ನಿಮ್ಮ ಶೂ ಗಳು ಸಹ ಮನೆಯ ಹೊರಗಡೆ ಇಡುತ್ತಿದ್ದರೆ ಎಚ್ಚ#ರ! ಈ ವಿಡಿಯೋ ನೀವು ನೋಡಲೇ ಬೇಕು….

ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ತಮಾಷೆಯದಾದರೆ ಇನ್ನು ಕೆಲವು ಭೀತಿಯನ್ನುಂಟು ಮಾಡುತ್ತವೆ. ಇಂಥ ವಿಡಿಯೋಗಳಂತೂ ನೊಡನೋಡುವಷ್ಟರಲ್ಲಿ ವೈರಲ್ ಆಗಿ ಬಿಡುತ್ತವೆ. ಹೆಚ್ಚುತ್ತಿರುವ ಉಷ್ಣತೆಯಿಂದ ಬಚಾವ್ ಆಗುವ ಸಲುವಾಗಿ ಸಾಕಷ್ಟು ಜನರು ಮನೆಯಲ್ಲಿ ಏಸಿ ಅಳವಡಿಸಿಕೊಳ್ಳುತ್ತಾರೆ. ಈ ಎಸಿಯಲ್ಲಿಯೇ ಒಂದು ಹಾವು ಕಂಡು ಬಂದಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ನೀವು ಒಂದು ವೇಳೆ ನಿಮ್ಮ ಶೂಗಳನ್ನು ಮನೆಯ ಹೊರಗಡೆ ಇಡುತ್ತಿದ್ದರೆ ನಿಮ್ಮ ಶೂ ಚೆಕ್ ಮಾಡಿಕೊಳ್ಳುವ ಯೋಚನೆ ಬಂದೇ ಬರುತ್ತದೆ. ಕಾರಣ ಒಂದು ಹಾವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಶೂನಲ್ಲಿಯೇ ಅಡಗಿಕೊಂಡಿದೆ.

ಬರೀ ಹಾವು ಈ ಶಬ್ದ ಕೇಳಿದ ನಂತರವೇ ನಡಗುವ ಜನರು ಸಾಕಷ್ಟಿದ್ದಾರೆ. ಇನ್ನು ನಾವು ದಿನಾಲೂ ತೊಡುವ ಶೂಗಳಲ್ಲಿ ಹಾವು ವಾಸ್ತವ್ಯ ಮಾಡಿ ಕುಳಿತ್ತಿದ್ದನ್ನು ನೋಡಿದಾಗ ಮನೆಯವರಿಗೆ ಹೇಗಾಗಿರಬೇಡ? ಏಕೆಂದರೆ ನಮ್ಮ ಮನೆಯಲ್ಲಿ ಇರುವ ಯಾವ ವಸ್ತುವಿನಲ್ಲಿ ಹಾವು ಮನೆ ಮಾಡಿ ಕುಳಿತುಕೊಳ್ಳುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ. ಈ ಶೂನಲ್ಲಿದ್ದ ಹಾವು ಮನೆಯವರ ಸಪ್ಪಳದಿಂದಾಗಿ ಗೊತ್ತಾಗಿದೆ, ಏಕೆಂದರೆ ಮನೆಯಲ್ಲಿಯ ವ್ಯಕ್ತಿಗಳು ಧ್ವನಿ ಕೇಳಿ ಹೊರಗಡೆ ಬಂದು ಇಣುಕಿ ನೋಡುವಷ್ಟರಲ್ಲಿ ಈ ಹಾವಿನ ಮೇಲೇ ಮನೆಯಲ್ಲಿಯ ವ್ಯಕ್ತಿಗೆ ಗಮನ ಹೋಗಿದೆ. ಆಗ ಹಾವು ಇದ್ದದು ಖಾತರಿಯಾದಾಗ ಕುಟುಂಬದ ಸದಸ್ಯರು ಸರ್ಪಮಿತ್ರರಿಗೆ ಪೋನ್ ಮಾಡಿ ಕರೆಸುತ್ತಾರೆ. ತದನಂತರ ಈ ಹಾವನ್ನು ಒಬ್ಬ ಧೈರ್ಯವಂತ ಲೇಡಿ ಹಿಡಿಯುತ್ತಾಳೆ. ಹಿಡಿಯುವಾಗ ಅವಳು ಉತ್ತಮವಾಗಿ ಉಪದೇಶ ಮಾಡುತ್ತಾಳೆ ಅಂದರೆ ಪ್ರತಿಯೊಬ್ಬರು ತಮ್ಮ ಶೂ ಹಾಕಿಕೊಳ್ಳುವ ಮುಂಚೆ ಒಂದು ಬಾರಿ ಖಂಡಿತವಾಗಿಯೂ ಚೆಕ್ ಮಾಡಿ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ನೋಡಿ ನೇಟಿಜನ್ಸ್ ಗಳು ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ.

ವಿಡಿಯೋ ನೋಡಿ..

ಪ್ರಸ್ತುತ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಐಎಫ್ ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಐವತ್ತು ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.