ಸುಶಾಂತ್ ಸಿಂಗ್ ರಾಜಪೂತ್ ರ ಒಟ್ಟು ಸಂಪತ್ತು ಇತ್ತು ಇಷ್ಟೊಂದು ಕೋಟಿ, ಒಂದು ಚಿತ್ರದಿಂದ ಗಳಿಸುತ್ತಿದ್ದ ಆದಾಯವಿಷ್ಟು!
ಮುಂಬಯಿ: ತಮ್ಮ ದಮ್ ದಾರ್ ಅಭಿನಯದ ಜೋರಿನ ಮೇಲೆ ಟಿವಿ ಯಿಂದ ಹಿಡಿದು ಬಾಲಿವುಡ್ ವರೆಗೂ ತಮ್ಮ ವಿಶೇಷವಾದ ಛಾಪು ಮೂಡಿಸುವಲ್ಲಿ ಯಶಸ್ವಿಯಾದ ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ಒಟ್ಟು ಆಸ್ತಿ ಎಷ್ಟಿತ್ತು ಎಂಬುದು ನೋಡೋಣ. ಯಾವತ್ತೂ ಹಸನ್ಮುಖಿಯಾಗಿರುತ್ತಿದ್ದ ಸುಶಾಂತ್ ಅವರು ಮಾಡಿಕೊಂಡ ಸುದ್ದಿ ಕೇಳಿ ಅವರ ಸಹಕಲಾಕಾರರ ಜೊತೆಗೆ ಅವರ ಫ್ಯಾನ್ಸ್ ಗಳು ಸಹಿತ ದಿಗ್ಭ್ರಮೆಗೊಂಡಿದ್ದಾರೆ. ಯಾರು ಸಹಿತ ಸುಶಾಂತ್ ಅವರು ಈ ರೀತಿ ನಮ್ಮನ್ನು ಬಿಟ್ಟು ಹೊಗ್ತಾರೆ ಅಂತ ಅಂದುಕೊಂಡಿರಲಿಲ್ಲ. ಅವರು ತಮ್ಮ ಕರಿಯರ್ ದಲ್ಲಿ ಸಾಕಷ್ಟು ಚಿತ್ರಗಳೇನು ಮಾಡಿಲ್ಲ. ಆದರೆ ನಟಿಸಿದ ಚಿತ್ರಗಳೆಲ್ಲವು ಹಿಟ್ ಆಗಿವೆ. ಟೀಮ್ ಇಂಡಿಯಾದ ಮಾಜಿ ನಾಯಕರಾದ M S ಧೋನಿ ಯವರ ಜೀವನದ ಮೇಲೆ ಆಧಾರಿತ ಚಿತ್ರದಲ್ಲಿ ಇವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು.

ಧೋನಿಯವರ ಜೀವನದ ಮೇಲೆ ಆಧಾರಿತ ಚಿತ್ರ 220 ಕೋಟಿ ರೂಪಾಯಿಗಳ ವ್ಯವಹಾರ ಮಾಡಿತ್ತು. ಇವರು ಒಳ್ಳೆಯ ನಟನೆಯೊಂದಿಗೆ ಒಳ್ಳೆಯ ಡಾನ್ಸರ್ ಹಾಗೂ ಒಳ್ಳೆಯ ಹೋಸ್ಟ್ ಸಹ ಆಗಿದ್ದರು. ಸುಶಾಂತ್ ಅವರು ಒಂದು ಚಿತ್ರಕ್ಕೆ 5 ರಿಂದ 7 ಕೋಟಿ ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದರು. ಜಾಹೀರಾತುಗಳಿಗಾಗಿ 1 ಕೋಟಿ ತೆಗೆದುಕೊಳ್ಳುತ್ತಿದ್ದರು. ಎಷ್ಟೋ ರಿಯಲ್ ಎಸ್ಟೇಟ್ ಪ್ರಾಪರ್ಟಿಯಲ್ಲಿ ಹೂಡಿಕೆಯನ್ನು ಮಾಡಿದ್ದರು. ಅವರ ಒಟ್ಟು ಸಂಪತ್ತು 80 ಲಕ್ಷ ಡಾಲರ್ ಅಂದರೆ 60 ಕೋಟಿ ರುಪಾಯಿಗಳಿಗಿಂತಲೂ ಜಾಸ್ತಿ ಇತ್ತು.

ಸುಶಾಂತ್ ಅವರು ಫಿಜಿಕ್ಸ್ ನಲ್ಲಿ ನ್ಯಾಷನಲ್ ಒಲಿಂಪಿಯಾಡ್ ಗೆದ್ದಿದ್ದರು. ಬಿಹಾರ್ ದ ಪಟ್ನಾದಲ್ಲಿ 21 ಜನವರಿ 1986 ರಲ್ಲಿ ಜನಿಸಿದ ಸುಶಾಂತ್ ಬಾಲಿವುಡ್ ನಲ್ಲಿ ತಮ್ಮ ಎಕ್ಟಿಂಗ್ ಕರಿಯರ್ 2013 ರಲ್ಲಿ ಪ್ರಾರಂಭಿಸಿದರು. 2013 ರಲ್ಲಿ ಅವರ ಅಭಿನಯದ ಮೊದಲ ಚಿತ್ರ ಕೈ ಪೋ ಛೇ ಚಿತ್ರಕ್ಕಾಗಿ ಒಳ್ಳೆಯ ನಟನೆಂದು ಗುರುತಿಸಲಾಯಿತು. ಓದಿನಲ್ಲಿ ಮುಂದೆ ಇದ್ದ ಸುಶಾಂತ್ ಎಕ್ಟಿಂಗ್ ಕರಿಯರ್ ಅನ್ನೇ ಮುಂದೊಯ್ಯಲು ಇಂಜಿನಿಯರ್ ದ ಮೂರು ವರ್ಷಗಳ ಅಭ್ಯಾಸ ಪೂರ್ಣಗೊಳಿಸಿದ್ದರು. ಇವರು ದೆಹಲಿ ಕಾಲೇಜ್ ಆಫ್ ಇಂಜಿನಿಯರ್ ನಲ್ಲಿ ಓದುತ್ತಿದ್ದರು.