ಮಹೀಂದ್ರಾ THAR ನಲ್ಲಿ ಕುಳಿತು ರೌಂಡ್ ಅಂಡ್ ರೌಂಡ್ ಸುತ್ತುವದು ಯುವಕರಿಗೆ ಬಿತ್ತು ಭಾರಿ ದುಬಾರಿ; ವೈರಲ್ ಆಯ್ತು ವಿಡಿಯೋ…

ಸೋಶಿಯಲ್ ಮೀಡಿಯಾದಲ್ಲಿ ಸ್ಟಂಟ್ಗಳನ್ನು ಮಾಡಿ ಫೇಮಸ್ ಆಗವ ಹುಚ್ಚು ಸಾಕಷ್ಟು ಜನರಿಗೆ ಅದರಲ್ಲೂ ಹದಿಹರೆಯದ ಹುಡುಗರಿಗೆ ತುಂಬಾ ಇರುತ್ತದೆ. ಇದಕ್ಕಾಗಿ ಕೆಲವರು ಏನು ಬೇಕಾದರೂ ಮಾಡಲು ಮುಂದಾಗುತ್ತಾರೆ. ಕೆಲವರಂತೂ ಕೇವಲ ವಿಡಿಯೋ ಲೈಕ್ ಗಳನ್ನು ಪಡೆಯುವ ಸಲುವಾಗಿ ಇಂಥ ಕೆಲಸ ಮಾಡುತ್ತಿರುತ್ತಾರೆ. ಹೀಗೆ ಮಾಡಲು ಹೋಗಿ ಅಪಾಯ ತಂದುಕೊಂಡ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಜೀವನದಲ್ಲಿ ಟ್ವಿಸ್ಟ್ ಇರಬೇಕು ಮತ್ತು ಜೀವನ ರೋಮಾಂಚನದಿಂದ ತುಂಬಿರಬೇಕು ಎಂಬ ಹವ್ಯಾಸದಲ್ಲಿ ಮೈಯಲ್ಲಿರುವ ಎಲುಬುಗಳನ್ನು ಪುಡಿ ಪುಡಿ ಮಾಡಿಕೊಳ್ಳುವುದು ಎಷ್ಟು ಸರಿ? ನೀವೇ ಹೇಳಿ.

ಪ್ರಸ್ತುತ ಇಲ್ಲಿ ನೋಡುವಂತಹ ದೃಶ್ಯಗಳನ್ನು ಚಲನಚಿತ್ರಗಳಲ್ಲಿ ತುಂಬಾ ಚಾಕ ಚಕ್ಯತೆಯಿಂದ ಹಾಗೂ ಯೋಗ್ಯವಾದ ಕಾಳಜಿಯನ್ನು ತೆಗೆದುಕೊಂಡು ಮಾಡಲಾಗುತ್ತದೆ. ಆದರೆ ಇಂದಿನ ಪಡ್ಡೆ ಹುಡುಗರು ಯಾವುದೇ ರೀತಿಯ ಕಾಳಜಿ ತೆಗೆದುಕೊಳ್ಳದೆ ಪಕ್ಕ ಹೊಂಬರಂತೆ ಇಂಥ ಸ್ಟಂಟ್ ಮಾಡಲು ಹೋಗುತ್ತಾರೆ ಮತ್ತು ತಾವು ದೈಹಿಕವಾಗಿ ತಮ್ಮ ಮನೆಯವರಿಗೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಸುತ್ತಾರೆ.

ಈಗ ಇಲ್ಲಿಯದೇ ವಿಡಿಯೋ ಕ್ಲಿಪ್ ನೋಡಿ. ಹದಿಹರೆಯದ ಯುವಕರು ಮಹಿಂದ್ರ ಥಾರ್ ವಾಹನದಲ್ಲಿ ಕುಳಿತು ಮತ್ತು ನಿಂತು ಗರ್ರನೆ ಒಂದೇ ಸವನೆ ವರ್ತುಲಾಕಾರದಲ್ಲಿ ತಿರುಗಿಸುತ್ತಿದ್ದಾರೆ. ಹೀಗೆ ತಿರುಗುವುದು ಯುವಕರಿಗೆ ತುಂಬಾ ದುಬಾರಿಯಾಗಿ ಪರಿಣಮಿಸಿದೆ.

ನೋಡಿ ಅವರು ಸ್ಟಂಟ್ ಮಾಡಿದ ವಿಡಿಯೋ…

ವಿಡಿಯೋದ ದೃಶ್ಯದಲ್ಲಿ ಕಂಡು ಬರುವ ಪ್ರಕಾರ, ವಾಹನದಲ್ಲಿ ಕುಳಿತು ಭರ್ಜರಿ ವೇಗದಲ್ಲಿ ಮೈದಾನದಲ್ಲಿ ಗರಗರನೇ ವರ್ತುಲಾಕಾರದಲ್ಲಿ ಸುತ್ತಾಡುತ್ತಿದ್ದಾರೆ. ಹೀಗೆ ಎರಡು ಮೂರು ಬಾರಿ ತಿರುಗುವಷ್ಟರಲ್ಲಿಯೇ ವಾಹನವು ತನ್ನ ಬ್ಯಾಲೆನ್ಸ್ ಕಳೆದುಕೊಂಡು ಜೋರಾಗಿ ನೆಲಕ್ಕೆ ಅಪ್ಪಳಿಸಿದೆ. ಈ ಸಂದರ್ಭದಲ್ಲಿ ವಾಹನದಲ್ಲಿ ಕುಳಿತ ಅನೇಕರು ನೆಲಕ್ಕೆ ಅಪ್ಪಳಿಸಿದ್ದಾರೆ. ದೃಶ್ಯ ನೋಡಿದರೆ ಅನೇಕರು ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎನ್ನಬಹುದು.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋದಲ್ಲಿ ದೃಶ್ಯವನ್ನು ನೋಡಿ ನೆಟ್ಟಿಗರು ಅನೇಕ ರೀತಿಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಸ್ಟಂಟ್ ಮಾಡುವ ಹವ್ಯಾಸದಲ್ಲಿ ತಮ್ಮ ಮೂಳೆಗಳನ್ನು ಮುರಿದುಕೊಳ್ಳಲು ಯಾರು ಹೇಳಿದ್ದಾರೆ ಎಂಬ ಮಾತುಗಳನ್ನು ಪ್ರತಿಕ್ರಿಯಿಸಿದ್ದಾರೆ. ಒಬ್ಬನಂತೂ ನೆಕ್ಸ್ಟ್ ಟೈಮ್ ಸ್ಟಂಟ್ ಮಾಡುವಾಗ ಈ ಘಟನೆಯನ್ನು ದಯವಿಟ್ಟು ನೆನಪಿಸಿಕೊಳ್ಳಿ ಎಂದಿದ್ದಾನೆ.