ಚಲಿಸುತ್ತಿರುವ ಟ್ರೈನಿಂದ ಒಮ್ಮೆಲೆ ಇಳಿದಳು ಯುವತಿ! ಮುಂದೆ ನಡೆದ ದೃಶ್ಯ CCTV ಯಲ್ಲಿ ಸೆರೆ.

ರೈಲು ಪ್ರವಾಸದ ಮದ್ಯದಲ್ಲಿ ಅನೇಕ ಸಲ ಪ್ರವಾಸಿಗರು ಯಾವುದೇ ಮುಂದಾಲೋಚನೆಯನ್ನು ಮಾಡದೆ ಗಡಿಬಿಡಿಯಿಂದ ವರ್ತಿಸುವ ಕಾರಣದಿಂದಾಗಿ ಎಷ್ಟೋ ಸಲ ತಮ್ಮ ಜೀವವನ್ನೇ ಅಪಾಯದಲ್ಲಿ ಸಿಲುಕಿಸಿಕೊಳ್ಳುತ್ತಾರೆ. ಸದ್ಯ ಒಬ್ಬ ಯುವತಿ ಇದೇ ರೀತಿಯ ಪ್ರಯತ್ನ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಆದರೆ ಪ್ರಸ್ತುತ ಯುವತಿಯ ಅದೃಷ್ಟ ತುಂಬಾ ಚೆನ್ನಾಗಿತ್ತು ಹೀಗಾಗಿ ಯಾವುದೇ ರೀತಿಯ ಗಂಭೀರ ಗಾಯವಾಗದೆ ಬದುಕಿ ಉಳಿದಿದ್ದಾಳೆ. ಸರಿಯಾದ ಸಮಯಕ್ಕೆ ಪ್ಲಾಟ್ಫಾರ್ಮ್ ಮೇಲೆ ಡ್ಯೂಟಿ ಮಾಡುತ್ತಿದ್ದ RPF ಸಹ ಸಹಾಯಕ್ಕೆ ಬಂದಿದ್ದಾನೆ.

ಸಿಸಿಟಿವಿಯ ಈ ದೃಶ್ಯವು ಮಹಾರಾಷ್ಟ್ರದ ಗೋಂದಿಯಾ ಜಿಲ್ಲೆಯಿಂದ ವರದಿಯಾಗಿದೆ. ಟ್ರೈನ್ ಚಲಿಸುತ್ತಿರುವಾಗಲೇ ಯುವತಿಯು ಇಳಿಯುವ ಪ್ರಯತ್ನ ಮಾಡಿದ್ದಾಳೆ. ಯುವತಿ ಟ್ರೈನ್ ನಿಂದ ಇಳಿದ ನಂತರ ತಾನು ಹಿಡಿದಿರುವ ಹ್ಯಾಂಡಲ್ ಬಿಟ್ಟಿಲ್ಲ. ಹೀಗಾಗಿ ಟ್ರೈನ್ ಯುವತಿಗೆ ತನ್ನತ್ತ ಜೋರಾಗಿ ಸೆಳೆದ ಕಾರಣದಿಂದಾಗಿ ಪ್ಲಾಟ್ ಫಾರ್ಮ್ ಮೇಲೆ ಯುವತಿ ಬಿದ್ದಿದ್ದಾಳೆ. ಅಲ್ಲಿಯೇ ನಿಂತ RPF ಜವಾನ್ ಈ ದೃಶ್ಯವನ್ನು ನೋಡಿ ತಕ್ಷಣ ಯುವತಿಗೆ ಉಳಿಸಲು ಕಾರ್ಯ ಪ್ರವೃತ್ತನಾಗಿದ್ದಾನೆ. ಹಾಗೂ ಯುವತಿಯ ಜೀವ ಉಳಿಸಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾನೆ.

ವಿಡಿಯೋ ನೋಡಿ.

ಪ್ರಸ್ತುತ ವಿಡಿಯೋವನ್ನು ರೇಲ್ವೆ ತನ್ನ ಅಧಿಕೃತವಾದ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದೆ. ಜೊತೆಗೆ ರೇಲ್ವೆ ಡಿಪಾರ್ಟ್ ಮೆಂಟ್ ಪ್ರವಾಸಿಗರಿಗೆ ಟ್ರೈನ್ ಚಲಿಸುವಾಗ ಟ್ರೈನ್ ನಲ್ಲಿ ಏರುವದು ಮತ್ತು ಇಳಿಯುವುದು ಮಾಡಬೇಡಿ ಎಂದು ಕರೆ ನೀಡಿದೆ.