No Parking ನಲ್ಲಿ ನಿಂತ ಸ್ಕೂಟಿಯನ್ನು ಮಾಲೀಕನ ಜೊತೆಯೇ ಹವೆಯಲ್ಲಿ ಎತ್ತಿದ ಕ್ರೇನ್ ಚಾಲಕ! ವ್ಯಕ್ತಿ ನೇತಾಡುವ ವಿಡಿಯೋ ವೈರಲ್.

ಕೆಲವರು ತಮ್ಮ ವಾಹನವನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಇಂಥ ಒಂದು ದೃಶ್ಯ ನೆರೆಯ ಮಹಾರಾಷ್ಟ್ರದ ಉಪರಾಜಧಾನಿಯಾದ ನಾಗಪೂರ್ ನಲ್ಲಿ ಕಂಡು ಬಂದಿತು. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಮೇಲೆ ಕುಳಿತಿರುವ ದೃಶ್ಯ ಕಂಡು ಬರುತ್ತಿದೆ. ಕ್ರೆನ್ ಮುಖಾಂತರ ಆತನ ವಾಹನವನ್ನು ಟೋ ಮಾಡಬೇಕಾದರೆ ಆತ ತನ್ನ ಸ್ಕೂಟಿಯಿಂದ ಕೆಳಗೆ ಇಳಿದೇ ಇಲ್ಲ. ಹಾಗೆಯೇ ಹವೆಯಲ್ಲಿ ನೇತಾಡುತ್ತಿದ್ದಾನೆ.

ಪ್ರಸ್ತುತ ವಿಡಿಯೋ ಹಮ್ ನಾಗಪೂರಕರ್ ಹೆಸರಿನ ಅಕೌಂಟ್ ನಿಂದ ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಇದನ್ನು ನಾಗಪೂರಿನ ಸದರ್ ಬಜಾರ್ ಸ್ಥಳದಿಂದ ಶೂಟ್ ಮಾಡಲಾಗಿದೆ. ಈ ವಿಚಿತ್ರ ಕ್ಲಿಪ್ ನಲ್ಲಿ ವ್ಯಕ್ತಿ ತನ್ನ ಸ್ಕೂಟಿ ಮೇಲೆಯೇ ಕುಳಿತಿರುವುದು ಕಂಡು ಬರುತ್ತಿದೆ. ಟೋಯಿಂಗ್ ಟ್ರಕ್ ಆತನನ್ನು ಯಾವುದೇ ವಿಚಾರ ಮಾಡದೆ ಹವೆಯಲ್ಲಿ ನೇತಾಡಿಸುತ್ತಿದೆ. ಇಷ್ಟೆಲ್ಲಾ ನಡೆದಿದ್ದರೂ ಸ್ಕೂಟಿ ಚಾಲಕ ಅದೇ ಪೊಸಿಷನ್ ನಲ್ಲಿ ತುಂಬಾ ನಿರಾಳವಾಗಿ ಕ್ರೇನ್ ಚಾಲಕನ ಜೊತೆಗೆ ಮಾತನಾಡುತ್ತಿದ್ದಾನೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Hum Nagpurkar (@humnagpurkar)

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ನಂತರ ಇಲ್ಲಿಯವರೆಗೆ 2 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ. ವಿಡಿಯೋ ನೋಡಿದ ನೆಟ್ಟಿಗರು ಕೆಲವರು ಬಿದ್ದು ಬಿದ್ದು ನಗುತ್ತಿದ್ದರೆ ಇನ್ನು ಕೆಲವರು ತಮ್ಮ ಸಿಟ್ಟನ್ನು ಹೊರಗೆ ಹಾಕುತ್ತಿದ್ದಾರೆ. ಇದನ್ನು ನೋಡಿದ ನೇಟಿಜನ್ಸ್ ಗಳು ತಮಾಷೆಯ ಕಾಮೆಂಟ್ ಮಾಡುತ್ತಿದ್ದಾರೆ.