ಹ್ಯಾಂಡ್ಸಮ್ ಹಂಕ್ ಟೈಗರ್ ಶ್ರಾಫ್ ಕರಾವಳಿಯಲ್ಲಿ ನೀಡಿದರು ಹುಡುಗಿಯರ ಎದೆಯಲ್ಲಿ ಕಿಚ್ಚು ಹಚ್ಚುವ ಫೋಸ್! ವಿಡಿಯೋ ಸಖತ್ ವೈರಲ್!
ಬಾಲಿವುಡ್ ಮೋಸ್ಟ ಹ್ಯಾಂಡ್ ಸಮ್ ಹಂಕ್ ಟೈಗರ್ ಶ್ರಾಫ್ ತಮ್ಮ ಒಳ್ಳೆಯ ನಟನೆಯ ಜೊತೆಗೆ ಕಟ್ಟು ಮಸ್ತಾದ ದೇಹದಿಂದಲೂ ಚಿರಪರಿಚಿತರಾಗಿದ್ದಾರೆ. ಇವರು ಬಾಲಿವುಡ್ ಫೇಮಸ್ ನಟ ಹೃತಿಕ್ ರೋಷನ್ ಅವರನ್ನು ಫಾಲೋ ಮಾಡುತ್ತಾರೆ ಎಂದು ಸ್ವತಃ ತಾವೇ ಹೇಳುತ್ತಾರೆ. ಇವರು ಹೆಚ್ಚು ಕಡಿಮೆ ತಮ್ಮ ಎಲ್ಲ ಚಿತ್ರಗಳಲ್ಲಿ ಅಭಿನಯ ಮತ್ತು ರಿಯಲ್ ಆಕ್ಷನ್ ಗಳಿಂದಾಗಿ ತುಂಬಾ ಚರ್ಚೆಯಲ್ಲಿ ಇರುತ್ತಾರೆ.
ಅವರ ಕಟ್ಟುಮಸ್ಥಾದ ದೇಹ ಹಾಗೂ ಚಲನಚಿತ್ರಗಳಲ್ಲಿ ನಿಜವಾಗಿ ಮಾಡುವ ಆಕ್ಷನ್ ಗಳು ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತದೆ. ಸದ್ಯ instagram ನಲ್ಲಿ ತಮ್ಮ ಅಕೌಂಟ್ ನಿಂದ ಕೆಲವೊಂದು ಆಕರ್ಷಕವಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇವೇ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ನಟ ಟೈಗರ್ ಕೆಂಪು ಬಣ್ಣದ ಶಾರ್ಟ್ಸ್ ತೊಟ್ಟಿದ್ದಾರೆ. ಅವರ ಆಕರ್ಷಕವಾದ ದೇಹ ಈ ಫೋಟೋಗಳಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದೆ. ಸದ್ಯಕ್ಕಂತೂ ಅವರ ಶೇರ್ ಮಾಡಿದ ಈ ವಿಡಿಯೋದಲ್ಲಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ಜೊತೆಗೆ ಅವರ ಈ ಆಕರ್ಷಕವಾದ ದೇಹವನ್ನು ನೋಡಿದ ಅಭಿಮಾನಿಗಳು ಅನೇಕ ರೀತಿಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಟೈಗರ್ ಅವರು ನಿಜಕ್ಕೂ ಈ ಕಟ್ಟುಮಸ್ತಾದ ದೇಹಕ್ಕಾಗಿ ತುಂಬಾ ಶ್ರಮಿಸಿದ್ದಾರೆ ಎಂಬುದು ಸಹಜವಾಗಿಯೇ ತಿಳಿದು ಬರುತ್ತದೆ.