SHOCKING! ಮೂರೇ ಮೂರು ಸೆಕೆಂಡಿನಲ್ಲಿ ದೇವಾಲಯದ ಪ್ರಾಂಗಣದಲ್ಲಿ ನಿಂತವರ ಮೇಲೆಯೇ ಬಿತ್ತು ಹೆಮ್ಮರ! ವಿಡಿಯೋ ಕ್ಯಾಮೆರಾದಲ್ಲಿ ಸೆರೆ.
ಸೋಶಿಯಲ್ ಮೀಡಿಯಾದ ಮುಖಾಂತರ ದೇಶದ ಅಷ್ಟೇ ಅಲ್ಲ ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುವ ಸುದ್ದಿಗಳು ಕ್ಷಣದಲ್ಲಿ ವೈರಲ್ ಆಗುತ್ತವೆ. ಪ್ರತಿಯೊಂದು ವಿಶೇಷ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಮುಖಾಂತರ ಅದ್ಭುತವಾದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗುತ್ತಿವೆ. ಸದ್ಯ ದೇವಾಲಯದ ಪ್ರಾಂಗಣದಲ್ಲಿ ನಡೆದ ಒಂದು ದೃಶ್ಯ ಎಲ್ಲೆಡೆಯು ವೈರಲ್ ಆಗುತ್ತಿದೆ. ಇನ್ನೊಂದು ವಿಶೇಷವೆಂದರೆ ಇದಕ್ಕೆ ದೈವ ಶಕ್ತಿಯ ಅಥವಾ ದೈವಿ ಚಮತ್ಕಾರ ಎಂದು ತಿಳಿಯಲಾಗುತ್ತಿದೆ. ಅಂತ ಯಾವ ಘಟನೆ ದೇವಾಲಯದ ಆವರಣದಲ್ಲಿ ನಡೆದಿದೆ ಎಂಬುದು ನೋಡೋಣ ಬನ್ನಿ.
ಅನೇಕ ವರ್ಷಗಳಿಂದ ಬೆಳದು ನಿಂತ ದೊಡ್ಡದಾದ ಆಲದ ಹೆಮ್ಮೆರ ಯಾವುದೇ ಕಾರಣವಿಲ್ಲದೆ ಕ್ಷಣದಲ್ಲಿ ಉರುಳಿ ಬೀಳಬೇಕೆಂದರೆ ಸಾಮಾನ್ಯ ಮಾತಲ್ಲ. ಇಂಥ ಹೆಮ್ಮೆರಗಳು ದೊಡ್ಡ ದೊಡ್ಡ ಬಿರುಗಾಳಿ, ಸುಂಟರಗಾಳಿಗೂ ಮಣಿಯದೆ, ಬಗ್ಗದೆ, ಕುಗ್ಗದೆ ಅಚಲವಾಗಿ ನಿಂತಿರುತ್ತವೆ. ಅಂಥ ಹೆಮ್ಮರ ಸುಮ್ಮಸುಮ್ಮನೆ ತಾನಾಗಿಯೇ ಉರುಳಿ ಬೀಳುವದೆಂದರೆ ತಮಾಷೆಯ ಮಾತಲ್ಲ. ರಾಜಸ್ಥಾನದ ಜೈಪುರ್ ನಲ್ಲಿಯ ದೇವಾಲಯದಲ್ಲಿ ಬೆಳೆದು ನಿಂತ ದೊಡ್ಡದಾದ ಆಲದ ಮರ ತನ್ನಂತಾನೆ ಉರುಳಿ ಬಿದ್ದಿದೆ. ವಿಡಿಯೋದಲ್ಲಿಯ ಈ ದೃಶ್ಯವನ್ನು ನೋಡಿದವರು ನಿಜಕ್ಕೂ ದಂಗಾಗುತ್ತಿದ್ದಾರೆ.
