ಪ್ರೇಯಸಿಯ ಮದುವೆಯ ಸಮಯದಲ್ಲಿ ಮಂಟಪದ ಹಿಂದೆ ಬಂದ ಪ್ರಿಯಕರ, ಎಲ್ಲರೆದುರೆ ಹಣೆಗೆ…… ವಿಡಿಯೋ ನೋಡಿ!!

ಭಾರತದಲ್ಲಿ ಎಲ್ಲೆಡೆಯೂ ಸದ್ಯ ಮದುವೆಯ ಸೀಸನ್ ಜೋರಾಗಿ ನಡೆಯುತ್ತಿದೆ. ದಿನನಿತ್ಯ ಲಕ್ಷಾವಧಿ ಜೋಡಿಗಳು ಮದುವೆಯ ಬಂಧನದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾ ಓಪನ್ ಮಾಡುತ್ತಲೇ ಮದುವೆಯ ಸಂಬಂಧದ ಅನೇಕ ವಿಡಿಯೋಗಳು ಫೋಟೋಗಳು ಮತ್ತು ಸುದ್ದಿಗಳು ಕಣ್ಣೆದುರು ಬರುತ್ತವೆ. ಹಾಗೂ ಮದುವೆಯಲ್ಲಿ ನಡೆದ ರೋಚಕ ಪ್ರಸಂಗಗಳ ಸುದ್ದಿಗಳು ವೈರಲ್ ಆಗೆ ಆಗುತ್ತಿವೆ. ಈಗ ಮದುವೆಯಲ್ಲಿ ನಡೆದ ಸ್ವಲ್ಪ ಬೇರೆಯಾದ ದೃಶ್ಯ ಸೋಶಿಯಲ್ ಮೀಡಿಯಾದ ಟ್ರೆಂಡಿಂಗ್ ನಲ್ಲಿದೆ. ಈ ವಿಡಿಯೋ ನೋಡಿದವರೆಲ್ಲರೂ ಹುಬ್ಬೇರಿಸುತ್ತಿದ್ದಾರೆ.

ಈ ವಿಡಿಯೋದಲ್ಲಿ ಕಂಡುಬರುವ ಮದುಮಗ ಏನಿಲ್ಲವೆಂದರೂ 60 ರಿಂದ 65 ವಯಸ್ಸಿನವರಾಗಿದ್ದರೆ ವಧು ಆತನ ವಯಸ್ಸಿನ ಅರ್ಧಕ್ಕಿಂತಲೂ ಕಡಿಮೆ ವಯಸ್ಸಿನವರಾಗಿದ್ದಾಳೆ. ಮದುಮಕ್ಕಳಿಬ್ಬರ ಈ ವಿಡಿಯೋ ನೋಡಿದ ನಂತರ ನೇಟಿಜನ್ಸ್ ಗಳಿಗೆ ತಮ್ಮ ಕಣ್ಣುಗಳ ಮೇಲೆ ವಿಶ್ವಾಸವೇ ಕೂಡುತ್ತಿಲ್ಲ.

ವಿಡಿಯೋದಲ್ಲಿ ಕಂಡುಬರುವ ಹಾಗೆ ವೃದ್ಧ ವ್ಯಕ್ತಿ ಮದುವೆಯ ಉಡುಪಿನಲ್ಲಿ ಬಂದು ಕುಳಿತಿರುತ್ತಾನೆ ಆತನ ಬದಿಯಲ್ಲಿ ಮದುಮಗಳು ಸಹ ಕುಳಿತಿರುತ್ತಾಳೆ. ಸಂಪ್ರದಾಯದಂತೆ ಮದುವೆಯ ಕಾರ್ಯಕ್ರಮ ನಡೆಯುತ್ತಿರುತ್ತದೆ ಆಗ ಮಾತ್ರ ಮದುವೆ ಮಾಡಿಕೊಳ್ಳುವ ಯುವತಿಯ ಪ್ರಿಯಕರ ಬರುತ್ತಾನೆ. ಸ್ಟೇಜ್ ಹಿಂದಿನಿಂದ ಬಂದು ಮದುಮಗಳು ಕುಳಿತ ಚೇರ್ ಹಿಂದೆ ನಿಂತು ತನ್ನ ಕೈಯಲ್ಲಿ ಕುಂಕುಮವನ್ನು ತಗೆದುಕೊಂಡು ಆಕೆಯ ಹಣೆಯ ಮೇಲೆ ಸಾವಕಾಶವಾಗಿ ಹಚ್ಚುತ್ತಾನೆ. ಇದನ್ನು ಕಂಡು ಮದುಮಗಳು ಸಹ ಆಶ್ಚರ್ಯ ಪಡುತ್ತಾಳೆ. ತನಗೆ ಹಿಂದಿನಿಂದ ಯಾರು ಕುಂಕುಮ ಹಚ್ಚುತ್ತಿದ್ದಾರೆ ಎಂದು. ಆಗ ಅವಳು ಹಿನೆ ತಿರುಗು ನೋಡಿದಾಗ ಅವಳ ಪ್ರಿಯಕರ ಕಾಣುತ್ತಾನೆ ಅಷ್ಟರಲ್ಲಿ ಅವಳು ಅವನನ್ನು ಕಂಡು ಮುಗುಳ್ನಗುತ್ತಾಳೆ. ಆಗ ಪ್ರಿಯಕರ ಮತ್ತಷ್ಟು ಹಣೆಗೆ ಬಡದು ಆಕೆಗೆ ಅಲ್ಲಿಂದ ಎಬ್ಬಿಸಿ ಕರೆದುಕೊಂಡು ಪರಾರಿಯಾಗುತ್ತಾನೆ. ತದನಂತರ ಮದುಮಗ ಹೊರಳಿ ನೋಡುವಷ್ಟರಲ್ಲಿ ಮದುಮಗಳು ಮಾಯವಾಗಿರುವದನ್ನು ಕಂಡು ಆಶ್ಚರ್ಯ ಪಡುತ್ತಾನೆ.

ವಿಡಿಯೋ ನೋಡಿ

 

View this post on Instagram

 

A post shared by @itshwetajha

ಸೋಶಿಯಲ್ ಮೀಡಿಯಾದಲ್ಲಿ ಈ ಅಪರೂಪದ ವಿಡಿಯೋ ವೈರಲ್ ಆಗುತ್ತಲೇ ನೇಟಿಜನ್ಸ್ ಗಳು ತಮ್ಮ ಪ್ರತಿಕ್ರಿಯೆಗಳ ಮಳೆಯನ್ನೇ ಹರಿಸುತ್ತಿದ್ದಾರೆ. ತಮ್ಮ ಕಮೆಂಟ್ಸ್ ಗಳಲ್ಲಿ ಅನೇಕ ಯುವಕರು ತಮ್ಮ ಪ್ರತಿಕ್ರಿಯೆ ವ್ಯಕ್ತ ಮಾಡಿದ್ದಾರೆ.