Video: ಸ್ಟೇಜ್ ಮೇಲೆಯೇ ಅಭಿಮಾನಿಯ ಕಾಲಿಗೆ ಎರಗಿ ನಮಸ್ಕರಿಸಿದರು ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್..!

ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರ ಬಹು ಪ್ರತೀಕ್ಷಿತ “ವಿಕ್ರಮ್ ವೇಧ” ಚಿತ್ರ ಬರುವ ಸೆಪ್ಟೆಂಬರ್ 30 ರಂದು ತೆರೆ ಕಾಣಲು ಸಿದ್ಧವಾಗಿದೆ. ಇದೇ ಚಿತ್ರದ ಪ್ರಮೋಶನ್ ಗೆ ಸೇರಿದಂತೆ ಕಾರ್ಯಕ್ರಮ ಒಂದರಲ್ಲಿ ಹೃತಿಕ್ ಭಾಗವಹಿಸಿದ್ದರು. ಅಲ್ಲಿ ನಡೆದ ಒಂದು ವಿಶೇಷ ಪ್ರಸಂಗ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪ್ರಸ್ತುತ ವಿಡಿಯೋದ ದೃಶ್ಯವನ್ನು vairalbhayani ಹೆಸರಿನ ಇನ್ಸ್ಟಾಗ್ರಾಮ್ ಐಡಿ ಯಿಂದ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಹೃತಿಕ್ ತುಂಬಾ ಸಿಂಪಲ್ ಆಗಿ ಕಂಡು ಬರುತ್ತಿದ್ದಾರೆ. ಒಂದು ಕ್ಯಾಪ್ ವೈಟ್ ಪ್ಯಾಂಟ್ ಮತ್ತು ಹಸಿರು ಬಣ್ಣದ ಫ್ಲೋರೋಸೆಂಟ್ ಟಿ ಶರ್ಟ್ ತೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಹೃತಿಕ್ ಅವರಿಗೆ ಕಾಲುಗಳನ್ನು ಮುಟ್ಟಿ ನಮಸ್ಕರಿಸುತ್ತಾನೆ. ಆಗ ಹೃತಿಕ್ ಅವರು ಸಹ ಕೊಂಚವೂ ತಡ ಮಾಡದೆ ಆ ಕ್ಷಣವೇ ಬಾಗಿ ಅಭಿಮಾನಿಯ ಕಾಲುಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತಾರೆ. ನಂತರ ಅಭಿಮಾನಿಗೆ ತಮ್ಮ ಜೊತೆಗೆ ಬರ ಸೆಳೆದು ಹೆಗಲ ಮೇಲೆ ಕೈ ಹಾಕಿ ಫೋಟೋಗೆ ಪೋಸ್ ನೀಡುತ್ತಾರೆ.

ಪ್ರಸ್ತುತ ದೃಶ್ಯ ಇಂಟರ್ನೆಟ್ ನಲ್ಲಿ ಗಾಳಿಯಂತೆ ವೈರಲ್ ಆಗುತ್ತಿದೆ. ಹಾಗೂ ಅಭಿಮಾನಿಗಳು ಆಶ್ಚರ್ಯವನ್ನು ವ್ಯಕ್ತ ಮಾಡುತ್ತಿರುವದಲ್ಲದೆ ಹೃತಿಕ್ ಅವರ ಈ ಸ್ಪಂದನೆಗೆ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ತಮ್ಮ ಕಾಮೆಂಟ್ ಸೆಕ್ಷನ್ ನಲ್ಲಿ “ಸೋ ಸ್ವೀಟ್ ಆಫ್ ಯು ಅಟ್ ಹೃತಿಕ್ ರೋಷನ್” ಎಂದಿದ್ದಾರೆ.

ಯಾರು ಬಾಯ್ಕಾಟ್ ಮಾಡಬೇಡಿ…

ಸದ್ಯ ಬಾಲಿವುಡ್ ನಲ್ಲಿ ಬಾಯ್ಕಾಟ್ ಟ್ರೆಂಡ್ ಜೋರಾಗಿ ಶುರುವಾಗಿದೆ. ಚಿತ್ರದಲ್ಲಿ ಸಮಾಜದ ವಿರುದ್ಧ, ದೇಶದ ವಿರುದ್ಧ, ಶ್ರದ್ಧೆಗೆ ವಿರುದ್ಧ ಬೇಕೆಂತಲೇ ತೋರಿಸುತ್ತಿರುವ ದೃಶ್ಯಗಳನ್ನು ಒಪ್ಪದ ಅಭಿಮಾನಿಗಳು ನೇರ ಚಿತ್ರವನ್ನೇ ಬಾಯ್ಕಾಟ್ ಮಾಡುವ ಕ್ಯಾಂಪೇನ್ ನಡೆಸುತ್ತಿದ್ದಾರೆ. ಇದರಲ್ಲಿ ಅಭಿಮಾನಿಗಳು ಯಶಸ್ವಿಯೂ ಆಗಿದ್ದಾರೆ. ಇತ್ತೀಚೆಗೆ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಹಾಗೂ ಅಕ್ಷಯ್ ಕುಮಾರ್ ಅಭಿನಯದ ರಕ್ಷಾಬಂಧನ ಚಿತ್ರಗಳು ಬಾಕ್ಸ್ ಆಫೀಸ್ ಮೇಲೆ ಮುಗ್ಗುರಿಸಿ ಬಿದ್ದವು.

ವಿಡಿಯೋ ನೋಡಿ

 

View this post on Instagram

 

A post shared by Viral Bhayani (@viralbhayani)

ಸದ್ಯ ಹೃತಿಕ್ ಅವರ ಈ ಮನಮುಟ್ಟುವ ಸ್ವಭಾವ ನೋಡಿ ಅಭಿಮಾನಿಗಳು ಹೃತಿಕ್ ಅವರ ಚಿತ್ರ ಯಾರು ಬಾಯ್ಕಾಟ್ ಮಾಡಬೇಡಿ ಎಂದು ಕರೆ ನೀಡಿದ್ದಾರೆ. ಹೃತಿಕ್ ಅವರು ವಿಕ್ರಮ್ ವೇಧ ಚಿತ್ರ ಜೊತೆಗೆ ಸುಮಾರು 3 ವರ್ಷಗಳ ನಂತರ ತೆರೆ ಮೇಲೆ ಕಾಣಲಿದ್ದಾರೆ. ಪ್ರಸ್ತುತ ಚಿತ್ರ ತಮಿಳು ಮೂಲವಾಗಿದ್ದು ನಿರ್ದೇಶಕರಾದ ಪುಷ್ಕರ್ – ಗಾಯಿತ್ರಿ ಜೋಡಿಯೇ ಹಿಂದಿಯ ರಿಮೇಕ್ ನಲ್ಲೂ ನಿರ್ದೇಶನ ಮಾಡಿದ್ದಾರೆ. ಚಿತ್ರ ಸೆಪ್ಟೆಂಬರ್ 30 ರಂದು ತೆರೆ ಕಾಣಲಿದೆ.