ಜನರ ವಾಸಿಸುತ್ತಿವ ಕಟ್ಟಡದ ಒಳಗಿನಿಂದಲೇ ನುಸುಳಿ ಹೋಗುತ್ತದೆ ಟ್ರೈನ್! ನೋಡಿ ಈ ಅದ್ಭುತ ದೃಶ್ಯದ ವಿಡಿಯೋ..!

ಜಗತ್ತಿನಲ್ಲಿಯೇ ಚೈನಾ ದೇಶವಿದು ಬೇರೆ ದೇಶಗಳಿಗಿಂತ ತುಂಬಾ ವಿಭಿನ್ನ ಮತ್ತು ವಿಚಿತ್ರವಾಗಿದೆ. ಇಲ್ಲಿಯ ಅನೇಕ ವಿಷಯಗಳು ಬೇರೆ ದೇಶದ ಜನರಿಗೆ ತುಂಬಾ ಆಶ್ಚರ್ಯವನ್ನು ನೀಡುತ್ತವೆ. ಇಲ್ಲಿರುವ ರೈಲು ಮಾರ್ಗವು ಸಹಿತ ಒಂದು ರೀತಿಯಲ್ಲಿ ತುಂಬಾ ವಿಚಿತ್ರವೇ ಎನ್ನಬಹುದು. ಕಾರಣ ಜನವಸತಿಯ ಸಮೀಪ ಟ್ರೈನ್ ಟ್ರ್ಯಾಕ್ ಇರದಂತೆ ಎಲ್ಲ ಕಡೆ ಎಚ್ಚರ ವಹಿಸಲಾಗುತ್ತದೆ. ಆದರಿಲ್ಲಿ ಜನರ ವಾಸಿಸುವ ಕಟ್ಟಡದ ಒಳಗಿನಿಂದಲೇ ಟ್ರೈನ್ ಸಾಗಿ ಹೋಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಇದೇ ವಿಡಿಯೋ ವೈರಲ್ ಆಗುತ್ತಿದೆ.

ನಮಗೆಲ್ಲ ತಿಳಿಯುವ ಹಾಗೆ ಟ್ರೈನ್ ಟ್ರ್ಯಾಕ್ ಜನರು ವಾಸಿಸುವ ವಸತಿಗಳಿಂದ ಸ್ವಲ್ಪ ದೂರವೇ ಇರುವ ಹಾಗೆ ಕಾಳಜಿ ವಹಿಸಲಾಗುತ್ತದೆ. ಇದಕ್ಕೆ ಕಾರಣ ಯಾವುದೇ ರೀತಿಯ ರೈಲು ದುರಂತಗಳು ಸಂಭವಿಸದಂತೆ ಎಚ್ಚರ ವಹಿಸಿರುತ್ತಾರೆ. ಇಷ್ಟಾದರೂ ಅನೇಕ ದುರಂತಗಳು ನಡೆದೇ ಇರುತ್ತವೆ.

ಆದರೆ ಈಗ ಇಲ್ಲಿ ನೋಡುವ ದೃಶ್ಯ ತುಂಬಾ ವಿಶೇಷವಾಗಿದೆ. ಏಕೆಂದರೆ ಇಲ್ಲಿ ಕಾಣುವ ಟ್ರೈನ್ ಬಿಲ್ಡಿಂಗ್ ನಲ್ಲಿಂದ ಹಾಯ್ದು ಹೋಗುತ್ತದೆ. ವಿಡಿಯೋದಲ್ಲಿ ಕಾಣುವ ದೃಶ್ಯದ ಪ್ರಕಾರ ಒಂದು ಟ್ರೈನ್ ಸುಮಾರು 7 ರಿಂದ 8 ಮಹಡಿಗಳ ಎತ್ತರವಾದ ಕಟ್ಟಡದೊಳಗಿಂದ ನುಸುಳಿ ಹೋಗುತ್ತದೆ. ಪ್ರಸ್ತುತ ವಿಡಿಯೋದಲ್ಲಿ ಟ್ರೈನ್ ಹೊರಗೆ ಬರುವುದು ಕಂಡು ಬರುತ್ತಿಲ್ಲ. ಆದರೆ ನೋಡಿದರಿಗೆ ಮಾತ್ರ ಇದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಟ್ರೈನ್ ಅಲ್ಲಿಯೇ ನಿಂತಿತೋ ಅಥವಾ ಮುಂದೆ ಹೋಗುತ್ತದೆಯೋ ಎಂಬ ಪ್ರಶ್ನೆ ಕಾಡುತ್ತದೆ. ಇದಕ್ಕಾಗಿ ನೀವು ತಲೆಕೆಡಿಸಿಕೊಳ್ಳಬೇಡಿ ಯಾಕೆಂದರೆ ಇದರ ಉತ್ತರ ನಾವೇ ಹೇಳುತ್ತೇವೆ ಪ್ರಸ್ತುತ ಟ್ರೈನ್ ಬಿಲ್ಡಿಂಗ್ ಮುಖಾಂತರ ಪಾಸ್ ಆಗಿ ಮುಂದೆ ಸಾಗುತ್ತದೆ.

ಈ ರೈಲ್ವೆ ಟ್ರ್ಯಾಕ್ ಚೈನಾದ ಚೊಂಗ್ ಕಿಂಗ್ ಹೆಸರಿನ ಪಟ್ಟಣದಲ್ಲಿಯದಿದೆ. ಇಲ್ಲಿ ಎತ್ತರವಾದ ಕಟ್ಟಡದಲ್ಲಿಂದ ಟ್ರೈನ್ ಹಾಯ್ದು ಹೋಗುತ್ತದೆ. ಈ ಪಟ್ಟಣದಲ್ಲಿ ಎತ್ತರವಾದ ಕಟ್ಟಡಗಳು ಇರುವುದರಿಂದ ಈ ಪಟ್ಟಣಕ್ಕೆ ಮೌಂಟ್ ಸಿಟಿ ಎಂತಲೂ ಕರೆಯುತ್ತಾರೆ. ಈ ಪಟ್ಟಣವು ಚೈನಾದ ಅತೀ ಹೆಚ್ಚು ಜನದಟ್ಟಣೆಯುಳ್ಳ ಪಟ್ಟಣವಾಗಿದೆ. ಇಲ್ಲಿಯ ಜನಸಂಖ್ಯೆ ಸುಮಾರು 30 ಮಿಲಿಯನ್ ಅಂದರೆ 3 ಕೋಟಿಗಳಷ್ಟು ಆಗಿದೆ. ಇಲ್ಲಿಯ ಫ್ಲ್ಯಾಟ್ಗಳ ಬೆಲೆ ಸಾಕಷ್ಟು ಹೆಚ್ಚಿರುವುದರ ಕಾರಣಕ್ಕಾಗಿ ಟ್ರೈನ್ ನ್ನು ಈ ರೀತಿ ಕಟ್ಟಡದ ಮಧ್ಯದಿಂದ ಹಾಯ್ದು ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ನೋಡಿ ಈ ವಿಡಿಯೋ…

ಇನ್ನೂ ವಿಶೇಷವೇನೆಂದರೆ ಟ್ರೈನ್ ನಡೆದುಕೊಂಡು ಹೋಗುವಾಗ ಬಿಲ್ಡಿಂಗ್ ನಲ್ಲಿ ಇರುವ ನಿವಾಸಿಗರಿಗೆ ಟ್ರೈನಿನ ಸ್ವಲ್ಪವೂ ಶಬ್ದ ಕೇಳಿ ಬರುವುದಿಲ್ಲ. ಆ ರೀತಿಯ ಟೆಕ್ನಿಕ್ ಇಲ್ಲಿ ಯೂಸ್ ಮಾಡಲಾಗಿದೆ. ಈ ಕಟ್ಟಡದ ಮುಖಾಂತರ ಟ್ರೈನ್ ಪಾಸ್ ಆಗುವಾಗ ಪಾತ್ರೆಗಳನ್ನು ತೊಳೆದಷ್ಟು ಸಹ ಶಬ್ದ ಹೊರಹೊಮ್ಮುವುದಿಲ್ಲ.

ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಪ್ಲಾಟ್ಫಾರ್ಮ್ ಆಗ ಟ್ವಿಟರ್ ನಲ್ಲಿ @wowinteresting8 ಹೆಸರಿನ ಐಡಿ ಇಂದ ಶೇರ್ ಮಾಡಲಾಗಿದೆ. ಕೇವಲ 11 ಸೆಕೆಂಡುಗಳ ಈ ವಿಡಿಯೋ ಇಲ್ಲಿಯವರೆಗೆ 5 ಲಕ್ಷ 58 ಸಾವಿರಕ್ಕೂ ಅಧಿಕ ಜನರು ನೋಡಿದ್ದಾರೆ. ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಮತ್ತು ಜೊತೆಯಲ್ಲಿ ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