ಮಲಗಿದ್ದಾಗ ಬೃಹದಾಕಾರದ ನಾಗರ ಹಾವು ಬಂದು ಬೆನ್ನಿನ ಮೇಲೆ ಹೆಡೆ ತಗೆದು ಕುಂತಿತು, ‘ಮಲ್ಲಯ್ಯ ಮಲ್ಲಯ್ಯ’ ಎಂದು ಗೋಳಾಡಿದ ಮಹಿಳೆ!! ವಿಡಿಯೋ ನೋಡಿ….

ಅನೇಕ ವ್ಯಕ್ತಿಗಳು ವನ್ಯ ಪ್ರಾಣಿಗಳ ಜೊತೆಗೆ ಮೈತ್ರಿಯನ್ನು ಹೊಂದಿರುತ್ತಾರೆ. ಇತ್ತೀಚೆಗೆ ಅದರಲ್ಲೂ ನಾವು ನೋಡುವ ಹಾಗೆ ಸರ್ಪಗಳ ಜೊತೆಗೆ ಹೆಚ್ಚಾಗಿ ಮೈತ್ರಿ ಮಾಡಿಕೊಳ್ಳುವುದನ್ನು ನೋಡುತ್ತಿದ್ದೇವೆ. ಎಷ್ಟೋ ಸಲ ಈ ಮೈತ್ರಿ ಸರ್ಪಮಿತ್ರರ ಜೀವಕ್ಕೆ ಅಪಾಯ ತರುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಾವು ಮತ್ತು ಮಹಿಳೆಯ ಜೊತೆಗೆ ಅಚಾತುರ್ಯ ನಡೆದ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಈ ವಿಡಿಯೋ ನೋಡಿದಾಗ ಭಾವುಕರಾಗುವದು ಅಂತೂ ಖಚಿತ. ಏಕೆಂದರೆ ಈ ವಿಡಿಯೋದಲ್ಲಿ ಅಂತ ವಿಪರ್ಯಾಸ ನಡೆಯುತ್ತದೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ವಿಡಿಯೋ ನೋಡಿದರೆ ಮೈಝಲ್ಲೆನ್ನುತ್ತದೆ. ಈ ವಿಡಿಯೋ ಒಬ್ಬ ಮಹಿಳೆ ಮತ್ತು ನಾಗರ ಹಾವಿನ ನಡುವೆ ನಡೆದ ಘಟನೆಯ ವಿಡಿಯೋ ಇದಾಗಿದೆ.

ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಬ್ಬ ಮಹಿಳೆ ಮದ್ಯಾಹ್ನದ ಸಮಯದಲ್ಲಿ ಮನೆಯ ಮುಂದೆ ಒಂದು ಮಂಚದ ಮೇಲೆ ಮಲಗಿಕೊಂಡು ವಿಶ್ರಾಂತಿ ಪಡೆಯುತ್ತಿರುತ್ತಾಳೆ. ಆದರೆ ಸ್ವಲ್ಪ ಸಮಯದ ನಂತರ ಆಕೆ ನಿದ್ರೆಗೆ ಜಾರುತ್ತಾಳೆ. ನಿದ್ದೆ ಮಾಡುತ್ತಿರುವಾಗ ಅಲ್ಲಿಂದ ಒಂದು ಬೃಹದಾಕಾರದ ನಾಗರ ಹಾವು ಬರುತ್ತದೆ. ನಾಗರ ಹಾವು ಈ ಮಹಿಳೆಯ ಬೆನ್ನಿನ ಮೇಲೆ ಏರಿ ತನ್ನ ಹೆಡೆಯನ್ನು ತಗೆದು ಬುಷ್ ಬುಷ್ ಎಂದು ಬೂಷುಗುಡಲು ಶುರು ಮಾಡುತ್ತದೆ. ಮಲಗಿದ್ದ ಮಹಿಳೆಗೆ ಅರಿವೇ ಇರುವದಿಲ್ಲ. ತದನಂತರ ಈ ನಾಗರ ಹಾವಿನ ಧ್ವನಿಯನ್ನು ಒಮ್ಮೆಲೇ ಎಚ್ಚುತ್ತು ಗೊಳ್ಳುತ್ತಾಳೆ. ಇಂತಹ ಪರಿಸ್ಥಿತಿ ಅವಳ ಮನಸ್ಸು ಹೇಗಾಗಿರಬೇಕು. ನಾವು ದೂರಿಂದಲೇ ಹಾವನ್ನು ನೋಡಿದರೆ ಸಾಕುಹೆದರಿ ಬಿಡುತ್ತೇವೆ ಆದರೆ ಈ ಮಹಿಳೆ ತನ್ನ ಶರೀರದ ಮೇಲೆ ಹಾವು ಹೆಡೆ ತಗೆದು ಕುಂತಿದೆ ಅಂತ ತಿಳಿದ ಕೂಡಲೇ ಅವಳು ಮೊದಲನೇ ಎಚ್ಚರ ವಹಿಸಿದ್ದೇನೆಂದರೆ ಶರೀರವು ಸ್ವಲ್ಪ ಸಹ ಅಲುಗಡಿಸಲಿಲ್ಲ, ಎರಡನೇಯದಾಗಿ ಮಹಿಳೆ ತನ್ನ ಧೈರ್ಯ ಕಳೆದುಕೊಳ್ಳಲಿಲ್ಲ. ಧೈರ್ಯದಿಂದ ಹಾಗೆ ಮಲಗುತ್ತಾಳೆ.

