Viral Video: ಎಸ್ಕಲೆಟರ್ ನಲ್ಲಿ ಮೊದಲ ಬಾರಿಗೆ ಹತ್ತುತ್ತಿದ್ದರು ಹಳ್ಳಿಯ ಮಹಿಳೆಯರು; ಸುಂದರ ವಿಡಿಯೋ ನೋಡಿ…
ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ದಿನನಿತ್ಯ ವೈರಲ್ ಆಗುತ್ತವೆ. ಆದರೆ ಹಳ್ಳಿಯ ಮಹಿಳೆಯರ ಈ ಸುಂದರವಾದ ವಿಡಿಯೋ ನೋಡಲು ತುಂಬಾ ವಿಶೇಷವಾಗಿದೆ.
ಪ್ರಸ್ತುತ ವಿಡಿಯೋದಲ್ಲಿ ಹಳ್ಳಿಯ ಕೆಲವು ಮಹಿಳೆಯರು ಮೊದಲ ಬಾರಿಗೆ ಎಸ್ಕಲೇಟರ್ (ಆಟೋಮೆಟಿಕ್ ಸ್ಟೇರ್ ಕೇಸ್ ಅಥವಾ ಚಲಿಸುವ ಮೆಟ್ಟಿಲುಗಳು) ಮೇಲೆ ಹತ್ತುತ್ತಿದ್ದಾರೆ. ಆ ಸಂದರ್ಭದಲ್ಲಿ ಕಂಡು ಬಂದ ಅವರ ಮುಖದ ಮೇಲಿನ ಭಾವನೆ ಮತ್ತು ಪ್ರತಿಕ್ರಿಯೆ ಅಕ್ಷರಶ: ನೋಡುವ ಹಾಗಿದೆ. ಪ್ರಸ್ತುತ ವಿಡಿಯೋದಲ್ಲಿ ಇವರು ಕೆಳಗಿನ ಮೇಲೇರಿ ಬರುತ್ತಿದ್ದಾರೆ. ಅವರ ಮನದಲ್ಲಿ ಒಂದು ರೀತಿಯ ಭಯ ಸಹ ಕಾಣುತ್ತಿದೆ. ಈ ಎಸ್ಕಲೇಟರ್ ಮೇಲೆ ಏರಲು ವ್ಯಕ್ತಿಗೆ ಬ್ಯಾಲೆನ್ಸ್ ಬೇಕಾಗಿರುವುದು ಅವಶ್ಯಕ. ಸ್ವಲ್ಪ ಬ್ಯಾಲೆನ್ಸ್ ತಪ್ಪಿದ್ದರೂ ವ್ಯಕ್ತಿ ಕೆಳಗೆ ಬೀಳುವ ಸಾಧ್ಯತೆಗಳಿರುತ್ತದೆ.
ನೋಡಿ ಈ ವಿಡಿಯೋ…
ಎಸ್ಕಲೇಟರ್ ನಿಂದ ಇಳಿಯುವಾಗ ಅವರ ಮುಖದ ಮೇಲೆ ತುಂಬಾ ಭಯ ಕಂಡುಬರುತ್ತಿದೆ. ಈ ಮಹಿಳೆಯರು ಕಾಲಲ್ಲಿ ಚಪ್ಪಲಿಗಳನ್ನು ಹಾಕಿಕೊಂಡಿಲ್ಲ. ಈ ಸಂದರ್ಭದಲ್ಲಿ ಅವರದೇ ಸಂಬಂಧಿಕನಾದ ವ್ಯಕ್ತಿಯೊಬ್ಬ ಅವರಿಗೆ ಸಹಾಯ ಮಾಡುತ್ತಿರುವದು ಕಂಡುಬರುತ್ತಿದೆ.
ವಿಡಿಯೋ ನೋಡಿ
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆದ ನಂತರ ಅನೇಕ ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ಕಮೆಂಟ್ ಮೂಲಕ ವ್ಯಕ್ತ ಮಾಡುತ್ತಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ fresh_outta_stockz ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 10 ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗನೊಬ್ಬ ಪ್ರಸ್ತುತ ವಿಡಿಯೋ ತುಂಬಾ ಸುಂದರವಾಗಿದೆ ಎಂದಿದ್ದಾನೆ.