ನಾಯಿಗೆ ಡಾಕ್ಟರ್ ಮೇಲೆ ಕ್ರಶ್ ಆದಾಗ ಅದರ ರಿಯಾಕ್ಷನ್ ಹೇಗಿರುತ್ತೆ ನೋಡಿ…!!

ಮನುಷ್ಯ ತನ್ನ ಭಾವನೆಗಳನ್ನು ವ್ಯಕ್ತ ಪಡಿಸಬೇಕಾದರೆ ಮಾತುಗಳ ಮುಖಾಂತರವೇ ಸಾಧ್ಯವಿದೆ, ಬೇರೆ ಯಾವುದೇ ಪ್ರಕಾರದಿಂದಲೂ ಸಾಧ್ಯವಿಲ್ಲ ಎಂದರೆ ಶುದ್ಧ ತಪ್ಪು. ಬರೀ ಮುಖದ ಮೇಲಿನ ಭಾವನೆಗಳಿಂದಲೂ ನಮ್ಮ ಮನಸ್ಸಿನಲ್ಲಿರುವ ಯಾವುದೇ ವಿಚಾರವನ್ನು ಹೊರಗೆ ಹಾಕಲು ಸಾಧ್ಯವಿದೆ. ಇದಕ್ಕೆ ಪುಷ್ಟಿಯನ್ನು ನೀಡುವ ಸಾಕುನಾಯಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಜಗತ್ತಿನಲ್ಲಿಯೇ ವಿಶ್ವಾಸಕ್ಕೆ ಪಾತ್ರವಾದ ಪ್ರಾಣಿಗಳಲ್ಲಿ ಮೊದಲ ನಂಬರ್ ನಾಯಿಯದೇ ಎಂದರೆ ತಪ್ಪಲ್ಲ. ಇದು ತುಂಬಾ ಜಾಣ ಪ್ರಾಣಿಯಾಗಿರುವುದರೊಂದಿಗೆ ತನ್ನ ಮಾಲೀಕನ ಜೊತೆಗೆ ಯಾವತ್ತೂ ನಿಷ್ಠೆಯಿಂದ ಇರುತ್ತದೆ. ಹೀಗಾಗಿ ಇದು ಮಾನವನ ನಿಜವಾದ ಮಿತ್ರನಾಗಿದೆ. ಇಂದು ಪೋಲೀಸರ ಕೈಲಾಗದ ಕೆಲಸ ನಾಯಿ ಮಾಡಿ ತೋರಿಸುತ್ತದೆ ಅಂದರೆ ಅಪರಾಧಿ ಎಲ್ಲಿದ್ದಾನೆ ಎಂಬುದು ಅಥವಾ ಸಂಶಯಾಸ್ಪದ ವ್ಯಕ್ತಿ ಯಾರೆಂಬುದು ನೋಡು ನೋಡುವಷ್ಟರಲ್ಲಿ ನಾಯಿ ಕಂಡು ಹಿಡಿಯುತ್ತದೆ.

ನಾಯಿಯ ಸಾಹಸದ ಎಷ್ಟೋ ವಿಡಿಯೋ ನಾವು ಸಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಆದರೆ ನಾಯಿಗಳು ಎಷ್ಟು ಜಾಣವಾಗಿರುತ್ತವೆಯೋ ಅಷ್ಟೇ ಕಪಟಸಹ ಆಗಿರುತ್ತವೆ ಅನ್ನೋದು ಎಲ್ಲರಿಗೂ ಗೊತ್ತು. ಕೆಲವೊಮ್ಮೆ ನಾಯಿ ತನಗೆ ಏನು ಆಗದೆ ರಸ್ತೆಯ ಮಧ್ಯದಲ್ಲಿ ಬಿದ್ದು ಹೋಗಿ ಬರೋ ವಾಹನಗಳಿಗೆ ಅಡ್ಡಿ ಮಾಡಿ ಕೊನೆಗೆ ಇದಕ್ಕೆ ಸಹಾಯ ಮಾಡಲು ಜನರು ಬಂದಾಗ ಅಲ್ಲಿಂದ ಎದ್ದು ಹೋಗಿರುವ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇವೆ. ನಾಯಿ ನಾಯಿಗಳ ಮದ್ಯೆ ಜಗಳವಾದಗ ಅಲ್ಲಿ ಕೆಲವೊಂದು ನಾಯಿಗಳು ಮಾಡಿರುವ ವಿಚಿತ್ರ ಕೃತ್ಯ ನೋಡಿದರೆ ತುಂಬಾ ನಗು ಬರುತ್ತದೆ.

