ಖುಷಿಗೆ ಕಾರಣವೇ ಬೇಕು ಅಂತಿಲ್ಲ; ಕೆಲವೊಮ್ಮೆ ರೀಸನ್ ಇಲ್ಲದೆಯೂ ಆನಂದದಲ್ಲಿ ಇರಬಹುದು, ಅದ್ಹೇಗೆ? ಈ ನಾಯಿ ಹೇಳಿತ್ತಿದೆ?
ಇಂದಿನ ಜಗತ್ತಿನಲ್ಲಿ ಮನುಷ್ಯ ತುಂಬಾ ಬಿಜಿಯಾಗಿದ್ದಾನೆ. ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಭರದಲ್ಲಿ, ಆಸೆಯಲ್ಲಿ ಮುಂಜಾನೆಯಿಂದ ರಾತ್ರಿಯವರಿಗೆ ಬರೀ ದುಡಿಯುವುದೇ ಅಥವಾ ಕಷ್ಟಪಡುವುದೇ ಆಗಿಬಿಟ್ಟಿದೆ. ಪ್ರತಿಯೊಬ್ಬರ ಹಣೆಯ ಮೇಲೆ ಬರೀ ಪ್ರಶ್ನಾರ್ಥಕ ಚಿಹ್ನೆಗಳು ಕಾಣಿಸುತ್ತವೆ. ಈ ಮಧ್ಯೆ ತನಗೆ ಬೇಕಾಗಿರುವ ಆನಂದ, ಸಂತೋಷ, ಸಮಾಧಾನವನ್ನು ಮರೆತುಬಿಡುತ್ತಿದ್ದಾನೆ. ವ್ಯಕ್ತಿ ಸತತವಾಗಿ ಒತ್ತಡದ ಭಾರದಿಂದ ಕುಗ್ಗಿ ಹೋಗುತ್ತಿದ್ದಾನೆ. ಇಂಥದರಲ್ಲಿ ಒಂದು ಪುಟ್ಟ ನಾಯಿಯ ವಿಡಿಯೋ ಮನುಷ್ಯನಿಗೆ ಜೀವನದ ಪಾಠವನ್ನು ಹೇಳಿದೆ ಬನ್ನಿ ಏನದು ನೋಡೋಣ.
ಪ್ರಸ್ತುತ ವಿಡಿಯೋ @buitengebieden ಹೆಸರಿನ ಅಕೌಂಟ್ ನಿಂದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ ಪುಟ್ಟ ಹಾಗೂ ಅಷ್ಟೇ ಮುದ್ದಾದ ನಾಯಿ ಒಂದು ರಸ್ತೆಯ ಮೇಲೆ ತುಂಬಾ ಮ್ಯಾಜಿಕ್ ಸ್ಟೈಲ್ ನಲ್ಲಿ ನಡೆಯುತ್ತಿದೆ. ನಡೆಯುವಾಗ ಅದರ ಚಲನೆ ತುಂಬಾ ವಿಭಿನ್ನ ರೀತಿಯಲ್ಲಿ ಕಂಡುಬರುತ್ತಿದೆ. ಜೊತೆಗೆ ತನ್ನ ಕಿವಿಗಳನ್ನು ಹಕ್ಕಿಗಳ ರೆಕ್ಕೆಗಳಂತೆ ಬಡಿಯುತ್ತಾ ಮೋಜಿನಿಂದ ಮುಂದೆ ಹೆಜ್ಜೆ ಇಡುತ್ತಿದೆ. ಒಟ್ಟಿನಲ್ಲಿ ನಾಯಿ ಕಾರಣವಿಲ್ಲದೆ ಖುಷಿಯಲ್ಲಿ ತನ್ನದೇ ಗತ್ತಿನಲ್ಲಿ ಸಂಚರಿಸುತ್ತಿರುವುದು ಕಂಡು ಬರುತ್ತಿದೆ.
ವಿಡಿಯೋ ನೋಡಿ
https://twitter.com/buitengebieden/status/1558090504910282760?t=UitVXWkvZVMtcFTA8Mh6XQ&s=19
ಅದಕ್ಕೆ ಹೇಳೋದು ಮನುಷ್ಯ ಸದಾ ವಿಚಾರ ಮಾಡುತ್ತಾ ಒತ್ತಡಗಳ ಭಾರಗಳನ್ನು ಸಹಿಸಿಕೊಳ್ಳುವುದಕ್ಕಿಂತ ಕೆಲವೊಮ್ಮೆ ರಿಲಾಕ್ಸ್ ಆಗಿ ಈ ನಾಯಿ ಹೇಳಿಕೊಟ್ಟ ಪಾಠದಂತೆ ಮುಕ್ತವಾಗಿ ಸಂಚರಿಸಬಹುದು, ಅಲ್ವಾ? ಭಾರವಾದ ಜೀವನ ಹಗುರ ಮಾಡಿಕೊಳ್ಳಲು ಸ್ವಲ್ಪ ಡಾನ್ಸ್ ಮಾಡಿದರೂ ತಪ್ಪಲ್ಲ ಎಂಬ ಮಾತು ಈ ಮುದ್ದಾದ ನಾಯಿ ಮನುಷ್ಯನಿಗೆ ಹೇಳುತ್ತಿದೆ ಏನೋ ಎಂಬಂತೆ ಭಾಸವಾಗುತ್ತಿದೆ, ಅಲ್ವಾ?