ತನ್ನ ಮದುವೆಯಲ್ಲಿ ಮನಸಾರೆ ಕುಣಿದು, ಗಂಡನ ಮನೆಗೆ ಹೋಗುವಾಗ ನಡು ರಸ್ತೆಯಲ್ಲಿ ಕಾರು ನಿಲ್ಲಿಸಿ ವಧು ಮಾಡಿದ ಈ ಕೆಲಸ ನೋಡಿ!

ಸದ್ಯಕ್ಕೆ ಲಾಕ್ಡೌನ್ ದಿಂದಾಗಿ ಅನೇಕ ಸಾಮಾಜಿಕ ಹಾಗೂ ವೈಯಕ್ತಿಕ ಕಾರ್ಯಕ್ರಮಗಳು ಕಡಿಮೆಯಾಗುತ್ತಿವೆ. ಒಂದು ವೇಳೆ ಮಾಡಿದರೂ ಸಹ ಅದು ಮೊದಲಿನಂತೆ ಅಷ್ಟೊಂದು ಭರ್ಜರಿಯಾಗಿ ಮಾಡುವಂತಿಲ್ಲ. ಸಾಮಾಜಿಕ ಅಂತರ ಹಾಗೂ ಸ್ವ ಸಂರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಯಾವುದೇ ಕಾರ್ಯಕ್ರಮಕ್ಕೆ ಸರಕಾರವು ಕೇವಲ 50 ಜನರಿಗೆ ಪಾಲ್ಗೊಳ್ಳಲು ಅನುಮತಿ ನೀಡಿದ್ದಾರೆ. ಸದ್ಯಕ್ಕೆ ಎಷ್ಟೋ ಕಾರ್ಯಕ್ರಮಗಳು ಮೊದಲಿನಂತೆ ರಾಜಾರೋಷವಾಗಿ ಮಾಡದೆ ಕದ್ದುಮುಚ್ಚಿಯೂ ಮಾಡಲಾಗುತ್ತಿದೆ.

ಸದ್ಯಕ್ಕೆ ಮದುವೆಗಳು ಸಹ ಎಷ್ಟೋ ಸಾಧಾರಣವಾದ ರೀತಿಯಲ್ಲಿ ಮಾಡುತ್ತಿದ್ದಾರೆ. ಅದು ನೋಡಿದರೆ ಮುಂದೆಯೂ ಸಹ ಹೀಗೆಯೇ ನಡೆಯಬೇಕು ಎಂದೆನಿಸುತ್ತದೆ. ಏಕೆಂದರೆ ಹೆಣ್ಣು ಹೊತ್ತ ತಂದೆಗೆ ಹಾಗೂ ಗಂಡಿನ ಕಡೆಯವರಿಗೆ ಮದುವೆ ಬಗ್ಗೆ, ಅಡುಗೆ ಬಗ್ಗೆ, ಅತಿಥಿಗಳ ಬಗ್ಗೆ ಸಮಸ್ಯೆಯೇ ನಿರ್ಮಾಣ ವಾಗುವದಿಲ್ಲ. ಅಲ್ಲದೆ ಅಷ್ಟೊಂದು ಖರ್ಚು ಕೂಡಾ ಆಗುತ್ತಿಲ್ಲ. ಕೇವಲ ಮದುವೆಯಲ್ಲಿ ಸುಮಾರು 50 ಕ್ಕಿಂತ ಕಡಿಮೆ ಜನರು ಪಾಲ್ಗೊಳ್ಳುವದರಿಂದ ಖರ್ಚು ಸಹ ಕಡಿಮೆಯಾಗುತ್ತಿದೆ. ಹೀಗೆಯೇ ಮದುವೆಯ ಕುರಿತು ಮೊನ್ನೆ ಒಂದು ವಿಚಿತ್ರ ಘಟನೆ ನಡೆದಿದೆ. ಅದನ್ನು ಕೇಳಿದರೆ ನೀವು ಆಶ್ಚರ್ಯ ಪಡುವಿರಿ.

