40 ಅಂತಸ್ತುಗಳ ಆಕಾಶದೆತ್ತರದ, 800 ಕೋಟಿ ರೂಪಾಯಿಗಳ ದೆಹಲಿಯ ಈ ಕಟ್ಟಡ ಬರೀ 9 ಸೆಕೆಂಡುಗಳಲ್ಲಿ ಮಟಾಷ್!
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದೆಹಲಿ ಹತ್ತಿರ ನೋಯಿಡಾದ 40 ಅಂತಸ್ತಿನ ಕುತುಬ್ ಮಿನಾರ್ ಗಿಂತಲೂ ಎತ್ತರವಾದ ಭ್ರಷ್ಟಚಾರದ ಪ್ರತೀಕವಾದ ಹಾಗೂ ಅನಧಿಕೃತ ಅವಳಿ ಕಟ್ಟಡವನ್ನು ನೆಲಸಮ ಮಾಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಕಂಡು ಬರುತ್ತಿರುವ 40 ಅಂತಸ್ತಿನ ಈ ಕಟ್ಟಡವನ್ನು ಕಟ್ಟಲು ಸುಮಾರು 800 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿತ್ತು. ಸದ್ಯ ಈ ಕಟ್ಟಡ ಅನಧಿಕೃತವಾದ ಕಾರಣದಿಂದಾಗಿ ನೆಲಸಮಗೊಳಿಸಲಾಯಿತು. ಈ ಕಟ್ಟಡವನ್ನು ನೆಲಸಮಗೊಳಿಸುವ ಮುನ್ನ ಸುತ್ತಮುತ್ತಲಿನ ಅನೇಕ ಕಟ್ಟಡಗಳಲ್ಲಿನ ಜನರಿಗೆ ಸುರಕ್ಷತೆಯ ಕಾರಣದಿಂದಾಗಿ ಹೊರಗೆ ಕರೆಯಲಾಗಿತ್ತು. ಮತ್ತು ಅನೇಕ ಕಟ್ಟಡಗಳನ್ನು ಕವರ್ ಮಾಡಲಾಗಿತ್ತು.
ನೋಡಿ ಈ ವಿಡಿಯೋ.
ಈ ಕಟ್ಟಡವನ್ನು ಕೆಳಗೆ ಬೀಳಿಸುವ ಸಲುವಾಗಿ ಸುಮಾರು 9,640 ಹೊಲ್ ಗಳಲ್ಲಿ 3700 ಕೆಜಿ ಸ್ಪೋಟಕವನ್ನು ಉಪಯೋಗಿಸಲಾಗಿತ್ತು. ಪ್ರಸ್ತುತ ಕಟ್ಟಡವನ್ನು ನೆಲಸಮಗೊಳಿಸಿದ ನಂತರ ಸುಮಾರು 10 ನಿಮಿಷಗಳವರೆಗೆ ಅಲ್ಲಿಯ ಪರಿಸರವೆಲ್ಲವೂ ಧೂಳಿನಿಂದ ಕೂಡಿತ್ತು. ಬಿಲ್ಡಿಂಗ್ ನೆಲಸಮಗೊಳಿಸಿದ ನಂತರ ಸುಮಾರು 55000 ಟನ್ ಗಿಂತಲೂ ಹೆಚ್ಚಿನ ಅವಶೇಷ ನಿರ್ಮಾಣವಾಗಲಿದೆ ಎಂಬ ಅನುಮಾನವಿದೆ. ಇದನ್ನು ಸ್ವಚ್ಛಗೊಳಿಸಲು ಸುಮಾರು ಮೂರು ತಿಂಗಳುಗಳ ಕಾಲಾವಧಿ ಬೇಕಾಗಲಿದೆ. ಭಾರತದಲ್ಲಿ ನಡೆದ ಈ ರೀತಿಯ ಮೊದಲ ಆಪರೇಷನ್ ಇದಾಗಿದೆ.