ಮದುಮಗಳು ಮದುವೆಗೆ ಕರೆಸಿದಳು ತನ್ನ ಆಫೀಸಿನ 70 ಸಹೋದ್ಯೋಗಿಗಳನ್ನು; ಮರುದಿನವೇ ನೀಡಿದಳು ಕೆಲಸಕ್ಕೆ ರಾಜೀನಾಮೆ!

ಮದುವೆಯಲ್ಲಿ ಅನೇಕ ವಿಚಿತ್ರ ಪ್ರಸಂಗಗಳು ನಡೆಯುತ್ತವೆ. ಇತ್ತೀಚೆಗಂತೂ ಈ ವಿಚಿತ್ರ ಪ್ರಸಂಗಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಸಹ ಆಗುತ್ತವೆ ಮತ್ತು ಎಲ್ಲೆಡೆ ಚರ್ಚೆಗೂ ಕಾರಣವಾಗುತ್ತವೆ.

ಸದ್ಯ ಇದೇ ರೀತಿಯ ಮದುವೆಯಲ್ಲಿಯ ಒಂದು ಪ್ರಸಂಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಚರ್ಚೆಗೆ ಕಾರಣವಾಗಿದೆ. ಇಲ್ಲಿ ನಡೆದ ಘಟನೆಯಿಂದಾಗಿ ಮದುಮಗಳು ತನ್ನ ಮದುವೆಯಾದ ಮರುದಿನವೇ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾಳೆ. ಮದುಮಗಳು ರಾಜೀನಾಮೆ ನೀಡುವಂಥ ಕಾರಣವಾದರೂ ಏನಿರಬಹುದು ಅಂತೀರಾ ಬನ್ನಿ ನೋಡೋಣ.

ಪ್ರಸ್ತುತ ಘಟನೆ ಚೈನಾದಿಂದ ವರದಿಯಾಗಿದೆ. ಇಲ್ಲಿ ಒಬ್ಬಳು ಯುವತಿ ಮದುವೆಗೆ ತನ್ನದೇ ಆಫೀಸಿನಲ್ಲಿ ಕೆಲಸ ಮಾಡುವ 70 ಸಹೋದ್ಯೋಗಿಗಳನ್ನು ಆಮಂತ್ರಣ ನೀಡಿದ್ದಾಳೆ. ಮೊದಲು ಕೆಲವರಿಗಷ್ಟೇ ಆಮಂತ್ರಣ ನೀಡಬೇಕೆಂದು ವಿಚಾರ ಮಾಡಿದ್ದಳಂತೆ, ಆದರೆ ಒಬ್ಬರನ್ನು ಆಮಂತ್ರಿಸುವದು ಇನ್ನೂಬ್ಬರನ್ನು ಬಿಡುವದು ಇದರಿಂದ ಉಳಿದವರು ಬೇಸರ ಪಟ್ಟು ಕೊಳ್ಳಬಹುದು ಎಂದು ತಿಳಿದು ಎಲ್ಲರಿಗೂ ಆಮಂತ್ರಣ ನೀಡಿದ್ದಾಳೆ. ಆದರೆ ದುರದೃಷ್ಟ ಏನೆಂದರೆ 70 ಜನರಲ್ಲಿ ಬರೀ ಒಬ್ಬಳೇ ಗೆಳತಿ ಮದುವೆಗೆ ಬಂದಿದ್ದಾಳಂತೆ ಇದರಿಂದ ಗಂಡನ ಮನೆಯವರು ಮದುಮಗಳ ಮೇಲೆ ತುಂಬಾ ರೇಗಾಡಿದ್ದಾರೆ.

ಆಫೀಸಿನವರು ತೋರಿದ ಈ ರೀತಿಯ ಬೇಜವಾಬ್ದಾರಿತನದ ವರ್ತನೆಯಿಂದಾಗಿ ಮದುವೆಯಲ್ಲಿ ತಯಾರಿಸಿದ ಸಾಕಷ್ಟು ಭೋಜನ ಹಾಳಾಗಿ ಹೋಗಿದೆ. ಅದನ್ನು ಯಾರಿಗೂ ನೀಡದೆ ಎಲ್ಲವೂ ನೇರ ಕಸದ ತೊಟ್ಟಿಗೆ ಹಾಕಲಾಗಿದೆ. ಇದರಿಂದ ಮದುಮಗಳು ತುಂಬಾ ಅವಮಾನ ಸಹಿಸಿಕೊಳ್ಳುವಂಥ ಸಮಯ ನಿರ್ಮಾಣವಾಗಿದೆ. ತನ್ನ ಸಹೋದ್ಯೋಗಿಗಳು ಮದುವೆಗೆ ಬಾರದ ಕಾರಣದಿಂದಾಗಿ ಮನನೊಂದ ಮದುಮಗಳು ಮಾರನೆಯ ದಿನವೇ ತನ್ನ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಬಿಟ್ಟಿದ್ದಾಳೆ.

ಪ್ರಸ್ತುತ ಮಹಿಳೆಯ ಈ ಅನುಭವದಿಂದ ಎಲ್ಲರೂ ಒಂದು ಪಾಠವನ್ನು ನಿಶ್ಚಿತವಾಗಿಯೂ ಕಲಿಯಬೇಕಾಗಿದೆ. ಯಾವುದೇ ಕಾರ್ಯಕ್ರಮಗಳಿಗೆ ಆಮಂತ್ರಣ ನೀಡಿದ ನಂತರ ಅವರು ಬರುವದು ನಿಶ್ಚಿತವಾದ ಮೇಲೆಯೇ ಊಟದ ಅರೇಂಜ್ ಮೆಂಟ್ ಮಾಡಿ. ಇಲ್ಲವಾದರೆ ಹಣದ ಜೊತೆಗೆ ಸಮಯ, ಪರಿಶ್ರಮ ಮತ್ತು ಆಹಾರ ಎಲ್ಲವೂ ಹಾಳಾಗಿ ಹೋಗಿ ಬಿಡುತ್ತದೆ.