Video; ಧಗಧಗನೆ ಉರಿಯುತ್ತಿರುವ ಶೇಕೋಟಿ ಮೇಲಿಂದ ಹಾರಾಟ, ಮಸ್ತಿ ಮಾಡುತ್ತಿರುವಾಗ ಇಬ್ಬರೂ ಹುಡುಗರಿಗೆ ಬಿತ್ತು ಭಾರಿ ದುಬಾರಿ..!
ಹದಿಹರೆಯದ ವಯಸ್ಸಿನಲ್ಲಿ ಹುಡುಗರು ಯಾರ ಮಾತಿಗೂ ಕಿವಿ ನೀಡದೆ ತಮ್ಮದೇ ಲೋಕದಲ್ಲಿ ಸಂಚಾರ ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಕೆಲವೊಂದು ಸಲ ಏನೋ ಮಾಡಲು ಹೋಗಿ ಬೇರೆ ಏನೋ ಅವಾಂತರಗಳು ಘಟಿಸಿ ಬಿಡುತ್ತವೆ. ಅಂತ ದೃಶ್ಯಗಳನ್ನು ನೋಡಿದಾಗ ನಗಬೇಕು ಅಥವಾ ಅಳಬೇಕು ಎಂಬುದೇ ತಿಳಿಯುವುದಿಲ್ಲ. ಪೋಲಿ ಹುಡುಗರ ಇಂತಹದ್ದೇ ಒಂದು ದೃಶ್ಯವನ್ನು ಇಂದಿನ ಅಂಕಣದಲ್ಲಿ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ನೋಡಿದ ಮೇಲೆ ನಗಬೇಕಾ ಅಥವಾ ಅಯ್ಯೋ ಪಾಪ, ಎಂದು ಕನಿಕರ ವ್ಯಕ್ತ ಮಾಡಬೇಕೊ ನೀವೇ ಡಿಸೈಡ್ ಮಾಡಿ.
ವಿಡಿಯೋದ ಈ ದೃಶ್ಯದಲ್ಲಿ ರಾತ್ರಿಯ ಸಮಯ ಮೈದಾನದಲ್ಲಿ ಶೇಕೋಟಿ ಅರೇಂಜ್ಮೆಂಟ್ ಮಾಡಿದ್ದು ಕಂಡು ಬರುತ್ತಿದೆ. ಉರಿಯು ಚೆನ್ನಾಗಿಯೇ ಧಗಧಗನೆ ಹೊತ್ತಿ ಉರಿಯುತ್ತಿದೆ. ಹುಡುಗರೆಂದಾಗ ಇನ್ನು ಕೇಳಬೇಕೆ. ಹುಡುಗರ ದೇಹದಲ್ಲಿ ಹತ್ತು ಕಪಿಗಳ ಚೇಷ್ಟೆ ತುಂಬಿರುತ್ತದೆ. ಹೀಗಾಗಿ ಒಬ್ಬರ ನಂತರ ಒಬ್ಬರು ಉರಿಯೊಳಗಿನಿಂದ ಹಾದು ಜಿಗಿಯುತ್ತಿದ್ದಾರೆ. ಹೀಗೆ ಮಾಡುವಾಗ ಇಬ್ಬರು ಹುಡುಗರು ಏಕಕಾಲಕ್ಕೆ ಎದುರು ಬದುರಾಗಿ ಉರಿಯೊಳಗಿನಿಂದ ಜಿಗಿಯಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಯಾವ ರೀತಿಯ ದೃಶ್ಯ ಅಲ್ಲಿ ನಡೆದಿದೆ ಎಂಬುದು ಊಹಿಸಿದರೂ ಮೈ ನಡುಗುತ್ತದೆ.
ಮೊದಲು ಈ ವಿಡಿಯೋ ನೋಡಿ…
ಇಬ್ಬರು ಅರಿವಿಲ್ಲದೆ ಎದುರು ಬದುರಾಗಿ ಜಿಗಿಯುವ ಮೊದಲು ತನ್ನ ಎದುರಿಗೆ ಬರುತ್ತಿರುವ ವ್ಯಕ್ತಿ ಉರಿಯಿಂದಾಗಿ ಕಾಣಿಸಿಯೇ ಇಲ್ಲ. ಹೀಗಾಗಿ ಶೇಕೋಟಿ ಮೇಲೆಯೇ ಜೋರಾಗಿ ಇಬ್ಬರ ಟಕ್ಕರ್ ಆಗಿದೆ. ಹಾಗೂ ವೇಗದ ರಭಸಕ್ಕೆ ಇಬ್ಬರೂ ಅಕ್ಷರಶ: ಎರಡು ದಿಕ್ಕಿಗೆ ಚೆಲ್ಲಾಪಿಲ್ಲಿಯಾಗಿ ಬೆಂಕಿಯಲ್ಲಿಯೇ ಬಿದ್ದಿದ್ದಾರೆ. ವಿಡಿಯೋದಲ್ಲಿ ಕಂಡುಬರುವ ಈ ದೃಶ್ಯವನ್ನು ನೋಡಿದಾಗ ಮೊದಲು ಕನಿಕರ ಹುಟ್ಟುತ್ತದೆ ಜೊತೆಗೆ ಅಯ್ಯೋ ಪಾಪ ಎನಿಸುತ್ತದೆ. ಆದರೆ ಮತ್ತೊಮ್ಮೆ ನೋಡಿದಾಗ ನೋಡುಗರಿಗೆ ನಗು ಸಹ ತಡೆಯುವುದಕ್ಕೂ ಆಗುವುದಿಲ್ಲ. ಅಷ್ಟೊಂದು ತಮಾಷೆಯಿಂದ ಈ ವಿಡಿಯೋ ಕೂಡಿದೆ.
ವಿಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 2.8 ಮಿಲಿಯನ್ ವೀಕ್ಷಣೆ ಪಡೆದಿದ್ದು ಸುಮಾರು 1.5 ಲಕ್ಷ ಲೈಕ್ಸ್ ಗಳನ್ನು ಪಡೆದಿದೆ.