Articles

Video; ನೂರಾರು ದೊಡ್ಡ ದೊಡ್ಡ ಮೆಟ್ಟಿಲುಗಳನ್ನು ಕ್ಷಣದಲ್ಲಿ ಹಿನ್ನೆಡೆಗೆ ಓಡುತ್ತ ಇಳಿದ ಭೂಪ..!

ಜಗತ್ತಿನಲ್ಲಿ ಅನೇಕ ಜನ ತಮ್ಮಲ್ಲಿರುವ ವಿವಿಧ ರೀತಿಯ ಟ್ಯಾಲೆಂಟ್ ಗಳ ಮುಖಾಂತರ ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ಮತ್ತು ಸೋಶಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸುತ್ತಾರೆ. ಸದ್ಯ ವ್ಯಕ್ತಿಯೊಬ್ಬ ತನ್ನ ವಿಚಿತ್ರವಾದ ಉಲ್ಟಾ ಓಟದಿಂದ ಎಲ್ಲರ ಗಮನ ತನ್ನೆಡೆಗೆ ಸೆಳೆದುಕೊಂಡಿದ್ದಾನೆ. ಅಂಥ ಈ ಕೆಲಸ ಹೇಗೆ ಮಾಡಿದ್ದಾನೆ ಬನ್ನಿ ನೋಡೋಣ…

ಪ್ರಸ್ತುತ ವಿಡಿಯೋದಲ್ಲಿ ಮೆಟ್ಟಿಲುಗಳಿಂದ ಕೂಡಿದ ಅದ್ಭುತವಾದ ತಾಣ ಒಂದು ಕಂಡು ಬರುತ್ತಿದೆ. ಈ ದೃಶ್ಯ ವಿದೇಶದಲ್ಲಿಯದು ಎಂದು ತಿಳಿದು ಬರುತ್ತಿದೆ. ಇಲ್ಲಿ ವ್ಯಕ್ತಿಯೊಬ್ಬ ಮೇಲಿನಿಂದ ಕೆಳಗಿನ ವರೆಗೆ ಹಬ್ಬಿದ ನೂರಾರು ಮೆಟ್ಟಿಲುಗಳನ್ನು ಕೆಲವೇ ಕ್ಷಣಗಳಲ್ಲಿ ತುಂಬಾ ಸಾಮಾನ್ಯ ಎಂಬಂತೆ ಬಿರಬಿರನೆ ಹಿಂದುಗಡೆಯಿಂದ ಓಡಿ ಬರುವದನ್ನು ನೋಡಿದರೆ ಯಾರೇ ಆಗಲಿ ಮೂಕವಿಸ್ಮಿತರಾಗುತ್ತಾರೆ. ಈ ಸಮಯದಲ್ಲಿ ಆತನ ಓಟ ಎಲ್ಲಿಯೂ ನಿಲ್ಲದೆ ನಾಗಾಲೋಟದಲ್ಲಿ ಹಾಗೆಯೇ ಕಾಯಂ ಆಗಿತ್ತು.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋ ಇನ್ಸ್ತಾಗ್ರಾಂ ನಲ್ಲಿ ಶೇರ್ ಮಾಡಲಾಗಿದ್ದು ಈ ವೀಡಿಯೋವನ್ನು ಇಲ್ಲಿಯವರೆಗೆ ಮಿಲಿಯನ್ ಗಟ್ಟಲೆ ಜನರು ನೋಡಿದ್ದಾರೆ ಮತ್ತು ಸುಮಾರು 21 ಲಕ್ಷಕ್ಕಿಂತ ಹೆಚ್ಚಿನ ಜನರು ಲೈಕ್ಸ್ ಗಳ ಸುರಿಮಳೆಯನ್ನೇ ಮಾಡಿದ್ದಾರೆ.

Leave a Comment

Your email address will not be published. Required fields are marked *