ಮಲಗಿಕೊಂಡು ಹಾವನ್ನು ದೂರ ಹೋಗುವಂತೆ ಮಲ್ಲಯ್ಯನ ಧ್ಯಾನ ಮಾಡುತ್ತಾಳೆ. ಅಂದರೆ ‘ಮಲ್ಲಯ್ಯ ಮಲ್ಲಯ್ಯ’ ಎಂದು ಜೋರಾಗಿ ಹೇಳಲು ಶುರು ಮಾಡುತ್ತಾಳೆ. ಇದನ್ನು ಕಂಡು ಅಲ್ಲಿದ್ದ ಒಬ್ಬ ವ್ಯಕ್ತಿ ತನ್ನ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುತ್ತಾನೆ. ಆದರೆ ಅಲ್ಲಿ ಎಷ್ಟೋ ಜನ ಇದ್ದರು ಸಹ ಆ ಮಹಿಳೆಯ ಸಹಾಯಕ್ಕೆ ಹೋಗಲಿಲ್ಲ. ಏಕೆಂದರೆ ಆ ಹಾವಿನ ಹೆಡೆಯನ್ನು ನೋಡಿಯೇ ಹೆದರಿಕೆ ಬರುತ್ತದೆ. ಆದರೆ ಈ ಮಹಿಳೆ ಶರೀರದ ಮೇಲೆ ಈ ಹಾವು ಸುಮಾರು ಅರ್ಧ ಗಂಟೆಯ ವರೆಗೆ ಹಾಗೆ ಹೆಡೆ ತಗೆದು ನಿಂತಿತ್ತು. ದೈವ ಭಕ್ತಿಯೊ ಅಥವಾ ಆ ಮಹಿಳೆಯೇ ಕರ್ಮದ ಫಲವೋ ಗೊತ್ತಿಲ್ಲ, ಆದರೆ ಆ ಮಹಿಳೆಗೆ ಈ ಹಾವು ಯಾವುದೇ ಪ್ರಕಾರದ ಹಾನಿಯುಂಟು ಮಾಡಿಲ್ಲ. ಸುಮಾರು ಅರ್ಧ ಗಂಟೆಯ ನಂತರ ಈ ಹಾವು ತನ್ನಷ್ಟಕ್ಕೆ ತಾನೇ ಹೊರಟು ಹೋಗಿದೆ ಅಂತ ಸುದ್ಧಿ ಮೂಲಗಳಿಂದ ತಿಳಿದು ಬಂದಿದೆ.

ವಿಡಿಯೋ ನೋಡಿ.

ಈ ಘಟನೆ ನಮ್ಮ ರಾಜ್ಯದ ಕಲಬುರ್ಗಿ ಜಿಲ್ಲೆಯ ತಾಲೂಕಿನ ಅಫಜಲಪುರ ತಾಲ್ಲೂಕಿನ ಮಲ್ಲಾಬಾದಿ ಎಂಬ ಊರಲ್ಲಿ ನಡೆದಿದೆ. ಈ ಮಹಿಳೆಯ ಕೂಗು ಕೇಳಿದರೆ ಮಲ್ಲಯ್ಯ ಕಾಪಾಡು ಅಂತ ಕೂಗುತ್ತಿದ್ದಾಳೆ. ಹೀಗಾಗಿ ಈ ವಿಡಿಯೋ ನಮ್ಮ ರಾಜ್ಯದಲ್ಲಿಯದ್ದೇ ಆಗಿದ್ದು. ಇದು ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ.