ಲುಂಗಿ ತೊಟ್ಟು ಕೈಯಲ್ಲಿ ನಕಲಿ ಮೈಕ್ ಹಿಡಿದು ಅಸಲಿ ರಿಪೋರ್ಟಿಂಗ್ ಮಾಡಿ ಸತ್ಯ ಹೊರ ಹಾಕಿದ ಹುಡುಗ!
ಮಕ್ಕಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಧೂಳ್ ಎಬ್ಬಿಸುತ್ತವೆ. ಸದ್ಯ ಟ್ವಿಟರ್ ಪೇಜ್ ನಲ್ಲಿ @UtkarshSingh_ಈ ಹೆಸರಿನಿಂದ ವಿಡಿಯೋ ಒಂದು ಪೋಸ್ಟ್ ಮಾಡಲಾಗಿದೆ. ಪ್ರಸ್ತುತ ವಿಡಿಯೋದಲ್ಲಿ ಲುಂಗಿಯನ್ನು ಸುತ್ತಿಕೊಂಡ ಬಾಲಕನೊಬ್ಬ ಕೈಯಲ್ಲಿ ನಕಲಿ ಮೈಕ್ ಹಿಡಿದರೂ ಆತ ಮಾಡಿದ ರಿಪೋರ್ಟ್ ತೀರಾ ಅಸಲಿಯಂತೆ ಮಾಡಿದ್ದಾನೆ. ಆತ ಮಾಡಿದ ರಿಪೋರ್ಟ್ ನಿಜಕ್ಕೂ ಸೂಪರ್ ಸತ್ಯ ಇದೆ. ಒಂದು ಸರ್ಕಾರಿ ಶಾಲೆಯಲ್ಲಿಯ ಅವ್ಯವಸ್ಥೆಯನ್ನು ಈತ ತನ್ನ ರಿಪೋರ್ಟ್ ನಿಂದ ಬಯಲಿಗೆ ತಂದಿದ್ದಾನೆ.
ಪ್ರಸ್ತುತ ಸರ್ಕಾರಿ ಶಾಲೆಯು ತುಂಬಾ ಅವ್ಯವಸ್ಥೆಯಿಂದ ಕೂಡಿದೆ. ಈ ಸರ್ಕಾರಿ ಶಾಲೆಯಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ ಹಾಗೂ ಶೌಚಾಲಯದ ವ್ಯವಸ್ಥೆಯಂತೂ ಮೊದಲೇ ಇಲ್ಲ. ಆಟದ ಬಯಲಿನಲ್ಲಿ ಮಕ್ಕಳ ಸ್ಥಾನ ಪೊದೆಗಳು ತೆಗೆದುಕೊಂಡಿದೆ.
ಮಕ್ಕಳು ಸತ್ಯದ ಪ್ರತಿರೂಪವಾಗಿರುತ್ತವೆ. ಮಕ್ಕಳಿಗೆ ಬೇರೊಬ್ಬರ ಮೋಸ ವಂಚನೆ ಗಮನಕ್ಕೆ ಬರುವುದಿಲ್ಲ. ಕೆಲವರಿಗೆ ಲಾಭ ಅಥವಾ ಇನ್ನೊಬ್ಬರಿಗೆ ಹಾನಿ ಮಾಡಬೇಕೆಂಬ ಉದ್ದೇಶ ಅವರ ಮನದಲ್ಲಿ ಇರುವುದಿಲ್ಲ. ಹೀಗಾಗಿ ಮಕ್ಕಳು ಮನಸ್ಸಿನಲ್ಲಿ ಬಂದದ್ದನ್ನು ಮತ್ತು ಕಣ್ಣಿಗೆ ಕಂಡದ್ದನ್ನು ನೇರವಾಗಿ ಹೊರಹಾಕುತ್ತಾರೆ. ಸದ್ಯ ಒಬ್ಬ ಬಾಲಕನ ಇದೇ ರೀತಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈತ ತನ್ನ ರಿಪೋರ್ಟಿಂಗ್ನಲ್ಲಿ ಕಂಡಿದ್ದನ್ನೇ ನೇರ ಹಾಗೂ ಸರಿಯಾಗಿ ಪ್ರಸ್ತುತಪಡಿಸಿದ್ದಾನೆ. ಹುಡುಗನ ಸರಳ ಮತ್ತು ನೈಜ ರಿಪೋರ್ಟಿಂಗ್ ನೋಡುಗರ ಮನಸ್ಸನ್ನು ಗೆದ್ದುಕೊಳ್ಳುತ್ತದೆ. ಕೈಯಲ್ಲಿ ತಾವೇ ತಯಾರಿಸಿದ ಒಂದು ಜುಗಾಡು ನಕಲಿ ಮೈಕ್ ಹಿಡಿದು ತುಂಬಾ ಅಸಲಿಯಾಗಿ ತನ್ನ ಬೆಸ್ಟ್ ಪರ್ಫಾರ್ಮೆನ್ಸ್ ರಿಪೋರ್ಟಿಂಗ್ ನೀಡಿದ್ದಾನೆ.
