Video; ಸಿಗರೇಟ್ ಸೇದಿ ಅದನ್ನಾರಿಸದೆ ಹಾಗೆಯೇ ಒಂದು ಹೋಲ್ ಒಗೆದಾಗ ನಡೆದ ದೊಡ್ಡ ಅವಾಂತರ ನಂಬಲು ಅಸಾಧ್ಯ…

ಇಂದಿನ ಯುವ ಪೀಳಿಗೆ ಸ್ವಂತಕ್ಕೆ ಕೂಲ್ ತಿಳಿಸುವ ಸಲುವಾಗಿ ಸಿಗರೇಟ್ ಸೇದುತ್ತಾರೆ. ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಡಾಕ್ಟರ್ ಮತ್ತು ಸರಕಾರ ಹೇಳಿ ಹೇಳಿ ಸಾಕಾಗಿದೆ. ಆದರೂ ಈ ಸೇದುವ ಮಂಡಳಿ ಅದರ ಕಡೆಗೆ ಗಮನವೇ ನೀಡುವುದಿಲ್ಲ. ಈ ಸಿಗರೇಟ್ ಸೇವನೆ ಶ್ವಾಸಕೋಶದ ಜೊತೆಗೆ ದೇಹದ ವಿವಿಧ ಅಂಗಗಳಿಗೂ ನಿಧಾನವಾಗಿ ಹಾನಿ ಮಾಡುತ್ತದೆ. ಸಿಗರೇಟ್ ಸೇದುವ ವ್ಯಕ್ತಿ ಈ ವಿಷಯವನ್ನು ತಿಳಿಯುವ ಹೊತ್ತಿಗೆ ತುಂಬಾ ಸಮಯ ಮೀರಿ ಹೋಗಿರುತ್ತದೆ. ಇದು ಆರೋಗ್ಯಕ್ಕೆ ಹಾನಿ ಮಾಡುವ ಜೊತೆಗೆ ಅನೇಕ ಸಲ ದೊಡ್ಡ ದೊಡ್ಡ ಅನಾಹುತಗಳಿಗೂ ಕಾರಣವಾಗುತ್ತವೆ. ಅದನ್ನೇ ಹೇಳುವ ಒಂದು ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬನ್ನಿ ನೋಡುವಾ …

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಕೆಲವೇ ಸೆಕೆಂಡುಗಳದ್ದಾಗಿದೆ. ಈ ವಿಡಿಯೋ ನೋಡಿದ ನಂತರ ಹೆದರಿಕೆಯಿಂದ ಮೈ ನವಿರೇಳುತ್ತದೆ. ವಿಡಿಯೋ ಕ್ಲಿಪ್ ನಲ್ಲಿ ವ್ಯಕ್ತಿಯು ಸಿಗರೇಟ್ ಸೇದುತ್ತ ಫುಟ್ಪಾತ್ ಮೇಲಿಂದ ನಡೆದಿದ್ದಾನೆ. ಹೀಗೆ ನಡೆಯುತ್ತಿರುವಾಗ ಮಧ್ಯದಲ್ಲಿ ಒಮ್ಮೆಲೆ ನಿಂತು ಸೇದಿಯಾದ ಸಿಗರೇಟ್ ತುಂಡನ್ನು ನಂದಿಸದೆ ಹಾಗೆಯೇ ಫುಟ್ಪಾತ್ ಮೇಲೆ ಕಂಡು ಬರುವ ಒಂದು ಹೋಲ್ ನಲ್ಲಿ ಎಸೆಯುತ್ತಾನೆ. ಎಸೆದ ಒಂದೇ ಒಂದು ಕ್ಷಣದೊಳಗೆ ಅಲ್ಲಿ ಜೋರಾದ ಸ್ಫೋಟ ಸಂಭವಿಸುತ್ತದೆ. ಮತ್ತು ಫುಟ್ಪಾತ್ ಕ್ಷಣದಲ್ಲಿ ನುಚ್ಚು ನೂರಾಗಿ ಹವೆಯಲ್ಲಿ ಹೊಗೆ ಮತ್ತು ಧೂಳಿನಲ್ಲಿ ಪರಿವರ್ತನೆಯಾಗುತ್ತದೆ. ಒಂದು ರೀತಿಯಲ್ಲಿ ಬಾಂಬ್ ಸ್ಫೋಟ ಆದ ಅನುಭವೇ ಆಗುತ್ತದೆ. ಫುಟ್ಪಾತ್ ಕೆಳಗಿರುವ ಗ್ಯಾಸ್ ಪಾಯಿಪ್ ಲೈನ್ ಸಂಪರ್ಕದಲ್ಲಿ ನಂದದ ಸಿಗರೇಟ್ ಬಂದಾಗ ಪ್ರಸ್ತುತ ಘಟನೆ ಜರುಗಿದೆ ಎಂಬ ತರ್ಕ ಹಚ್ಚಲಾಗಿದೆ. ವ್ಯಕ್ತಿಯ ಅದೃಷ್ಟ ಚೆನ್ನಾಗಿತ್ತು ಮೇಲ್ನೋಟಕ್ಕೆ ಆತನಿಗೆ ಯಾವುದೇ ರೀತಿಯ ಮೇಜರ್ ಎಂಜುರಿ ಆಗಿದ್ದು ಕಂಡು ಬರುತ್ತಿಲ್ಲ. ಆದರೆ ಆತನ ಪರಿಸ್ಥಿತಿ ನೋಡಿದಾಗ ಮಾತ್ರ ನಗು ತಡೆಯುವುದು ಸಾಧ್ಯವಾಗುತ್ತಿಲ್ಲ.

ನೋಡಿ ಈ ಘಟನೆಯ ವಿಡಿಯೋ…

https://twitter.com/cctv_videos/status/1557330752034914304?s=20&t=8Eh9Owqvt29vdoO1IbKYqg

ಅದಕ್ಕೆ ಹೇಳೋದು ಸಿಗರೇಟ್ ಸೇದಲೇಬೇಡಿ, ಇದು ಆರೋಗ್ಯಕ್ಕೆ ಹಾನಿ ನೀಡುತ್ತದೆ. ಒಂದು ವೇಳೆ ಸೇದಿದ್ದೇ ಆದರೆ ಕೊನೆಯಲ್ಲಿ ಅದಕ್ಕೆ ಚೆನ್ನಾಗಿ ನಂದಿಸದೆ ಹಾಗೆಯೇ ಬೇಜವಾಬ್ದಾರಿತನದಿಂದ ಎಲ್ಲಿ ಬೇಕಾದಲ್ಲಿ ಎಸೆಯಬೇಡಿ.