Video: ಭಕ್ತರ ಜೊತೆಗೆ ನಾಯಿಯು ಸಹ ಭಜನೆ ಹಾಡು ಹಾಡುತ್ತಿರುವ ಅದ್ಭುತವಾದ ವಿಡಿಯೋ ನೋಡಿ!!
ಇಂದು ಪ್ರತಿಯೊಬ್ಬರ ಜೀವನ ಯಾಂತ್ರಿಕ ಜೀವನ ಅಂದರೆ ಗಡಿಯಾರದ ಮೇಲೆ ನಡೆಯುವ ಜೀವನವಾಗಿದೆ. ಇದರಿಂದ ಪ್ರತಿಯೊಂದು ಸೆಕೆಂಡ್ ಕೂಡಾ ತುಂಬಾ ಮಹತ್ವ ವಾಗಿದೆ. ಓಡುತ್ತಿರುವ ಜೀವನದಲ್ಲಿ ಎಲ್ಲರಿಗೂ ನೆಮ್ಮದಿ ಸಿಗುತ್ತೆ ಅಂತ ಹೇಳಲು ಆಗುವದಿಲ್ಲ. ಹೀಗಾಗಿ ಕೆಲವರು ಸುಖ ಶಾಂತಿ ಪಡೆಯುವ ಸಲುವಾಗಿ ಬೇರೆ ಬೇರೆಯಾದ ದಾರಿಯನ್ನು ಅಥವಾ ಹವ್ಯಾಸವನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ಎಲ್ಲರ ಮನದಲ್ಲಿ ದೇವರ ಕುರಿತು ಅಪಾರ ಭಕ್ತಿ ಇರುತ್ತೆ ಅಂತ ಹೇಳಲು ಸಾಧ್ಯವಿಲ್ಲ. ಆದರೆ ಒಂದು ನೆನಪಿರಲಿ’ ದೇವರ ಆಜ್ಞೆ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಸಹ ಚಲಿಸಲಾಗದು’ ಎಂದ ಗಾದೆ ಮಾತು ಹಿಂದಿನಿಂದ ನಾವು ನೀವೆಲ್ಲ ಕೇಳುತ್ತಿದ್ದೇವೆ.
ದೇವರನ್ನಿ ವಲಿಸಿಕೊಳ್ಳುವ ಸಲುವಾಗಿ ಜನರು ಇಂದು ವಿಧ ವಿಧವಾದ ಕಾರ್ಯಕ್ರಮ ಗಳನ್ನು ಮಾಡುತ್ತಾರೆ. ಅಂದರೆ ದೇವರಿಗೆ ನೈವೇದ್ಯ ನೀಡುವದು, ದಿನಾಲೂ ಪೂಜೆ ಮಾಡುವದು, ದಿನಾಲೂ ದೇವರನ್ನು ನಮಸ್ಕಾರ ಮಾಡುವದು ಮತ್ತು ದೇವರ ಭಜನೆ ಮಾಡುವದು. ಭಜನೆ ಮಾಡುವದು ಹಿಂದಿನ ಕಾಲದಿಂದಲೂ ನಡೆದು ಬಂದ ಹಳೆಯ ಸಂಪ್ರದಾಯವಾಗಿದೆ. ಹಿಂದೂ ಧರ್ಮದಲ್ಲಿ ದೇವರ ನಾಮಸ್ಮರಣೆ ಮಾಡುತ್ತ ಭಜನೆ ಮಾಡಿದರೆ ನಮಗೆ ಒಳ್ಳೆಯದಾಗುತ್ತೆ ಅಂತ ದೊಡ್ಡವರು ಹೇಳುತ್ತಾರೆ. ಈ ಭಜನೆಯ ಒಂದು ವಿಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಸದ್ಯಕ್ಕೆ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ, ಒಂದು ಭಜನೆಯ ತಂಡ ಮಂದಿರದಲ್ಲಿ ಭಜನೆ ಮಾಡುತ್ತಿರುತ್ತದೆ. ಅಷ್ಟರಲ್ಲಿ ಆ ಮಂದಿರದ ಒಳಗಡೆ ಒಂದು ನಾಯಿ ಬರುತ್ತೆ. ನಾಯಿ ಬಂದಾಗ ಎಲ್ಲರೂ ಆಶ್ಚರ್ಯ ಪಡುತ್ತಾರೆ. ಆದರೆ ನಾಯಿ ಬಂದದನ್ನು ಗಮನಿಸಿ ಈ ಭಜನೆ ಮಾಡುವ ವ್ಯಕ್ತಿ ಹಾಗೆ ತನ್ನ ಹಾಡನ್ನು ಹಾಡುತ್ತಿರುತ್ತಾನೆ. ಅದನ್ನು ಆಲಿಸಿದ ನಾಯಿ ಸಹ ಅವರ ರಾಗದೊಂದಿಗೆ ಹಾಡಲು ಶುರು ಮಾಡುತ್ತದೆ. ಇದನ್ನು ಕಂಡು ಭಜನೆ ಮಾಡುವ ವ್ಯಕ್ತಿಗಳು ಸಹ ಮತ್ತಷ್ಟು ಖುಷಿಯಿಂದ ಜೋರಾಗಿ ಹಾಡಲು ಶುರು ಮಾಡುತ್ತಾರೆ. ಆಗ ನಾಯಿಯು ಸಹ ಅವರೊಂದಿಗೆ ಜೋರಾಗಿ ರಾಗದೊಂದಿಗೆ ಬೊಗಳಲು ಶುರು ಮಾಡುತ್ತದೆ. ಈ ನಾಯಿಯ ಭಜನೆ ಮಾಡುವ ಪರಿಯನ್ನು ಕಂಡು ನೆಟ್ಟಿಗರು ನಾಯಿಯನ್ನು ಹಾಡಿ ಹೋಗಳುತ್ತಿದ್ದಾರೆ.
ವಿಡಿಯೋ ನೋಡಿ.
View this post on Instagram