ಬಾಲಕ ತನ್ನ ರಿಪೋರ್ಟಿಂಗ್ ಸಮಯದಲ್ಲಿ ಟೀ ಶರ್ಟ್ ಜೊತೆಗೆ ಒಂದು ಲುಂಗಿ ಸುತ್ತಿಕೊಂಡು ಒಂದು ಸರ್ಕಾರಿ ಶಾಲೆಯಲ್ಲಿ ಪ್ರವೇಶಿಸುತ್ತಾನೆ. ತದನಂತರ ತನ್ನ ರಿಪೋರ್ಟಿಂಗ್ನಲ್ಲಿ ಶಾಲೆ, ಕ್ಲಾಸ್ ರೂಮ್, ಶೌಚಾಲಯ ಹೀಗೆ ಒಂದೊಂದಾಗಿ ವಿಷಯಗಳನ್ನು ಬಿಚ್ಚಿಡುತ್ತಾ ಹೋಗುತ್ತಾನೆ. ತನ್ನ ರಿಪೋರ್ಟಿನಲ್ಲಿ ಮಕ್ಕಳು ಈ ರೀತಿಯ ವ್ಯವಸ್ಥೆಯಲ್ಲಿ ಹೇಗೆ ಶಾಲೆ ಕಲಿಯಬೇಕು ಎಂಬ ಪ್ರಶ್ನೆಯನ್ನು ಜನರಿಗೆ ಕೇಳುವುದಿತ್ತು. ಇಷ್ಟೆಲ್ಲಾ ಅವ್ಯವಸ್ಥೆ ಇರುವಾಗ ಶಾಲೆಯಲ್ಲಿ ಶಿಕ್ಷಕರು ಸಹ ಕಾಣಿಸುತ್ತಿಲ್ಲ ಎಂಬ ದುಃಖ ಬೇರೆ ಅದರಲ್ಲಿ ಇತ್ತು. ಹೀಗೆ ಪ್ರಸ್ತುತ ಬಾಲಕ ಎಲ್ಲ ವಿಷಯಗಳನ್ನು ತನ್ನ ರಿಪೋರ್ಟಿಂಗ್ನಲ್ಲಿ ನಮೂದಿಸಿದ್ದಾನೆ.
ಎಲ್ಲವೂ ನಕಲಿ ಉಪಕರಣಗಳ ಜೊತೆಗೆ ತುಂಬಾ ಅಸಲಿಯಾದ ಪತ್ರಕಾರಿತೆಯನ್ನು ಈ ಹುಡುಗ ಮಾಡಿದ್ದಾನೆ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಬಾಲಕ ತುಂಬಾ ಸುಂದರವಾಗಿ ಈ ವಿಷಯಗಳನ್ನು ಅಥವಾ ಈ ಶಾಲೆಯಲ್ಲಿಯ ಸಮಸ್ಯೆಗಳನ್ನು ತನ್ನ ರಿಪೋರ್ಟಿಂಗ್ನಲ್ಲಿ ಪ್ರಸ್ತುತಪಡಿಸಿದ್ದಾನೆ. ಈ ಹುಡುಗನ ಕೆಲಸವನ್ನು ದೊಡ್ಡವರು ಮಾಡಬೇಕಾದರೆ ಮೊದಲು ಅವರು ಜರ್ನಲಿಸಂ ಅಭ್ಯಾಸ ಮಾಡಬೇಕಾಗುತ್ತದೆ ನಂತರ ಒಳ್ಳೆಯ ತರಬೇತಿಯನ್ನು ಪಡೆದುಕೊಂಡು ಕೆಲಸಕ್ಕೆ ತಯಾರಾಗಬೇಕಾಗುತ್ತದೆ. ಆದರೆ ಈ ಬಾಲಕ ಈ ವಯಸ್ಸಿನಲ್ಲಿ ಇಷ್ಟೊಂದು ಸುಂದರವಾಗಿ ರಿಪೋರ್ಟಿಂಗ್ ಮಾಡಿದ್ದಾನೆಂದರೆ ಮೆಚ್ಚಲೇಬೇಕು, ಅಲ್ವಾ?
ವಿಡಿಯೋ ನೋಡಿ
नीयत सही हो तो बिना माइक थामे भी रिपोर्टिंग कर सच्चाई दिखाई जा सकती है. pic.twitter.com/rpuYVqXLqC
— Utkarsh Singh (@UtkarshSingh_) August 4, 2022