ಆದರೆ ಪ್ರಸ್ತುತ ವಿಡಿಯೋದಲ್ಲಿ ಮಾತ್ರ ನಾಯಿಯ ಪ್ರೇಮದ ಸ್ವಭಾವ ನೋಡಲು ದೊರಕಿದೆ. ಮನುಷ್ಯರಿಗೆ ಅಷ್ಟೇ ಬೇರೆಯವರ ಮೇಲೆ ಕ್ರಶ್ ಆಗುತ್ತೆ ಅಂತ ಹೇಳಿದರೆ ಅದು ಶುದ್ಧ ತಪ್ಪು ಏಕೆಂದರೆ ನಾಯಿಗಳಿಗೂ ಸಹ ಮನುಷ್ಯರ ಮೇಲೆ ಕ್ರಶ್ ಆಗುತ್ತೆ ಅಂತ ಈ ವಿಡಿಯೋ ಹೇಳಿಕೊಡುತ್ತೆ. ಈ ವಿಡಿಯೋದಲ್ಲಿ ಮಾಲೀಕ ತನ್ನ ನಾಯಿಯ ಕಾಲು ಮುರಿದಾಗ ಅದಕ್ಕೆ ಟ್ರೀಟ್ಮೆಂಟ್ ಮಾಡಲು ಆಸ್ಪತ್ರೆಗೆ ತಗೆದುಕೊಂಡು ಹೋಗುತ್ತಾನೆ. ಅಲ್ಲಿ ಒಂದು ಟೇಬಲ್ ಮೇಲೆ ನಾಯಿಯನ್ನು ಕೂಡಿಸುತ್ತಾನೆ. ತದನಂತರ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಒಬ್ಬ ಡಾಕ್ಟರ್ ಅಂದರೆ ಲೇಡಿ ಡಾಕ್ಟರ್ ಇದಕ್ಕೆ ಉಪಚಾರ ಮಾಡಲು ಬರುತ್ತಾರೆ. ಆಗ ನಾಯಿ ಅವರನ್ನು ಕಂಡು ತುಂಬಾನೇ ಮುಜುಗರ ಪಡುತ್ತೆ. ತಕ್ಷಣ ಡಾಕ್ಟರ್ ನಾಯಿಯ ಕಾಲನ್ನು ತನ್ನ ಕೈಯಲ್ಲಿ ಹಿಡಿದು ಅದಕ್ಕೆ ಉಪಚಾರ ಮಾಡಲು ಶುರು ಮಾಡುತ್ತಾರೆ. ನಾಯಿಯನ್ನು ಡಾಕ್ಟರ್ ಸ್ಪರ್ಶ ಮಾಡಿದ ತಕ್ಷಣ ನಾಯಿಗೆ ಡಾಕ್ಟರ್ ಮೇಲೆ ಕ್ರಶ್ ಆಗಿ ಬಿಡುತ್ತೆ. ನಾಯಿ ಡಾಕ್ಟರ್ ನ್ನು ಒಂದೇ ಸವನೆ ಪ್ರೀತಿಯಿಂದ ನೋಡುತ್ತಾ ಇರುತ್ತೆ ಡಾಕ್ಟರ್ ಸಹ ನಗುತ್ತಾ ಅದಕ್ಕೆ ಉಪಚಾರ ಮಾಡುತ್ತೆ. ನಾಯಿಯ ಈ ಸ್ವಭಾವ ನೋಡಿದರೆ ತುಂಬಾ ನಗು ಬರುತ್ತೆ.

ವಿಡಿಯೋ ನೋಡಿ …

 

View this post on Instagram

 

A post shared by k.c. 😊 (@k.c.1606)