ನೋಡಿ ಈ ವಿಡಿಯೋ…
ಇಲ್ಲಿಯ ಬಾಲಾಜಿ ಮಂದಿರದಲ್ಲಿರುವ 30 ವರ್ಷ ಹಳೆಯದಾದ ಆಲದ ಮರವು ಮೂರೇ ಮೂರು ಸೆಕೆಂಡುಗಳಲ್ಲಿ ನೆಲಸಮವಾಗಿದೆ. ಆಲದ ಹೆಮ್ಮರ ಬೀಳುವಾಗ ಅದರ ಕೆಳಗೆ ಅನೇಕ ಜನ ಸ್ತ್ರೀ-ಪುರುಷ ಭಕ್ತರು ಮಾತನಾಡುತ್ತ ನಿಂತಿದ್ದರು. ಮರ ಬೀಳುವ ದೃಶ್ಯ ನೋಡಿದರೆ ಮರದ ಕೆಳಗೆ ಸುಮಾರು ನಾಲ್ಕೈದು ಜನರಾದರೂ ಸಿಕ್ಕು ಪ್ರಾಣ ಕಳೆದುಕೊಂಡಿರಬೇಕೆಂಬ ಸಂಶಯ ಹುಟ್ಟುತ್ತದೆ. ಆದರೆ ದೇವರ ಕೃಪೆಯಿಂದ ಈ ಘಟನೆಯಲ್ಲಿ ಯಾರ ಜೀವಕ್ಕೂ ಕಿಂಚಿತ್ತೂ ಅಪಾಯ ಎದುರಾಗಿಲ್ಲ. ಎಲ್ಲಕ್ಕೂ ವಿಶೇಷವೇನೆಂದರೆ, ಮರ ಉರುಳುವಾಗ ಯಾವುದೇ ರೀತಿಯ ಗಾಳಿ ಅಥವಾ ಸುಂಟರಗಾಳಿ ಇರಲಿಲ್ಲ. ಮರ ತನ್ನಂತಾನೆಯೇ ಉರುಳಿ ನೆಲಕ್ಕೆ ಬಿದ್ದಿದೆ. ಪ್ರಸ್ತುತ ಘಟನೆ ಕಳೆದ ಗುರುವಾರದಂದು ನಡೆದಿದೆ. ಶ್ರಾವಣ ಮಾಸ ಪ್ರಾರಂಭವಾಗಿದ್ದರಿಂದ ದೇವಾಲಯದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಹೀಗಾಗಿ ಸುಮಾರು 150 ಕ್ಕಿಂತಲೂ ಹೆಚ್ಚು ಜನರು ಅಲ್ಲಿ ಉಪಸ್ಥಿತರಿದ್ದರು.
ವಿಡಿಯೋ ನೋಡಿ
3 सेकेंड में गिरा तीस साल पुराना पेड़ pic.twitter.com/TjLARd3sAE
— @kumarayush21 (@kumarayush084) August 6, 2022
ದೇವಾಲಯದ ಖಜಾಂಚಿ ಗಣೇಶ ಯಾದವ್ ಅವರು ಹೇಳುವ ಪ್ರಕಾರ, ಇಂತಹ ದೊಡ್ಡ ಘಟನೆಯಲ್ಲಿ ಬಾಲಾಜಿಯ ಕೃಪೆಯಿಂದ ಯಾರಿಗೂ ಯಾವುದೇ ರೀತಿಯ ಚಿಕ್ಕ ಪುಟ್ಟ ಗಾಯವೂ ಆಗಿಲ್ಲವಂತೆ. ಹೆಚ್ಚುವರಿ ಮಳೆಯಿಂದಾಗಿ ಈ ಆಲದ ಮರದ ಬೇರುಗಳು ಭೂಮಿಯ ಹಿಡಿತವನ್ನು ಕಳೆದುಕೊಂಡ ಕಾರಣದಿಂದಾಗಿ ಮರ ತಾನಾಗಿಯೇ ಉರುಳಿ ಬಿದ್ದಿದೆ ಎಂಬ ಕಾರಣವನ್ನು ನೀಡಿದ್ದಾರೆ.