎಂದು ಕಮೆಂಟ್ ಮಾಡಿದ್ದಾರೆ.

 

View this post on Instagram

 

A post shared by Jaya Prada (@jayapradaofficial)

ಸದ್ಯದ ಅವರ ಜೀವನ ಮತ್ತು ಕರಿಯರ್ ಬಗ್ಗೆ ಹೇಳುವುದಾದರೆ ಈಗ ಅವರು ದೊಡ್ಡ ರಾಜಕಾರಣಿಯಾಗಿದ್ದಾರೆ. ಮೊದಲು ಸಮಾಜವಾದಿ ಪಾರ್ಟಿಯಲ್ಲಿದ್ದ ಜಯಪ್ರದಾ ಅವರು 2019ರಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ಸೇರಿದ್ದಾರೆ. ಇವರ ತಂದೆ ತೆಲುಗು ಫಿಲಂ ಇಂಡಸ್ಟ್ರಿಯಲ್ಲಿ ಫೈನಾನ್ಸಿಯರ್ ಆಗಿದ್ದರು. ಅವರು ಜಯಪ್ರದಾ ಅವರಿಗೆ ಚಿಕ್ಕಂದಿನಿಂದಲೇ ಡಾನ್ಸ್ ಮತ್ತು ಸಂಗೀತದ ಶಿಕ್ಷಣವನ್ನು ನೀಡಿದ್ದರು. ನಂತರ ತೆಲುಗು, ತಮಿಳು, ಕನ್ನಡ, ಹಿಂದಿ, ಬಂಗಾಳಿ ಹೀಗೆ ಅನೇಕ ಭಾಷೆಗಳಲ್ಲಿ ನಟಿಸಿ ದೇಶದ ತುಂಬೆಲ್ಲ ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.