ಶ್ಯೋಪೂರ್:- ಈ ವಿಚಿತ್ರ ಘಟನೆ ಮಧ್ಯಪ್ರದೇಶದ ಶ್ಯೋಪೂರ ಜಿಲ್ಲೆಯ ಸವಾಯಿಮಧೋಪುರ್- ಶ್ಯೋಪೂರ್ ಹಾಯ್ ವೇ ಯ ಬದಿಯಲ್ಲಿರುವ ಚಂಬಲ್ ನದಿಯ ಪಾಲಿ ಸೇತುವೆಯ ಮೇಲೆ ನಡೆದಿದೆ. ಅಲ್ಲಿ ನಡೆದದ್ದು ಏನೆಂದರೆ ಹೊಸದಾಗಿ ಮದುವೆ ಮಾಡಿಕೊಂಡ ಪತಿ ತನ್ನ ಪತ್ನಿಯನ್ನು ಕರೆದುಕೊಂಡು ಕಾರಿನಲ್ಲಿ ಹೊರಟಿದ್ದ. ದಾರಿಯುದ್ದಕ್ಕೂ ಯಾವುದೇ ಮಾತುಕತೆ ನಡೆಸದೆ ಪತಿ ಪತ್ನಿ ಇಬ್ಬರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಕಾರು ಚಂಬಲ್ ನದಿಯ ಮೇಲಿನ ಪಾಲಿ ಸೇತುವೆಗೆ ಬಂದು ಮುಟ್ಟಿದ ನಂತರ ಮದುಮಗಳು ತನಗೆ ತುಂಬಾ ತಲೆ ಸುತ್ತುತ್ತಿದೆ ಸ್ವಲ್ಪ ಗಾಡಿ ನಿಲ್ಲಿಸಿ, ಎಂದು ಮದುಮಗನಿಗೆ ಹೇಳಿದಳು. ಗಂಡನು ಸಹ ಬಹಳಷ್ಟು ಸಮಯ ಪ್ರವಾಸ ಮಾಡಿದ್ದರಿಂದ ಇವಳಿಗೆ ತಲೆಸುತ್ತುತ್ತಿರಬಹುದು ಎಂದುಕೊಂಡು ಡ್ರೈವರ್ ಗೆ ಹೇಳಿ ಗಾಡಿ ನಿಲ್ಲಿಸಿದನು.

ಮದುಮಗಳು ತಲೆಸುತ್ತುತ್ತಿದೆ ಎಂದು ಕಾರಿನ ಕೆಳಗಡೆ ಇಳಿದ ನಂತರ ಮದುಮಗನು ಸಹ ಜೊತೆಗೆ ಇಳಿದನು. ಮದುಮಗಳು ಸೇತುವೆಯ ಮೇಲಿದ್ದ ರೇಲಿಂಗ್ ಹಿಡಿದುಕೊಂಡು ಸ್ವಲ್ಪ ಹೊತ್ತು ನಿಂತಳು. ಆನಂತರ ಸೇತುವೆಯ ಮೇಲಿಂದ ಚಂಬಲ ನದಿಗೆ ಜಿಗಿದಳು. ಮದುಮಗ ಏನಾಗುತ್ತಿದೆ ಎನ್ನುವಷ್ಟರಲ್ಲಿಯೇ ಕ್ಷಣಾರ್ಧದಲ್ಲಿ ಆಕೆ ಸೇತುವೆಯಿಂದ ಕೆಳಗೆ ಹಾರಿಯಾಗಿತ್ತು. ಅಲ್ಲಿದ್ದ ಸ್ಥಾನಿಕ ಜನರು ಘಟನೆ ನಡೆದ ಸ್ಥಳಕ್ಕೆ ಬಂದನಂತರ ಅಲ್ಲಿಯ ರೇಸ್ಕ್ಯೂ ಆಫೀಸ್ ನವರಿಗೆ ಕರೆ ಮಾಡಿದರು. ತಕ್ಷಣ ಅಲ್ಲಿಗೆ ಪೊಲೀಸರು ಬಂದು ಅಲ್ಲಿಯ ಜನರ ಸಹಾಯದಿಂದ ಅವಳನ್ನು ತೆಗೆಯುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು.

ಕಳೆದ ಶನಿವಾರವೇ ಇವರಿಬ್ಬರ ಮದುವೆಯಾಗಿತ್ತು. ಮದುಮಗಳು ಮದುವೆಯ ದಿನದಂದು ತುಂಬಾ ಖುಷಿಯಾಗಿದ್ದಳು, ಅಲ್ಲದೆ ರಾತ್ರಿಯಲ್ಲಿ ಎಲ್ಲರ ಜೊತೆಗೂಡಿ ಡ್ಯಾನ್ಸ್ ಸಹ ಮಾಡಿದ್ದಳು. ಆದರೆ ರವಿವಾರ ಈ ಘಟನೆ ನಡೆದಿದೆ. ಯಾರಿಗೂ ಏನು ತಿಳಿಯದ್ದರಿಂದ ಈ ಪ್ರಕಾರದ ದುಃಖದ ಮತ್ತು ವೇದನೆಯ ಘಟನೆ ನಡೆದದ್ದರಿಂದ ವಧು-ವರರ ಕುಟುಂಬಗಳು ತುಂಬಾ ದುಃಖದಲ್ಲಿವೆ. ಮದುಮಗಳು ಈ ಪ್ರಕಾರದ ನಿರ್ಣಯ ತಗೆದುಕೊಂಡಿದ್ದು ಏಕೆ? ಅವಳಿಗೆ ಈ ಮದುವೆ ಇಷ್ಟ ಇರಲಿಲ್ಲವೇ? ಕುಟುಂಬದ ಸಮಸ್ಯೆ ಏನಾದರೂ ಇರಬಹುದಾ? ಹೀಗೆ ಹಲವಾರು ಪ್ರಕಾರದ ಪ್ರಶ್ನೆಗಳು ಅವರ ಕುಟುಂಬದವರ ಮನದಲ್ಲಿ ಉದ್ಭವ ಗೊಂಡಿವೆ. ಇದುವರೆಗೂ ಈ ಘಟನೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.