ಬ್ಯಾಟ್ಸ್‌ಮನ್‌ನ ‘ಆ’ ಶಾಟ್ ನೋಡಿ ಬೌಲರ್ ಸಹ ಎಲ್ಲರೂ ಚಕಿತರಾದರು; 23,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾದ ಈ ವಿಡಿಯೋ!

T-ಟ್ವೆಂಟಿ ಕ್ರಿಕೆಟ್ ಪ್ರಾರಂಭದ ನಂತರ ಕ್ರಿಕೆಟ್ ನಲ್ಲಿ ಹೊಸ ಹೊಸ ಶಾಟ್ ಗಳ ಶೋಧಗಳಾದವು. ಆದ್ದರಿಂದಲೇ ಕ್ರಿಕೆಟ್ ದ ಈ ಫಾರ್ಮ್ಯಾಟ್ ಅಲ್ಪಾವಧಿಯಲ್ಲಿಯೇ ಪ್ರಸಿದ್ಧಿ ಪಡೆಯಲು ಕಾರಣವಾಯ್ತು. ಹೀಗಾಗಿ T-ಟ್ವೆಂಟಿ ಕ್ರಿಕೆಟ್ ದ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜೊತೆಗೆ ನಿರಂತರವಾಗಿ ಇದರಲ್ಲಿ ಬದಲಾವಣೆಗಳು ಮತ್ತು ಪ್ರಯೋಗಗಳು ನಡೆಯುತ್ತಲೇ ಇವೆ. ಇದರಲ್ಲಿ ಬ್ಯಾಟ್ಸ್ಮನ್ ಗಳು ಸಹ ಹೊಸ ಹೊಸ ಶಾಟ್ಸ್ ಗಳನ್ನು ಹೊಡೆದು ಕ್ರಿಕೆಟ್ ಪ್ರಿಯರ ಮನವನ್ನು ತಣಿಸುತ್ತಿದ್ದಾರೆ. ಇದರಲ್ಲಿ ಎ ಬಿ ಡಿವಿಲಿಯರ್ಸ್, ಖ್ರಿಸ್ ಗೇಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಇಂಥ ಅತಿರಥ ಮಹಾರಥಿ ಆಟಗಾರರು T-ಟ್ವೆಂಟಿಯ ಕ್ರೇಜ್ ನ್ನು ಉತ್ತುಂಗಕ್ಕೆ ಏರಿಸಿದರು. ಈಗ ನೀವು ನೋಡುವ ಈ ವೈರಲ್ ವಿಡಿಯೋದಲ್ಲಿಯ ಶಾಟ್ ಸಹಿತ ಅದ್ಭುತವಾಗಿದೆ. ಅದನ್ನು ನೋಡಿ ನಿಜಕ್ಕೂ ಆಶ್ಚರ್ಯವೆನಿಸದೆ ಇರಲಾರದು. ಈ ಹೊಡೆತದಲ್ಲಿ ಬ್ಯಾಟ್ಸ್ ಮನ್ ಅನುಸರಿಸಿದ ಸ್ಟೈಲ್ ಮತ್ತು ಟೈಮಿಂಗ್ ಅಮೋಘವಾಗಿದೆ, ಬೌಲರ್ ಸಹಿತ ಮೂಕವಿಸ್ಮಿತನಾಗಿದ್ದಾನೆ.

ಇಂಗ್ಲಿಷ್ ಕೌಂಟಿ ಕ್ರಿಕೆಟ್ ನಲ್ಲಿಯ ವೀಡಿಯೊ ಇದಾಗಿದೆ.

ಇದರಲ್ಲಿ ವೇಗದ ಬೌಲರ್ ಒಗೆದ ಚೆಂಡಗೆ ಬ್ಯಾಟ್ಸ್ ಮನ್ ಹೊಡೆದ ರೀತಿಯನ್ನು ನೋಡಿ ಎಲ್ಲರೂ ನಿಬ್ಬೆರಗಾಗಿದ್ದಾರೆ. ಈ ವೈರಲ್ ವೀಡಿಯೊವನ್ನು ಇಲ್ಲಿಯವರೆಗೆ 23 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.