ತಂದೆಗೆ ಹೆದರಿ ಓಡಿಹೋದ ನಾಯಿಮರಿಗಳು, IPS ಆಫೀಸರ್ ಎಂದರು; ಭಾರತೀಯ ಪೋಷಕರ ದರ್ಪ ಅಂದ್ರೆ ಹೀಗಿರುತ್ತೆ!

ಪ್ರತಿಯೊಬ್ಬ ತಂದೆ ತನ್ನ ಮಕ್ಕಳು ಅವರವರ ಜೀವನದಲ್ಲಿ ತುಂಬಾ ಮುಂದೆ ಹೋಗಬೇಕು, ಯಶಸ್ಸಿನ ಏಣಿ ಸದಾ ಏರುತ್ತಲೇ ಹೋಗಬೇಕು, ಎಲ್ಲ ಕೆಲಸಗಳನ್ನೂ ಸರಿಯಾಗಿ ಅಚ್ಚುಕಟ್ಟಾಗಿ ಮಾಡಬೇಕು, ಎಲ್ಲಿಯೂ ಸಮಾಜಕ್ಕೆ ಅಹಿತವಾದ ಕೆಲಸಗಳನ್ನು ಮಾಡಬಾರದು ಅಂತೆಲ್ಲ ಆಸೆ ಪಡುತ್ತಾರೆ. ಇದಕ್ಕಾಗಿ ತಮ್ಮ ಮಕ್ಕಳಿಗೆ ಪೋಷಕರು ಕೆಲವೊಮ್ಮೆ ಹೆದರಿಸುವುದು, ಬೆದರಿಸುವುದು ಪ್ರಸಂಗ ಬಂದಾಗ ನಾಲ್ಕು ಹೊಡೆತಗಳನ್ನು ಸಹ ಹಾಕುತ್ತಾರೆ. ಒಟ್ಟಿನಲ್ಲಿ ಮಕ್ಕಳು ಶಿಸ್ತಿನಿಂದ ಇರಬೇಕು ಹಾಗೂ ತಮ್ಮ ಹದ್ದು ಬಸ್ತಿನಲ್ಲಿ ಇರಬೇಕೆಂದು ಪೋಷಕರು ಯೋಚಿಸುತ್ತಾರೆ. ಕೆಲವೊಂದು ಸಲ ಮಕ್ಕಳು ಮುಕ್ತವಾಗಿ ಆಟ ಆಡುತ್ತಿರುವಾಗ, ತುಂಟಾಟ ಮಾಡುತ್ತಿರುವಾಗ ಆಕಸ್ಮಿಕವಾಗಿ ಅಲ್ಲಿ ತಂದೆ ಬಂದರೆ ಕ್ಷಣದಲ್ಲಿ ಮಕ್ಕಳು ಹೆದರಿಕೊಂಡು ಅಲ್ಲಿಂದ ಪಲಾಯನ ಗೈಯುತ್ತಾರೆ. ಸದ್ಯ ಇದೇ ರೀತಿಯ ದೃಶ್ಯ ನಾಯಿಗಳಲ್ಲಿ ಕಂಡು ಬಂದಿದೆ. ಈ ತಮಾಷೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಜಬರ್ದಸ್ತ್ ವೈರಲ್ ಆಗುತ್ತಿದೆ. ಬನ್ನಿ ನೋಡೋಣ ಏನಾಗಿದೆ ಅಂತ.

ಪ್ರಸ್ತುತ ವಿಡಿಯೋದಲ್ಲಿ ನಾಯಿಯ ಪುಟ್ಟ ನಾಲ್ಕೈದು ಮರಿಗಳು ರಸ್ತೆ ಬದಿಗಿರುವ ಮನೆಯ ಹತ್ತಿರ ತುಂಟಾಟ ಮಾಡಿಕೊಂಡು ಆಡುತ್ತಿದೆ. ಅವುಗಳ ಎದುರಿಗೆ ಸ್ವಲ್ಪ ದೂರದಲ್ಲಿ ನಾಯಿಯೊಂದು ನಿಂತು ಇದನ್ನು ಗಮನಿಸುತ್ತಿದೆ. ಆ ಪುಟ್ಟ ಮರಿಗಳ ಮಸ್ತಿ ಮತ್ತು ತುಂಟಾಟ ಈ ನಾಯಿಗೆ ಯಾಕೋ ಸರಿ ಬಂದಿಲ್ಲ. ಹೀಗಾಗಿ ಅದು ದೂರದಿಂದಲೇ ಆ ಮರಿಗಳಿಗೆ ಹೆದರಿಸಿ ಓಡಿಸಿ ಕಳುಹಿಸಲು ಪ್ರಯತ್ನ ಮಾಡುತ್ತದೆ, ಮತ್ತು ಇನ್ನೇನು ಹೋಗಿ ಎರಡು ಏಟು ಹಾಕುವ ಹಾಗೆ ನಟನೆ ಮಾಡುತ್ತದೆ. ಮರಿಗಳು ತಂದೆ ಬಂದು ಎಲ್ಲಿ ನಮಗೆ ಹೊಡೆಯುತ್ತಾನೆ ಎಂಬ ಭಯದಿಂದ ಎಲ್ಲವೂ ಕೂಡಿ ಪೈಪಿನ ಮುಖಾಂತರ ಒಳಗೆ ಹೋಗಿ ಹೋಗುತ್ತವೆ. ದೃಶ್ಯವನ್ನು ನೋಡಿದಾಗ ನಿಜಕ್ಕೂ ತುಂಬಾ ತಮಾಷೆ ಅನಿಸುತ್ತದೆ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋವನ್ನು ಟ್ವಿಟರ್ ನಲ್ಲಿ IPS ಆಫೀಸರ್ ಆದ ದಿಪಾಂಶು ಕಾಬ್ರಾ ಅವರು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ವಿಡಿಯೋ ಶೇರ್ ಮಾಡುವುದರ ಜೊತೆಗೆ, “ಭಾರತೀಯ ತಂದೆಯ ಹೆದರಿಕೆ ಎಂದರೆ ಹೇಗಿರುತ್ತದೆ ನೋಡಿ” ಎಂಬ ಕ್ಯಾಪ್ಷನ್ ನೀಡಿದ್ದಾರೆ. ಆಗಸ್ಟ್ 16ರಂದು ಶೇರ್ ಮಾಡಿದ ಈ ವಿಡಿಯೋ ಇಲ್ಲಿಯವರೆಗೆ 7 ಲಕ್ಷಗಳವರೆಗೆ ವೀಕ್ಷಣೆಯನ್ನು ಪಡೆದಿದೆ.