Video; ಸೇಮ್ ಟು ಸೇಮ್ ಹಾವಿನ ಹಾಗೆಯೇ ಅಂಕುಡೊಂಕಾಗಿ ಗೇಟ್ ಪಾಸ್ ಮಾಡಿದ ಫ್ಲೆಕ್ಸಿಬಲ್ ಬೆಕ್ಕು! ನೋಡಿ ತಮಾಷೆಯ ದೃಶ್ಯ.
ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲರ ಹತ್ತಿರ ಸ್ಮಾರ್ಟ್ ಮೊಬೈಲ್ ಇದೆ ಹಾಗೂ ಹೆಚ್ಚು ಕಡಿಮೆ ಎಲ್ಲರೂ ಇಂಟರ್ನೆಟ್ ಯೂಸ್ ಮಾಡುತ್ತಾರೆ. ಹೀಗಾಗಿ ಪ್ರತಿಯೊಬ್ಬರ ಹತ್ತಿರ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವಂತಹ ವಿಶೇಷ ಕಂಟೆಂಟ್ ಇದ್ದೇ ಇರುತ್ತದೆ. ಹೀಗಾಗಿ ತಾವು ಕಂಡ ಮತ್ತು ವಿಶೇಷ ದೃಶ್ಯಗಳನ್ನು ಸೆರೆಹಿಡಿದ ವಿಡಿಯೋ ಅಥವಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸದ್ಯ ಇದೇ ರೀತಿ ಒಂದು ಬೆಕ್ಕಿನ ತಮಾಷೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಕಾಣಲು ಸಿಗುತ್ತಿದೆ. ಈ ವಿಡಿಯೋದಲ್ಲಿ ಬೆಕ್ಕು ಏನು ಮಾಡಿದೆ ನೋಡೋಣ ಬನ್ನಿ.
ಬೆಕ್ಕುಗಳು ನೋಡಲು ತುಂಬಾ ಕ್ಯೂಟ್ ಆಗಿರುತ್ತವೆ. ಮತ್ತು ಅವುಗಳು ಮಾಡುವಂತಹ ಕೆಲಸಗಳು ಮಾತ್ರ ತುಂಬಾ ತುಂಟಾಟದಿಂದ ಕೂಡಿರುತ್ತವೆ. ಸದ್ಯ ಶೇರ್ ಆಗುತ್ತಿರುವ ಈ ವಿಡಿಯೋದಲ್ಲಿ ಬೆಕ್ಕು ತುಂಬಾ ವಿಚಿತ್ರವಾಗಿ ವರ್ತಿಸಿದೆ. ಅದರ ವರ್ತನೆ ನೋಡಿದ ನಂತರ ನೀವು ಸಹ ಯೋಚನೆಯಲ್ಲಿ ಮುಳುಗುತ್ತೀರಿ. ಈ ಬೆಕ್ಕಿನ ದೇಹದಲ್ಲಿ ಹಾವು ಏನಾದರೂ ಸೇರಿದೆ ಎಂಬ ಸಂಶಯ ಮೂಡುತ್ತದೆ.
ನೋಡಿ ಈ ವಿಡಿಯೋ…
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಂದು ಬೆಕ್ಕು ಗೇಟ್ ಮೇಲಿಂದ ನಡೆದು ಹೋಗುತ್ತಿದೆ. ಹೋಗುವಾಗ ಬೆಕ್ಕು ಸೇಮ್ ಟು ಸೇಮ್ ಹಾವಿನ ಹಾಗೆ ಮೈಯನ್ನು ಅಂಕುಡೊಕಾಗಿ ಹೊರಳಿಸುತ್ತಾ ಗ್ರಿಲ್ನೊಳಗಿನಿಂದ ನುಸುಳುತ್ತಾ ತುಂಬಾ ಸಹಜವಾಗಿ ಅಷ್ಟೇ ಸುಂದರವಾಗಿ ಹೋಗುತ್ತದೆ. ಬೇರೆ ಯಾವುದೇ ಪ್ರಾಣಿಗಳಾಗಿದ್ದರೆ ತನ್ನ ದಾರಿಯನ್ನು ಬದಲಿಸುತ್ತಿದ್ದವು. ಆದರೆ ಬೆಕ್ಕು ಮಾತ್ರ ಅಲ್ಲಿಂದಲೇ ತುಂಬಾ ಬೆಡಗು, ಬಿನ್ನಾಣದಿಂದ ನಡೆಯುತ್ತಾ ಮುಂದೆ ಸಾಗಿದೆ. ಈ ದೃಶ್ಯ ನೋಡಲು ಆಶ್ಚರ್ಯದ ಜೊತೆಗೆ ತಮಾಷೆಯು ಎನಿಸುತ್ತದೆ.
ವಿಡಿಯೋ ನೋಡಿ
https://twitter.com/Yoda4ever/status/1557408936239718404?t=i8ervgDug0vrDyMoHNXFbQ&s=19
ಪ್ರಸ್ತುತ ವಿಡಿಯೋವನ್ನು ಟ್ವಿಟರ್ ನಲ್ಲಿ @Yoda4ever ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ನಾಲ್ಕು ಲಕ್ಷಕ್ಕೂ ಮೇಲ್ಪಟ್ಟು ವೀಕ್ಷಿಸಲಾಗಿದೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ಕಮೆಂಟ್ ಮಾಡುತ್ತಿದ್ದಾರೆ. ಕಮೆಂಟ್ ಗಳಲ್ಲಿ ಒಬ್ಬ ಯೂಸರ್ ಈ ಬೆಕ್ಕು ದಿನನಿತ್ಯ ಮುಂಜಾನೆ ಯೋಗಾಭ್ಯಾಸ ಮಾಡುತ್ತದೆ ಎಂದಿದ್ದಾನೆ. ಇನ್ನೊಬ್ಬ ಈ ಬೆಕ್ಕಿನ ದೇಹದಲ್ಲಿ ಯಾವುದಾದರೂ ಭೂತ ಅಥವಾ ಆತ್ಮ ಸ್ಥಾನ ಪಡೆದಿದೆ ಎಂದು ಹೇಳಿದ್ದಾನೆ. ಇನ್ನೊಬ್ಬ ಯೂಸರ್ ತನ್ನ ಕಮೆಂಟ್ ನಲ್ಲಿ ಈ ಬೆಕ್ಕು ಜಿಮ್ನಾಸ್ಟಿಕ್ ಚಾಂಪಿಯನ್ ಇರಬೇಕು ಎಂದಿದ್ದಾನೆ.