ಯಾರು ಈ ಬೆಡಗಿ..? ಇವಳಿಗಾಗಿ ತಮ್ಮ ಸಂಪತ್ತನ್ನೆಲ್ಲ ಮಾರಲು ತಯಾರಿದ್ದಾರೆ ಜನ!

ತಾನು ಸುಂದರವಿರಬೇಕು, ಆಕರ್ಷಕವಿರಬೇಕು ಎಂದು ಎಲ್ಲರಿಗೂ ಅನಿಸುತ್ತದೆ. ಪ್ರತಿಯೊಬ್ಬರಿಗೂ ನೋಡುವವರ ಕಣ್ಣಿಗೆ ನಾನೇ ಸುಂದರವಾಗಿ ಕಾಣಬೇಕೆನ್ನುವ ಹಂಬಲ ಇದ್ದೇ ಇರುತ್ತದೆ. ಜಗತ್ತಿನಲ್ಲಿ ಸುಂದರ ಸ್ತ್ರೀ ಪುರುಷರ ಸಂಖ್ಯೆಯೇನು ಕಡಿಮೆಯಿಲ್ಲ. ಆಧುನಿಕ ಜಗತ್ತಿನಲ್ಲಿ ಜನರು ತಮ್ಮ ಲೈಫ್ ಸ್ಟೈಲ್ ಬಗ್ಗೆ ತುಂಬಾ ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ.

ವಿಶೇಷವಾಗಿ ಇದರಲ್ಲಿ ಮಹಿಳೆಯರು ತಮ್ಮ ಫಿಗರ್ ಮೆಂಟೇನ್ ಮಾಡುವದರಲ್ಲಿ ಹೆಚ್ಚಿಗೆ ಗಮನ ಹರಿಸುತ್ತಾರೆ. ಮುಂಜಾನೆ ಬೇಗ ಎದ್ದು ವಾಕಿಂಗ್, ರನ್ನಿಂಗ್, ಏರೋಬಿಕ್ಸ್, ಯೋಗಾ ಅಂತೆಲ್ಲ ಹೀಗೆ ಬೇರೆ ಬೇರೆ ಪ್ರಕಾರದ ವ್ಯಾಯಾಮ ಮಾಡುತ್ತಾರೆ. ಹುಡುಗಿಯರಿಗೂ ಸಹಿತ ತೆಳ್ಳನೆಯ ಸುಪುಷ್ಟವಾದ ಹುಡುಗರೇ ಹಿಡಿಸುತ್ತಾರೆ. ತನ್ನ ಸೌಂದರ್ಯದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಕೇಳುವದು ಪ್ರತಿಯೊಬ್ಬರಿಗೆ ಅಪ್ಯಾಯಮನವೆನಿಸುವದು. ತನ್ನ ಸೌಂದರ್ಯ ತನಗೆ ಮೆಚ್ಚಿಗೆಯಾಗುತ್ತಿದ್ದರೆ ಅದರ ಸಂತೋಷವನ್ನು ಪಡೆಯುವ ಹಕ್ಕೂ ಸಹಿತ ಆ ವ್ಯಕ್ತಿಗೆ ಇದೆ. ಅದರಲ್ಲೂ ಸ್ತ್ರೀಯರಿಗೆ ಇರುವ ಸೌಂದರ್ಯ ಪುರುಷರ ಮೇಲೆ ಅಧಿರಾಜ್ಯ ಮಾಡಲು ಕೊಟ್ಟ ದೇವರ ವರದಾನವೇನೋ ಅಂತ ಎನಿಸುವದು.

ನಾವಿಲ್ಲಿ ಹೇಳುವ ಹುಡುಗಿ ಪ್ಲಸ್ ಸೈಜ್ ಮಹಿಳೆಯರಲ್ಲಿ ಇಲ್ಲಿಯವರೆಗಿನ ಎಲ್ಲಕ್ಕೂ ಸುಂದರ ಮತ್ತು ಬೋಲ್ಡ್ ಹುಡುಗಿಯಂದು ಪರಿಗಣಿಸಲಾಗಿದೆ. ಹಾಗಾದ್ರೆ ಯಾರಿವಳು ನೋಡೋಣ್ವಾ?

ನಾವು ಯಾವ ಹುಡುಗಿಯ ಬಗ್ಗೆ ಉಲ್ಲೇಖಿಸುತ್ತಿದ್ದೇವೆಯೋ, ಆ ಹುಡುಗಿಯ ಜನ್ಮ 1990 ರಲ್ಲಿ ಇಂಗ್ಲೆಂಡಿನಲ್ಲಿ ಆಗಿದೆ. ಈಕೆಯ ಹೆಸರು ಇಸ್ಕ್ರಾ ಲಾರೆನ್ಸ್ ಇದ್ದು ಈಕೆ ತನ್ನ ಸುಂದರವಾದ ಶರೀರ ಸೌಷ್ಠವದ ಕಾರಣದಿಂದ ಜಗತ್ತಿನ ತುಂಬ ಪ್ರಸಿದ್ಧಿ ಪಡೆದಿದ್ದಾಳೆ.

