ಮಹೇಂದ್ರಸಿಂಗ್ ಧೋನಿಯ ತೀರಿಕೊಂಡ ಮೊದಲ ಪ್ರೇಯಸಿಯ ಫೋಟೋ ಆಯಿತು ವೈರಲ್! ನೋಡಲು ಇದ್ದರು ಹೀಗೆ…

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಜೀವನದ ಮೇಲೆ ಆಧಾರಿತವಾದ “ಎಂಎಸ್ ಧೋನಿ ದ ಅನ್ ಟೋಲ್ಡ್ ಸ್ಟೋರಿ” ಚಿತ್ರವೊಂದು ತೆರೆಕಂಡಿತ್ತು. ಈ ಚಿತ್ರದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸಂಬಂಧಿಸಿದ ಖಾಸಗಿ ಜೀವನದ ಅನೇಕ ವಿಷಯಗಳನ್ನು ತೆರೆಯ ಮೇಲೆ ತೋರಿಸಲಾಗಿತ್ತು. ಪ್ರಸ್ತುತ ಚಿತ್ರ ರಿಲೀಸ್ ಆಗುವ ಮುನ್ನ ಧೋನಿಯವರಿಗೆ ಪ್ರಿಯಾಂಕಾ ಝಾ ಹೆಸರಿನ ಒಬ್ಬಳು ಗರ್ಲ್ ಫ್ರೆಂಡ್ ಸಹ ಇದ್ದಳು ಎಂಬ ವಿಷಯ ಯಾರಿಗೂ ಗೊತ್ತಿರಲಿಲ್ಲ.

 

ಧೋನಿ ಅವರು ವಿದೇಶದಲ್ಲಿ ಕ್ರಿಕೆಟ್ ಪ್ರವಾಸದಲ್ಲಿದ್ದಾಗ ಅವರ ಗರ್ಲ್ ಫ್ರೆಂಡ್ ಆಕ್ಸಿಡೆಂಟ್ ನಿಂದಾಗಿ ಈ ಲೋಕ ತ್ಯಜಿಸಿದ್ದು ಹೆಚ್ಚು ಕಡಿಮೆ ಕ್ರಿಕೆಟ್ ಅಭಿಮಾನಿಗಳಿಗೆ ಧೋನಿಯವರ ಜೀವನದ ಮೇಲೆ ಆಧಾರಿತ ಈ ಚಲನಚಿತ್ರ ನೋಡಿದ ನಂತರವೇ ಗೊತ್ತಾಯಿತು. ಪ್ರಸ್ತುತ ಚಿತ್ರದಲ್ಲಿ ಧೋನಿ ಗರ್ಲ್ ಫ್ರೆಂಡ್ ಪ್ರಿಯಾಂಕಾಳ ಪಾತ್ರವನ್ನು ಬಾಲಿವುಡ್ ನಟಿ ದಿಶಾ ಪಟಾನಿಯವರು ನಿಭಾಯಿಸಿದ್ದರು. ಆದರೆ ಧೋನಿ ಅಭಿಮಾನಿಗಳಲ್ಲಿ ಅವರ ರಿಯಲ್ ಗರ್ಲ್ ಫ್ರೆಂಡ್ ಕಾಣಲು ಹೇಗಿದ್ದರು? ಎಂಬ ಪ್ರಶ್ನೆ ಮೂಡಿತ್ತು.

ನಾವು ಇಂದಿನ ಲೇಖನದಲ್ಲಿ ಧೋನಿ ಅವರ ಜೀವನದಲ್ಲಿ ಎಂಟ್ರಿ ಮಾಡಿದ ಮೊದಲ ಸಂಗಾತಿಯ ಫೋಟೋವನ್ನು ನಿಮಗಾಗಿ ತಂದಿದ್ದೇವೆ ನೋಡಿ.

ಮಹೇಂದ್ರ ಸಿಂಗ್ ಧೋನಿ ಅವರ ಜೀವನದ ಮೇಲೆ ಆಧಾರಿತವಾದ “ಎಂಎಸ್ ಧೋನಿ ದ ಅನ್ ಟೋಲ್ಡ್ ಸ್ಟೋರಿ” ಚಿತ್ರವು ನೂರು ಕೋಟಿ ರೂಪಾಯಿಗಳ ಎಲ್ಲೆ ಮೀರಿ ಪ್ರದರ್ಶನ ಕಂಡಿತ್ತು. ಈ ಚಿತ್ರದಲ್ಲಿ ಧೋನಿ ಪತ್ನಿ ಸಾಕ್ಷಿ ಅವರ ಪಾತ್ರವನ್ನು ಕಿಯಾರಾ ಅಡ್ವಾಣಿ ಮಾಡಿದ್ದರು.