ವೆಸ್ಟ್ ಇಂಡೀಸ್ ಆಟಗಾರರ ಹೆಸರುಗಳು ಭಾರತೀಯವಾಗಿವೆ ಏಕೆ? ನಮ್ಮ ಪದ್ಧತಿಯಂತೆ ಮದುವೆಯಾಗುವ ಹಿಂದಿನ ರೋಚಕತೆ ಏನು?
ಪ್ರಸ್ತುತ ಭಾರತ ಮತ್ತು ವೆಸ್ಟ್ ಇಂಡೀಸ್ ದೇಶಗಳ ನಡುವೆ ಟಿ 20 ಪಂದ್ಯಗಳು ನಡೆದವು. ಈ ಸರಣಿ ಭಾರತ 2-1 ಅಂತರದಿಂದ ಗೆದ್ದು ಬೀಗಿತು. ಕ್ರಿಕೆಟ್ ಎಂದಾಗ ವೆಸ್ಟ್ ಇಂಡೀಸ್ ತಂಡಕ್ಕೆ ತುಂಬಾ ಮಹತ್ವವಿದೆ. ಅದರಲ್ಲೂ ಐಪಿಎಲ್ ತಂಡಗಳಲ್ಲಿ ಈ ದೇಶದ ಆಟಗಾರರಿಗೆ ತುಂಬಾ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಮೊದಲಿನಿಂದಲೂ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ನಿಂದ ತಮ್ಮ ವರ್ಚಸ್ಸನ್ನು ಮೆರೆದಿದೆ. ಈ ತಂಡದಲ್ಲಿಯ ಅನೇಕ ಆಟಗಾರರ ಹೆಸರು ಭಾರತೀಯ ಹೆಸರುಗಳಂತೆ ಕಂಡುಬರುತ್ತವೆ. ಸುನಿಲ್ ನಾರಾಯಣ, ರಾಮ ನರೇಶ ಸರ್ವಾನ್, ದಿನೇಶ್ ರಾಮ್ ದೀನ್, ಶಿವನಾರಾಯಣ ಚಂದ್ರಪಾಲ, ಮಾಜಿ ಆಟಗಾರ ಕಾಲಿ ಚರಣ್ ಹೀಗೆ ಅನೇಕ ಹೆಸರುಗಳನ್ನು ನೋಡಿದಾಗ ನಮ್ಮ ಭಾರತೀಯರ ಹೆಸರುಗಳಂತೆ ತಿಳಿದು ಬರುತ್ತದೆ. ಇವರ ಹೆಸರುಗಳಲ್ಲಿ ಸುನಿಲ್, ದಿನೇಶ್, ರಾಮ್, ಶಿವನಾರಾಯಣ, ಚಂದ್ರ ಮತ್ತು ಸೂರ್ಯ ಹೀಗೆ ಇನ್ನು ಅನೇಕ ಭಾರತೀಯ ಶಬ್ದಗಳು ಕಂಡುಬರುತ್ತವೆ. ಹೀಗಿರುವಾಗ ಈ ಜನ ನಿಜಕ್ಕೂ ಯಾರಿದ್ದಾರೆ? ಇದರ ಹಿಂದಿನ ರೋಚಕ ಕಥೆಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಮಿತ್ರರೇ, ಇದರ ಪ್ರಾರಂಭ ಬ್ರಿಟಿಷ್ ಕಾಲದಿಂದಲೇ ಬ್ರಿಟಿಷರ ಪ್ರಭುತ್ವ ಭಾರತದ ಮೇಲೆ ಇದ್ದಾಗಿಂದ ಶುರುವಾಗಿದೆ. ಆ ಸಮಯದಲ್ಲಿ ಭಾರತದ ಹೊರತಾಗಿ ಅನೇಕ ದೇಶಗಳು ಬ್ರಿಟಿಷರ ಪಾರತಂತ್ರದಲ್ಲಿ ಸಿಲುಕಿದ್ದವು. ಹೀಗಾಗಿ ಬ್ರಿಟಿಷರು ಕೆಲಸಗಾರರ ಅವಶ್ಯಕತೆ ಎಲ್ಲೆಲ್ಲಿ ಬೀಳುತ್ತೋ ಅಲ್ಲಲ್ಲಿ ಭಾರತೀಯ ಜನರಿಗೆ ಕೆಲಸಕ್ಕಾಗಿ ಕರೆದುಕೊಂಡು ಹೋಗುತ್ತಿದ್ದರು. ಇದರ ಬದಲಾಗಿ ಅವರಿಗೆ ಕೈತುಂಬಾ ಸಂಬಳವೂ ಕೊಡುತ್ತಿದ್ದರು. ಇದನ್ನು ತಿಳಿದುಕೊಂಡ ಭಾರತೀಯರು ಹಡಗುಗಳ ಮುಖಾಂತರ ವಿದೇಶಗಳಲ್ಲಿ ಹೋಗಿ ಕೆಲಸ ಮಾಡ ಮಾಡತೊಡಗಿದರು. ಆದರೆ ಸಮಯ ಕಳೆದ ಹಾಗೆ ಮಾತ್ರ ಈ ಜನರಿಗೆ ತಾಪತ್ರಯ ಶುರುವಾಗಲು ಪ್ರಾರಂಭವಾಯಿತು. ದೊರೆಯುವ ಸಂಬಳ ಕಡಿಮೆಯಾಗಲು ಶುರುವಾಯಿತು. ಈ ರೀತಿ ದೇಶ ಬಿಟ್ಟು ಬಂದ ಕಾರ್ಮಿಕರಿಗೆ ‘ಗಿರಮಿಟಿಯಾ’ ಅಥವಾ ‘ಜಹಾಜಿ’ ಎಂದು ಸಂಬೋಧಿಸುತ್ತಿದ್ದರು. ಆ ಸಮಯದಲ್ಲಿ ಬ್ರಿಟಿಷರು ಭಾರತೀಯ ಕಾರ್ಮಿಕರಿಗೆ ಫಿಜಿ, ಮೋರಿಷಸ್, ದಕ್ಷಿಣ ಆಫ್ರಿಕಾ ಮತ್ತು ಕೆರೆಬಿಯನ್ ದ್ವೀಪಗಳಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಬ್ರಿಟಿಷರ ದಬ್ಬಾಳಿಕೆಗೆ ಬೇಸತ್ತ ಈ ಜನರು ಅದೇ ದೇಶಗಳಲ್ಲಿ ಕಾಯಂ ಆಗಿ ವಾಸ್ತವ್ಯ ಹೂಡುವ ಅಥವಾ ನೆಲೆಸುವ ನಿರ್ಣಯವನ್ನು ತೆಗೆದುಕೊಂಡರು. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಕೆರೆಬಿಯನ್ ಪ್ರದೇಶದಲ್ಲಿರುವ ಒಟ್ಟು 15 ವಿವಿಧ ದೇಶಗಳ ಆಟಗಾರರನ್ನು ಕೂಡಿ ತಯಾರಾದ ಕ್ರಿಕೆಟ್ ತಂಡವಾಗಿದೆ. ಇಲ್ಲಿ ಆಟವಾಡುವ ಅನೇಕ ಕ್ರಿಕೆಟ್ ಆಟಗಾರರು ಭಾರತೀಯರೇ ಹಾಗೂ ಹಿಂದುಗಳೇ ಆಗಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಕೆರೆಬಿಯನ್ ಹಾಡುಗಳಲ್ಲಿ ರಾಮ ಮತ್ತು ಶಿವ ದೇವರುಗಳ ಶಬ್ದಗಳು ಉಲ್ಲೇಖವಾಗಿರುವುದು ಕಂಡುಬರುತ್ತದೆ.

ಎಲ್ಲರಿಗೂ ಗೊತ್ತಿರುವ ಹಾಗೆ, ಯಾವಾಗ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಹತ್ತಿರ ಆಡಲು ಹಣವಿರಲಿಲ್ಲ ಆಗ ಭಾರತ ಅವರಿಗೆ ಸಹಾಯ ಹಸ್ತ ನೀಡಿತು. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಟಿ20 ವರ್ಲ್ಡ್ ಕಪ್ ಗೆದ್ದಾಗ ಭಾರತೀಯರೇ ನಮಗೆ ಸಹಾಯ ಮಾಡಿದರು ಎಂದು ನೆನಪಿಸಿಕೊಂಡಿದ್ದರು. ಐಪಿಎಲ್ ಪಂದ್ಯಗಳಲ್ಲಿಯೂ ಅತೀ ಹೆಚ್ಚು ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರರು ಕಂಡುಬರುವ ಹಿಂದಿನ ಕಾರಣ ಇದೇ ಆಗಿದೆ. ಇದರ ಹೊರತಾಗಿ ಅನೇಕ ವೆಸ್ಟ್ ಇಂಡೀಸ್ ಆಟಗಾರರು ಭಾರತೀಯ ಹುಡುಗಿಯರನ್ನೇ ವರಿಸುತ್ತಾರೆ. ಹೆಚ್ಚು ಕಡಿಮೆ ವೆಸ್ಟ್ ಇಂಡೀಸ್ ಆಟಗಾರರು ನಮ್ಮ ಬಂಧುಗಳೇ ಆಗಿದ್ದಾರೆ.