ಇವಳು ಸಾಧಾರಣ ಹುಡುಗಿಯಾಗಿರದೆ ಸೂಪರ್ ಮಾಡಲ್ ಆಗಿದ್ದಾಳೆ. ಹೀಗಾಗಿ ಅವಳ ಪ್ರಸಿದ್ಧಿ ಮತ್ತು ಆಕೆಯ ಕ್ರೇಜ್ ಎಲ್ಲೆಡೆಯೂ ಇದೆ. ಆದರೆ ಅವಳ ಜೀವನದ ಬಗ್ಗೆ ಇರುವ ಕೆಲವು ತತ್ವಗಳು ತುಂಬಾ ಬೇರೆಯಾಗಿವೆ. ಈಕೆ ಪ್ಲಸ್ ಸೈಜ್ ಮಾಡಲ್ ಇದ್ದರೂ ಆಕೆಯ ಸೌಂದರ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಈಕೆ ತನ್ನ ಆಕರ್ಷಕ ಸುಪುಷ್ಟವಾದ ದೇಹ ಮತ್ತು ಸೌಂದರ್ಯದಿಂದ ದೊಡ್ಡ ದೊಡ್ಡ ಮಾಡೆಲ್ ಗಳಿಗೆ ಹಿಂದಿಕ್ಕಿದ್ದಾಳೆ.

ಲಾರೆನ್ಸ್ ಳು ಸೋಶಿಯಲ್ ಮೀಡಿಯಾ ಸೈಟ್ ಇನ್ಸ್ಟಾಗ್ರಾಮ್ ನಲ್ಲಿ ಯಾವತ್ತೂ ಎಕ್ಟಿವ್ ಆಗಿರುತ್ತ ಸತತವಾಗಿ ತನ್ನ ಬೋಲ್ಡ್ ಮತ್ತು ಸುಂದರ ಫೋಟೋಗಳನ್ನು ಅಭಿಮಾನಿಗಳಿಗಾಗಿ ಶೇರ್ ಮಾಡುತ್ತಿರುತ್ತಾಳೆ. ಈಕೆ ಶೇರ್ ಮಾಡಿದ ಫೋಟೋಗಳು ಕೆಲವೇ ಕ್ಷಣಗಳಲ್ಲಿ ವೈರಲ್ ಆಗುತ್ತವೆ. ಈಕೆಗೆ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾವಧಿ ಫಾಲೋವರ್ಸ್ ಗಳಿದ್ದಾರೆ. ಇವಳು ಸೈಜ್ 14 ಮಾಡೆಲ್ ಇದ್ದಾಳೆ.

ಮಾಡೆಲಿಂಗ್ ವ್ಯತಿರಿಕ್ತ ಅವಳು ಒಂದು ಮ್ಯಾನೇಜಿಂಗ್ ಎಡಿಟರ್ ಸಹಿತ ಇದ್ದಾಳೆ. ಲಾರೆನ್ಸ್ ಹೇಳುವ ಪ್ರಕಾರ ಅವಳು ಯಾವ ಫೋಟೋವನ್ನು ಎಡಿಟ್ ಮಾಡುವದಿಲ್ಲವಂತೆ. ತನ್ನ ಫೋಟೋಗಳಿಗೆ ಬರೀ ಫಿಲ್ಟರ್ ಮಾಡಿ ಅಪ್ ಲೋಡ್ ಮಾಡುತ್ತಾಳಂತೆ.

ಮೊದಲು ಜನ ಅವಳ ಫೋಟೋ ನೋಡಿ ತಮಾಷೆ ಮಾಡುತ್ತಿದ್ದರಂತೆ, ಬಾಡಿ ಶೇಮಿಂಗ್ ಸಹ ಮಾಡುತ್ತಿದ್ದರಂತೆ. ಮೊದಮೊದಲು ಮನಸ್ಸಿಗೆ ನೋವಾಗುತ್ತಿತ್ತು, ಕ್ರಮೇಣವಾಗಿ ಜನರ ಕಾಮೆಂಟ್ಸ್ ಗಳಿಗೆ ಗಂಭೀರತೆಯಿಂದ ತೆಗೆದುಕೊಳ್ಳುವದನ್ನು ಬಿಟ್ಟುಬಿಟ್ಟೆ.

ಈಗ ಫೋಟೋ ಶಾಪ್ ಸಹಾಯವಿಲ್ಲದೆ ಬಿಂದಾಸ್ ಆಗಿ ಫೋಟೋಗಳನ್ನು ತನ್ನ ಅಭಿಮಾನಿಗಳಿಗಾಗಿ ಅಪ್ ಲೋಡ್ ಮಾಡುತ್ತಿರುತ್ತಾಳೆ. ಲಾರೆನ್ಸ್ ತನ್ನ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ತೆಗೆದುಕೊಳ್ಳುವಳು. ಇತ್ತಿತ್ತಲಾಗಿ ತನ್ನ ಅಭಿಮಾನಿಗಳಿಗೆ ಆರೋಗ್ಯದ ಬಗ್ಗೆ ಟಿಪ್ಸ್ ಸಹ ಕೊಡುತ್ತಿದ್ದಾಳೆ.

ನೀವೂ ಸಹಿತ ಒಮ್ಮೆ ಈ ಸುಂದರವಾಗಿ ಕಾಣುವ ಮಾಡೆಲ್ ಳ ಫೋಟೋಗಳನ್ನು ವೀಕ್ಷಿಸಿ, ಯಾಕೆಂದರೆ, ಪ್ಲಸ್ ಸಾಯಿಜ್ ಮಾಡೆಲ್ ಇದ್ದರೂ ಈಕೆಯಂತಹ ಮಹಿಳೆಯರಿಗೆ ಇಸ್ಕ್ರಾ ಲಾರೆನ್ಸ್ ಪ್ರೇರಣೆಯಾಗಿದ್ದಾಳೆ. ಜಗತ್ತಿಗೆ ಪ್ಲಸ್ ಸಾಯಿಜ್ ಮಹಿಳೆಯರು ಸಹಿತ ತುಂಬಾ ಸುಂದರವಾಗಿರುತ್ತಾರೆ ಎಂದು ಪ್ಲಸ್ ಸೈಜ್ ಮಹಿಳೆಯರಿಗೆ ಸಂದೇಶ ಕೊತ್ತಿದ್ದಾಳೆ.