ಚರಂಡಿಯಲ್ಲಿ ಸಿಕ್ಕಿಕೊಂಡ ಗಲೀಜು ಕಸ ತೆಗೆಯಲು ಉಪಯೋಗಿಸಿದ ದೇಸಿ ಜುಗಾಡ್ ನೋಡಿ! ವಾವ್ ಸೂಪರ್ ಎನ್ನುವಿರಿ.
ಪ್ರತಿಯೊಂದು ಸಮಸ್ಯೆಗೆ ಉತ್ತರವನ್ನು ಹುಡುಕುವದು ಅಥವಾ ಕಡಿಮೆ ಖರ್ಚಿನಲ್ಲಿ ಏನಾದರೂ ವಿನೂತನ ಐಡಿಯಾ ಶೋಧಿಸುವದರಲ್ಲಿ ಜನರು ಜಗತ್ತಿನಲ್ಲಿ ತುಂಬಾ ಎಕ್ಸ್ಪರ್ಟ್ ಆಗಿದ್ದಾರೆ. ಇದನ್ನೇ ಸಾರಿ ಹೇಳುವ ಒಂದು ಐಡಿಯಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳಿಂದ ವಾವ್ ಸೂಪರ್ ಎನಿಸಿಕೊಳ್ಳುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಪೈಪ್ನಲ್ಲಿ ಸಿಕ್ಕು ಗಟ್ಟಿಯಾದ ಘನ ಕಸವನ್ನು ತೆಗೆಯಲು ಸೂಪರ್ ಐಡಿಯಾ ವರ್ಕೌಟ್ ಆಗಿದ್ದು ನೋಡಬಹುದಾಗಿದೆ. ಈ ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ ಚರಂಡಿ ನೀರು ಪೈಪ್ನಿಂದ ಹಾದು ಹೊರಗೆ ಹೋಗುತ್ತಿಲ್ಲ. ಅದಕ್ಕಾಗಿ ಇಲ್ಲಿ ಒಂದು ದೇಸಿ ಐಡಿಯಾ ಮಾಡಿದ್ದಾರೆ. ಈ ಐಡಿಯಾ ನೋಡಿದ ನಂತರ ನಿಜವಾಗಿಯೂ ನಿಮ್ಮ ಬಾಯಿಯಿಂದ ವಾವ್ ಸೂಪರ್ ಎನ್ನುತ್ತೀರಿ. ಅವರು ಮಾಡಿದ್ದು ಇಷ್ಟು, ಏನೆಂದರೆ ಒಂದು ಟೈಯರ್ ತೆಗೆದುಕೊಂಡು ಅದಕ್ಕೆ ಸರಪಳಿಯಿಂದ ಕಟ್ಟಿ ಟ್ರ್ಯಾಕ್ಟರ್ ನಿಂದ ಪೈಪಿನ ಒಳಗಿನಿಂದ ಹಾಯ್ದು ಬರುವಂತೆ ಜಗ್ಗಿದ್ದಾರೆ. ಈ ಪ್ಲಾನ್ ಜಬರ್ದಸ್ತ್ ವರ್ಕ್ ಔಟ್ ಆಗಿದ್ದು ರಿಸಲ್ಟ್ ನಲ್ಲಿ ಕಂಡು ಬರುತ್ತದೆ. ಟ್ರ್ಯಾಕ್ಟರ್ ಮುಖಾಂತರ ಪ್ರಸ್ತುತ ಟೈಯರ್ ಪೈಪ್ನೊಳಗಿಂದ ಜಗ್ಗುವಾಗ ಒಳಗೆ ಮೆತ್ತಿದ ಗಟ್ಟಿ ಕೆಸರು ಹಾಗೂ ಕಸವನ್ನು ತನ್ನ ಜೊತೆಗೆ ಈ ಟೈರ್ ತೆಗೆದುಕೊಂಡು ಬಂದದ್ದನ್ನು ನೋಡಿದರೆ ನಿಜವಾಗಲೂ ಆಶ್ಚರ್ಯವಾಗುತ್ತದೆ.
ನೋಡಿ ಈ ವಿಡಿಯೋ…
https://twitter.com/HumansAreMetaI/status/1557365757133983750?s=20&t=v1C_bxn6RjWfbQL2pPSQSA
ಪ್ರಸ್ತುತ ವಿಡಿಯೋ instagram ನಲ್ಲಿ
Damn Thats Interesting ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ. 45 ಸೆಕೆಂಡುಗಳ ಈ ವಿಡಿಯೋ ಇಲ್ಲಿಯವರೆಗೆ 9 ಲಕ್ಷಕ್ಕೂ ಮೀರಿ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ ಸಾವಿರಾರು ಜನರು ಈ ವಿಡಿಯೋ ಲೈಕ್ ಮಾಡಿದ್ದು ಅಲ್ಲದೆ ಪ್ರಸ್ತುತ ಐಡಿಯಾದ ಬಗ್ಗೆ ವಿಶೇಷ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.