Video; ಸ್ಟೇರ್ ಕೇಸ್ ಹತ್ತಿ ಬಾಲ್ಕನಿಗೆ ಎಂಟ್ರಿ ಮಾಡಿದ ರಸ್ತೆ ಮೇಲಿನ ಗೂಳಿ; 14 ಗಂಟೆಗಳ ಟೆರರ್ ನೋಡಿ ಒಂದು ನಿಮಿಷದಲ್ಲಿ…

ರಸ್ತೆಯ ಮೇಲೆ ಓಡಾಡಿಕೊಂಡಿರುವ ಬೀಡಾಡಿ ಪ್ರಾಣಿಗಳಿಂದ ಅನೇಕ ಸಲ ಮನುಷ್ಯರಿಗೆ ಸಮಸ್ಯೆಗಳು ಉಂಟಾಗುತ್ತವೆ. ಎಷ್ಟೋ ಸಲ ರಸ್ತೆಯ ಮೇಲೆಯೂ ಅನೇಕ ದುರಂತಗಳಿಗೆ ಈ ಪ್ರಾಣಿಗಳು ಕಾರಣವಾಗುತ್ತವೆ. ರಸ್ತೆಯ ಮೇಲೆ ಗೂಳಿ ಅಥವಾ ಇನ್ನಿತರ ಪ್ರಾಣಿಗಳು ಎದುರಾದರೆ ಭಯ ಹುಟ್ಟುತ್ತದೆ. ಇನ್ನು ಇಂತಹ ಪ್ರಾಣಿಗಳು ಮನೆಯ ಬಾಲ್ಕನಿಗೆ ಎಂಟ್ರಿ ಕೊಟ್ಟರೆ ಹೇಗಾಗುತ್ತದೆ ಸ್ವಲ್ಪ ಯೋಚಿಸಿ…

ರಸ್ತೆಯ ಮೇಲೆ ಸುಳಿದಾಡುವ ಪ್ರಾಣಿಗಳಿಂದ ಆಗುವ ಅಪಘಾತಗಳು ಎಷ್ಟೋ ಸಲ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಕೆಲವು ಬಾರಿ ಈ ಪ್ರಾಣಿಗಳು ತಮ್ಮ ತಮ್ಮಲ್ಲಿ ಜಗಳಾಡುತ್ತಾ ಅಂಗಡಿ ಮುಗ್ಗಟ್ಟುಗಳಲ್ಲಿ ಮತ್ತು ಮನೆಗಳಲ್ಲಿ ಸೇರುವುದುಂಟು. ಸದ್ಯ ಇದೇ ರೀತಿಯ ಒಂದು ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಇಲ್ಲಿ ಒಂದು ಮನೆಯ ಪ್ಯಾಸೇಜ್ ನಲ್ಲಿ ಗೂಳಿ ಸೇರಿದ ನಂತರ 14 ಗಂಟೆಗಳವರೆಗೆ ಮನೆಯವರು ಬಾಗಿಲು ಮುಚ್ಚಿಕೊಂಡು ಒಳಗೆ ಕುಳಿತಿದ್ದಾರೆ.

ಪ್ರಸ್ತುತ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ಇಲ್ಲಿ ಬೀದಿ ಗೂಳಿಯೊಂದು ಸ್ಟೇರ್ ಕೇಸ್ ಹತ್ತಿ, ಮೊದಲನೇ ಮಹಡಿಯ ಪ್ಯಾಸೇಜಿಗೆ ಹೋಗಿದೆ. ಗೂಳಿಗೆ ಹೆದರಿ ಮನೆಯವರು ಬಾಗಿಲು ಬಂದ್ ಮಾಡಿಕೊಂಡು ಒಳಗೆಯೇ ಕುಳಿತುಕೊಂಡಿದ್ದಾರೆ. ಮನೆಯ ಮಾಲೀಕರಾದ ದೇವ್ ಮಿಶ್ರ ರಾತ್ರಿ ಪೂರ್ತಿ ಮುನಿಸಿಪಲ್ ಕಾರ್ಪೊರೇಷನ್ ಹಾಗೂ ಗೋ ರಕ್ಷಕರಿಗೆ ಸಹಾಯಕ್ಕಾಗಿ ಕಾಲ್ ಮಾಡಿದ್ದೇ ಮಾಡಿದ್ದು. ಆದರೆ ಸಹಾಯಕ್ಕಾಗಿ ಯಾರು ಬಂದೇ ಇಲ್ಲ. 14 ಗಂಟೆಗಳ ನಂತರ ಮುಂಜಾನೆಯಾದ ಮೇಲೆ ಮೊದಲನೇ ಮಹಡಿಯಿಂದ ಗೂಳಿಗೆ ಹೇಗೋ ಕೆಳಗೆ ಇಳಿಸಿ ಕಳುಹಿಸಿದ್ದಾರೆ. ಪ್ರಸ್ತುತ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ.

ವಿಡಿಯೋ ನೋಡಿ

ವಿಡಿಯೋ ನೋಡಿದ ನಂತರ ನೆಟ್ಟಿಗರಿಗೆ ವಿಶ್ವಾಸವೇ ಕೂಡುತ್ತಿಲ್ಲ. ಈ ಪ್ರಾಣಿಗಳನ್ನು ಯಾರು ಸಾಕುತ್ತಾರೋ ಅವರು ಸರಿಯಾಗಿ ತಮ್ಮ ಪ್ರಾಣಿಗಳ ಮೇಲೆ ಗಮನವೇ ನೀಡುವುದಿಲ್ಲವೆಂದು ದೂಷಿಸಿದ್ದಾರೆ. ಈ ಪ್ರಾಣಿಗಳನ್ನು ಸಾಕುವವರು ಸಮಯ ಸಮಯಕ್ಕೆ ಅವುಗಳಿಗೆ ಅನ್ನ ನೀರು ಕೊಡುತ್ತಾ ಇರಬೇಕು. ಎಷ್ಟೋ ಸಲ ಈ ಕಾರಣಕ್ಕಾಗಿ ರಸ್ತೆಯ ಮೇಲೆ ಪ್ರಾಣಿಗಳು ತಮ್ಮ ತಮ್ಮಲ್ಲಿಯೇ ಗುದ್ದಾಡುವದುಂಟು. ಹೀಗಾಗಿ ಪ್ರಾಣಿಗಳಿಗೆ ಸಂಬಂಧಪಟ್ಟವರು ಪ್ರಾಣಿಗಳ ಬಗ್ಗೆ ಕಾಳಜಿ ವಹಿಸಬೇಕು.