Video; ಸರ್ಪಮಿತ್ರ ಜಂಗಲ್ ನಲ್ಲಿ ಹಾವು ರಿಲೀಸ್ ಮಾಡುವಾಗ ನಡೆದು ಹೋಯಿತು ಅಚಾತುರ್ಯ! ಹೇಗೆ ನೋಡಿ.
ಅನೇಕ ವ್ಯಕ್ತಿಗಳು ವನ್ಯ ಪ್ರಾಣಿಗಳ ಜೊತೆಗೆ ಮೈತ್ರಿಯನ್ನು ಹೊಂದಿರುತ್ತಾರೆ. ಇತ್ತೀಚೆಗೆ ಅದರಲ್ಲೂ ನಾವು ನೋಡುವ ಹಾಗೆ ಸರ್ಪಗಳ ಜೊತೆಗೆ ಹೆಚ್ಚಾಗಿ ಮೈತ್ರಿ ಮಾಡಿಕೊಳ್ಳುವುದನ್ನು ನೋಡುತ್ತಿದ್ದೇವೆ. ಎಷ್ಟೋ ಸಲ ಈ ಮೈತ್ರಿ ಸರ್ಪಮಿತ್ರರ ಜೀವಕ್ಕೆ ಅಪಾಯ ತರುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಾವಿನ ಜೊತೆಗೆ ಅಚಾತುರ್ಯ ನಡೆದ ವಿಡಿಯೋ ಒಂದು ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ ಸರ್ಪ ಮಿತ್ರನೊಬ್ಬ ನಗರದಲ್ಲಿ ಹಿಡಿದ ಹಾವನ್ನು ಚೀಲದಲ್ಲಿ ತಂದು ಅರಣ್ಯದಲ್ಲಿ ಬಿಡುವ ಪ್ರಯತ್ನ ಮಾಡುತ್ತಿದ್ದಾನೆ. ಆ ಸಂದರ್ಭದಲ್ಲಿ ನಿಧಾನವಾಗಿ ಚೀಲದ ಬಾಯಿಯನ್ನು ಓಪನ್ ಮಾಡಿ ಹಾವು ಹೊರಕ್ಕೆ ಬರಲು ಪ್ರೇರೇಪಿಸುತ್ತಿದ್ದಾನೆ. ಆ ಸಂದರ್ಭದಲ್ಲಿ ಹೊರಗೆ ಬಂದ ಹಾವು ಹಠಾತ್ ಸರ್ಪಮಿತ್ರನ ಮೇಲೆ ದಾಳಿ ಮಾಡಿದೆ. ಇದರಿಂದಾಗಿ ಸರ್ಪಮಿತ್ರನು ಒಮ್ಮೆಲೆ ಶಾಕ್ ಆಗಿದ್ದಾನೆ. ಹಾವು ಮಿಂಚಿನ ವೇಗದಲ್ಲಿ ಸರ್ಪಮಿತ್ರನ ಕಾಲಿನ ಮೇಲೆ ಅಟ್ಯಾಕ್ ಮಾಡಿದಾಗ ಆತನು ಸಹ ಒಮ್ಮೆಲೆ ಬೆಚ್ಚಿಬಿದ್ದು ಚಂಗನೇ ಜಿಗಿದಾಗ ಹಾವು ಆತನ ಎರಡು ಕಾಲಗಳ ಮಧ್ಯದಲ್ಲಿಂದ ಸರ ಸರನೇ ಹರಿದು ಕಾಡಿನಲ್ಲಿ ಮರೆಯಾಗಿ ಹೋಗಿದೆ. ಸರ್ಪಮಿತ್ರರಿಗೆ ಎಷ್ಟೋ ಸಲ ಈ ರೀತಿ ಮಾಡಲು ಹೋಗಿ ಅಪಾಯಗಳು ಎದುರಾಗಿದ್ದು ಉಂಟು. ಅದೃಷ್ಟವಶಾತ್ ಅಂಥ ಯಾವುದೇ ರೀತಿಯ ಅಪಾಯ ಇಲ್ಲಿ ನಡೆದಿಲ್ಲ ಮತ್ತು ಸರ್ಪ ಮಿತ್ರನು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾನೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು instagram ನಲ್ಲಿ rushikeshpardeshi221 ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ. ವಿಡಿಯೋ ಇಲ್ಲಿಯವರೆಗೆ 3.6 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು ಒಂದು ಲಕ್ಷ ಜನರು ವಿಡಿಯೋಗೆ ಲೈಕ್ ಮಾಡಿದ್ದಾರೆ.